ಬೆಂಗಳೂರು: ರಾಜ್ಯದಲ್ಲಿಂದು 6,955 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 10,55,040 ಕ್ಕೆ ಏರಿಕೆ ಆಗಿದೆ.
ರಾಜ್ಯದಲ್ಲಿಂದು 6,955 ಮಂದಿಗೆ ಸೋಂಕು ದೃಢ: 36 ಜನ ಬಲಿ - ಇಂದಿನ ಕರ್ನಾಟಕ ಕೊರೊನಾ ವರದಿ
ಕೋವಿಡ್ ಎರಡನೇ ಅಲೆ ಜೋರಾಗಿದ್ದು, ರಾಜ್ಯದಲ್ಲಿಂದು 6,955 ಜನ ಸೋಂಕಿತರು ಪತ್ತೆಯಾಗಿದ್ದು, 36 ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 10,55,040 ಕ್ಕೆ ಏರಿಕೆಯಾಗಿದೆ.
ಕರ್ನಾಟಕ ಕೋವಿಡ್ ವರದಿ
36 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 12,849ಕ್ಕೆ ಏರಿದೆ. 3359 ಮಂದಿ ಗುಣಮುಖರಾಗಿದ್ದು 9,80,519 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಇತ್ತ ಮತ್ತೆ ಸಕ್ರಿಯ ಪ್ರಕರಣಗಳು 61,653ಕ್ಕೆ ಏರಿದ್ದು 405 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡವಾರು 7.04 ರಷ್ಟು ಇದ್ದರೆ ಮೃತ ಪಟ್ಟವರ ಪ್ರಮಾಣ ಶೇ. 0.51 ರಷ್ಟಿದೆ.