ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿ ಹೆಚ್ಚಳ ಕಂಡ ಕೋವಿಡ್​ ಗುಣಮುಖರ ಸಂಖ್ಯೆ : 9319 ಸೋಂಕಿತರು ಪತ್ತೆ, 9575 ಜನ ಡಿಸ್ಚಾರ್ಚ್​​​​

ರಾಜ್ಯದಲ್ಲಿ ಇಂದು 9,575 ಜನರ ಗುಣಮುಖರಾಗಿದ್ದು 9319 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಇಂದಿನ ಹೊಸ ಪ್ರಕರಣಗಳ ಸಂಖ್ಯೆಗೆ ಹೊಲಿಸಿದರೆ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿರುವುದು ರಾಜ್ಯದ ಜನತೆಯಲ್ಲಿ ನೆಮ್ಮದಿ ಮೂಡಿಸಿದೆ.

9319-new-corona-cases-found-in-karnataka
ಕರ್ನಾಟಕ ಕೊರೊನಾ ವರದಿ

By

Published : Sep 6, 2020, 8:25 PM IST

ಬೆಂಗಳೂರು: ರಾಜ್ಯದಲ್ಲಿ ಇಂದು 9319 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ದಾಖಲೆ ಮೀರಿ 9,575 ಜನರು ಗುಣಮುಖರಾಗಿದ್ದಾರೆ.

ಅಲ್ಲದೆ ಕಳೆದ 14 ದಿನಗಳಲ್ಲಿ ಪತ್ತೆಯಾದ ಸೋಂಕಿತರ ಸಂಪರ್ಕದಲ್ಲಿ 10,90,165 ಮಂದಿ ದ್ವಿತೀಯ ಸಂಪರ್ಕಿತರು, 7,859,59 ಪ್ರಾಥಮಿಕ ಸಂಪರ್ಕಿತರಿದ್ದರು ಕಂಡು ಬಂದಿದೆ. ರಾಜ್ಯದಲ್ಲಿ ಸುಮಾರು 4,94,505 ಜನರು‌ ಹೋಂ ಕ್ವಾರಂಟೈನ್​​​ನಲ್ಲಿ ಇದ್ದಾರೆ.

ಇಷ್ಟು ದಿನ ನೂರರ ಗಡಿದಾಟುತ್ತಿದ್ದ ಮೃತ ಸಂಖ್ಯೆ ಇಂದು 95 ಇಳಿದಿದೆ. ಈ ಮೂಲಕ ಒಟ್ಟು 6393 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಅನ್ಯ ಕಾರಣಕ್ಕೆ 19 ಜನರು ಮೃತರಾಗಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 3,98,551 ಜನರಿಗೆ ಸೋಂಕು ತಗುಲಿದ್ದರೆ 99,266 ಸಕ್ರಿಯ ಪ್ರಕರಣಗಳು ಬಾಕಿ ಇವೆ. 775 ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 33,48,255 ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾರೆ.

ಬೆಂಗಳೂರಿನಲ್ಲಿ 38 ಜನರು ಬಲಿ : 2824 ಜನರಿಗೆ ಸೋಂಕು ದೃಢ

ಮಹಾನಗರದಲ್ಲಿ ಇಂದು 2824 ಜನರಿಗೆ ಸೋಂಕು ತಗಲಿದ್ದು, 4540 ಜನರು‌ ಗುಣಮುಖರಾಗಿದ್ದಾರೆ. ಒಟ್ಟು 14,75,81 ಸೋಂಕಿತರ ಪೈಕಿ 10,56,92, ಬಿಡುಗಡೆಯಾಗಿದ್ದಾರೆ. 39,725 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಇಂದು 38 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 2163ಕ್ಕೆ ಏರಿಕೆಯಾಗಿದೆ.

ABOUT THE AUTHOR

...view details