ಯಲಹಂಕ: ಡೇಟಿಂಗ್ ವೆಬ್ಸೈಟ್ನಲ್ಲಿ ಕಾಲ್ ಗರ್ಲ್ಗೆ ಫೋನ್ ಮಾಡಿದ ಚಾಲಕನೋರ್ವ ಆಕೆಯ ಬಣ್ಣದ ಮಾತುಗಳಿಗೆ ಮರುಳಾಗಿ 19 ಸಾವಿರ ರೂಪಾಯಿ ಕಳೆದುಕೊಂಡಿದ್ದಾನೆ.
ಯಲಹಂಕದಲ್ಲಿ ಚಾಲಕ ವೃತ್ತಿ ಮಾಡುತ್ತಿರುವ ಸುರೇಶ್ (ಹೆಸರು ಬದಲಾಯಿಸಲಾಗಿದೆ) ಡೇಟಿಂಗ್ ವೆಬ್‌ಸೈಟ್ ನೋಡುವಾಗ ಕಾಲ್ ಗರ್ಲ್ ನಂಬರ್ ಸಿಕ್ಕಿ ಚಾಟ್ ಮಾಡಿದ್ದಾನೆ. ಆಕೆ ಮಾದಕ ಫೋಟೋಗಳನ್ನು ಕಳುಹಿಸಿದ್ದಾಳೆ. ಚಾಲಕ ಒಂದು ರಾತ್ರಿಗೆ ಹುಡುಗಿಯನ್ನು ಬುಕ್ ಮಾಡಿದ್ದಾನೆ.
ಫೋನ್ ಪೇ ಮೂಲಕ 5 ಸಾವಿರ ರೂ. ಹಣವನ್ನೂ ಕಳುಹಿಸಿದ್ದಾನೆ. ಮತ್ತೆ ಕರೆ ಮಾಡಿದ ಕಾಲ್ ಗರ್ಲ್ ಯಲಹಂಕದಲ್ಲಿನ ಹೊಟೇಲ್ ಬಳಿಗೆ ಬರುವಂತೆ ಸೂಚಿಸಿದ್ದಳು. ಹೊಟೇಲ್ ಬಳಿಗೆ ಬರಲು ತನಗೆ ಸೆಕ್ಯೂರಿಟಿ ಬೇಕಿದ್ದು, ಸೆಕ್ಯೂರಿಟಿಗಾಗಿ 4,500 ರೂ. ಪಾವತಿಸುವಂತೆ ಹೇಳಿದ್ದಾಳೆ. ಮತ್ತೆ 4,500 ರೂಪಾಯಿಯನ್ನು ಫೋನ್ ಪೇ ಮೂಲಕ ಕಳುಹಿಸಿದ್ದಾನೆ. ಹಣ ಕ್ರೆಡಿಟ್ ಆದ ನಂತರ ಮತ್ತೆ ಕರೆ ಮಾಡಿದ ಕಾಲ್ ಗರ್ಲ್ ನಿಮಗೆ ಸೆಕ್ಯೂರಿಟಿ ನೀಡಲು 4,500 ಪಾವತಿಸುವಂತೆ ಹೇಳಿದ್ದಾಳೆ. ಅವಳ ಮಾತು ನಂಬಿ ಮತ್ತೆ 4,500 ರೂಪಾಯಿ ಫೋನ್ ಪೇ ಮೂಲಕ ಕಳುಹಿಸಿದ್ದಾನೆ.