ಬೆಂಗಳೂರು: ಮಾರುತಿ ಸುಜುಕಿ ರಿಟ್ಸ್ ಕಾರೊಂದರ ಬ್ರೇಕ್ ಫೇಲ್ ಆದ ಕಾರಣ 4 ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿರುವ ಘಟನೆ ನಡೆದಿದೆ.
ಬ್ರೇಕ್ ಫೇಲ್: ನಾಲ್ಕು ಕಾರುಗಳ ನಡುವೆ ಸರಣಿ ಅಪಘಾತ
ಬೆಂಗಳೂರು ಹೊರವಲಯದ ನವಯುಗ ಟೋಲ್ನಿಂದ ಗೊರಗುಂಟೆಪಾಳ್ಯ ಮಧ್ಯೆಯಿರುವ ಫ್ಲೈಓವರ್ ಮೇಲೆ ಚಲಿಸುತ್ತಿದ್ದ ಮಾರುತಿ ಸುಜುಕಿ ರಿಟ್ಸ್ ಕಾರೊಂದರ ಬ್ರೇಕ್ ಫೇಲ್ ಆದ ಪರಿಣಾಮ ನಾಲ್ಕು ಕಾರುಗಳ ನಡುವೆ ಡಿಕ್ಕಿ ಸಂಭವಿಸಿದೆ.
ಬ್ರೇಕ್ ಫೇಲ್: ನಾಲ್ಕು ಕಾರುಗಳ ನಡುವೆ ಸರಣಿ ಅಪಘಾತ
ಬೆಂಗಳೂರು ಹೊರವಲಯದ ನವಯುಗ ಟೋಲ್ ಹಾಗೂ ಗೊರಗುಂಟೆಪಾಳ್ಯ ಮಧ್ಯೆಯಿರುವ ಫ್ಲೈಓವರ್ ಮೇಲೆ ಚಲಿಸುತ್ತಿದ್ದ ಮಾರುತಿ ಸುಜುಕಿ ರಿಟ್ಸ್ ಕಾರೊಂದರ ಬ್ರೇಕ್ ಫೇಲ್ ಆದ ಪರಿಣಾಮ ನಾಲ್ಕು ಕಾರುಗಳ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ವಾಹನಗಳಿಗೆ ಸಣ್ಣ-ಪುಟ್ಟ ಹಾನಿಯಾಗಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ.
ಸರಣಿ ಅಪಘಾತದಿಂದಾಗಿ ಫ್ಲೈಓವರ್ ಮೇಲೆ 2 ಕಿಮೀ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಯಿತು. ಬಳಿಕ ಮಾರುತಿ ಸುಜುಕಿ ರಿಟ್ಸ್ ಕಾರನ್ನು ಪೀಣ್ಯ ಸಂಚಾರಿ ಪೊಲೀಸ್ ಠಾಣೆಗೆ ಸ್ಥಳಾಂತರ ಮಾಡಲಾಗಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.