ದೇವನಹಳ್ಳಿ :ಸರ್ಕಾರಿ ಬಾಲಕರ ಪರಿವೀಕ್ಷಣಾಲಯದಲ್ಲಿದ್ದ ಕಾನೂನು ಸಂಘರ್ಷಕ್ಕೊಳಪಟ್ಟ ಏಳು ಬಾಲಕರು ಹೋಮ್ ಗಾರ್ಡ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ದೇವನಹಳ್ಳಿ ಪಟ್ಟಣದ ಪ್ರಶಾಂತ ನಗರದಲ್ಲಿರುವ ಪರಿವೀಕ್ಷಣಾಲಯದಲ್ಲಿ ಜನವರಿ 25ರಂದು ರಾತ್ರಿ 7 ಗಂಟೆಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಹೋಮ್ ಗಾರ್ಡ್ ಪ್ರತಾಪ್ ಜಿ ಹಲ್ಲೆಗೆ ಒಳಗಾಗಿದ್ದಾರೆ.
ಪ್ರತಾಪ್ ಅವರು ಪರಿವೀಕ್ಷಣಾಲಯದಲ್ಲಿ ಬಾಲಕರನ್ನ ಊಟ ತಿಂಡಿಗೆ ಬಿಟ್ಟು ನಂತರ ರೂಮ್ಗೆ ಕಳಿಸಿ ಲಾಕ್ ಮಾಡುವ ಕೆಲಸ ಮಾಡುತ್ತಿದ್ದರು. ಜನವರಿ 25ರ ರಾತ್ರಿ ಊಟದ ನಂತರ 5 ಬಾಲಕರು ರೂಮ್ಗೆ ಹೋಗುವಂತೆ ಹೇಳಿದ್ದಾಗ ಗಲಾಟೆ ಮಾಡಿ, ಪ್ರತಾಪ್ ತಲೆಗೆ ತೂಕ ಹಾಕುವ ಕಬ್ಬಿಣದ ಕೆಜಿ ಕಲ್ಲಿನಿಂದ ಹೊಡೆದಿದ್ದಾರೆ. ನಂತರ ಹೋಮ್ ಗಾರ್ಡ್ನಿಂದ ಕೀ ತೆಗೆದುಕೊಂಡು ಪರಾರಿಯಾಗಿದ್ದಾರೆ, ಇವರ ಜೊತೆ ಮತ್ತಿಬ್ಬರು ಬಾಲಕರು ಸಹ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿದ್ದ ವಿವಾಹಿತನಿಗೆ 10 ವರ್ಷ ಜೈಲುಶಿಕ್ಷೆ!
ಈ ಸಂಬಂಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಇಬ್ಬರು ಬಾಲಕರ ಪತ್ತೆ ಮಾಡಿ ಪರಿವೀಕ್ಷಣಾಲಯಕ್ಕೆ ಮರಳಿ ಕಳುಹಿಸಲಾಗಿದೆ.