ಕರ್ನಾಟಕ

karnataka

ETV Bharat / city

ಅಗ್ನಿಶಾಮಕ ಇಲಾಖೆಯಲ್ಲಿ 8 ಸಿಬ್ಬಂದಿಗೆ ಕೊರೊನಾ ದೃಢ! - ಬೆಂಗಳೂರು ಕೋವಿಡ್​

ಬೆಂಗಳೂರು ದಕ್ಷಿಣ ವಿಭಾಗದ ಫೈರ್ ಸ್ಟೇಷನ್​ನ ಆರ್​ಎಫ್ ಸೇರಿ 6 ಮಂದಿ ಸೋಂಕಿಗೆ ತುತ್ತಾಗಿದ್ದಾರೆ‌. ಉತ್ತರ ವಿಭಾಗದ ಫೈರ್ ಸ್ಟೇಷನ್​ನ ಓರ್ವ ಸಿಬ್ಬಂದಿ ಹಾಗೂ ಆತನ ಪತ್ನಿಗೂ ಕೊರೊನಾ ಪಾಸಿಟಿವ್ ಬಂದಿದ್ದು, ಸೋಂಕಿತರ ಸಂಖ್ಯೆ 8ಕ್ಕೇರಿದೆ‌.

corona
ಕೊರೊನಾ

By

Published : Jul 21, 2020, 3:03 PM IST

ಬೆಂಗಳೂರು:ಕೊರೊನಾ ಸೋಂಕಿಗೆ ತುತ್ತಾಗಿರುವ ನಗರವನ್ನು ನಿತ್ಯ ಸ್ಯಾನಿಟೈಸ್ ಮಾಡಿ ನಗರವನ್ನು ಕ್ಲೀನ್ ಸಿಟಿಯಾಗಿ ರೂಪಿಸುವ ಜವಾಬ್ದಾರಿಯನ್ನು ಹೊತ್ತ ಅಗ್ನಿಶಾಮಕ ಇಲಾಖೆಯಲ್ಲಿ ಮತ್ತೆ ಕೊರೊನಾ ಸ್ಫೋಟಗೊಂಡಿದೆ.

ಒಟ್ಟು 8 ಸಿಬ್ಬಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ದಕ್ಷಿಣ ವಿಭಾಗದ ಫೈರ್ ಸ್ಟೇಷನ್​ನ ಆರ್​ಎಫ್ ಸೇರಿ 6 ಮಂದಿ ಸೋಂಕಿಗೆ ತುತ್ತಾಗಿದ್ದಾರೆ‌. ಉತ್ತರ ವಿಭಾಗದ ಫೈರ್ ಸ್ಟೇಷನ್​ನ ಒಬ್ಬ ಸಿಬ್ಬಂದಿ ಹಾಗೂ ಆತನ ಪತ್ನಿಗೂ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 8ಕ್ಕೇರಿದೆ‌. ಸದ್ಯ ಈ ಸೋಂಕಿತರು ರಾಜಾಜಿನಗರದ ಅಗ್ನಿಶಾಮಕ ವಸತಿಗೃಹದಲ್ಲಿ ವಾಸವಿದ್ದು, ವಸತಿಗೃಹದ ಇತರರಿಗೆ ಆತಂಕ ಸೃಷ್ಟಿಯಾಗಿದೆ.

ಮತ್ತೊಂದೆಡೆ ಅಗ್ನಿಶಾಮಕ ಇಲಾಖಾಧಿಕಾರಿಗಳು, ನಿತ್ಯ ಸ್ಯಾನಿಟೈಸ್ ಮಾಡಲು ತೆರಳುವ ವೇಳೆ ‌ಮುಂಜಾಗೃತಾ ಕ್ರಮ ಕೈಗೊಳ್ಳಿ ಎಂದು ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದ್ದಾರೆ.

ABOUT THE AUTHOR

...view details