ಬೆಂಗಳೂರು: ಇನ್ಫೋಸಿಸ್ ಫೌಂಡೇಶನ್ (Infosys Foundation) ವತಿಯಿಂದ ಜಯದೇವ ಹೃದ್ರೋಗ ಆಸ್ಪತ್ರೆಯ (Jayadeva hospital ) ಆವರಣದಲ್ಲಿ ನಿರ್ಮಾಣವಾಗಿರುವ 350 ಹಾಸಿಗೆಗಳ ಸಾಮರ್ಥ್ಯದ ನೂತನ ಕಟ್ಟಡ (ಇನ್ಫೋಸಿಸ್ ಬ್ಲಾಕ್) ಅನ್ನು ಇಂದು ಸಿಎಂ ಬಸವರಾಜ ಬೊಮ್ಮಾಯಿ (Karnataka Chief Minister Basavaraj Bommai) ಉದ್ಘಾಟನೆ ಮಾಡಲಿದ್ದಾರೆ.
ಹೊಸ ಕಟ್ಟಡವನ್ನು 103 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಮೂಲಕ ಜಯದೇವ, ದಕ್ಷಿಣ ಏಷ್ಯಾದ ಅತಿ ದೊಡ್ಡ ಹೃದ್ರೋಗ ಆಸ್ಪತ್ರೆಯಾಗಿ ಹೊರಹೊಮ್ಮಲಿದೆ. ಹೃದಯದ ಚಿಕಿತ್ಸೆಯ ತುರ್ತು ಸ್ಥಿತಿಗಳು ಮತ್ತು ಹೃದಯ ಆರೈಕೆಗಾಗಿ ನಿತ್ಯ ಹೆಚ್ಚುತ್ತಿರುವ ಪ್ರಕರಣಗಳನ್ನು ನಿರ್ವಹಿಸಲು ಈ ನೂತನ ಕಟ್ಟಡ ನೆರವಾಗಲಿದೆ.
ಇದನ್ನೂ ಓದಿ:ಸೂಸೈಡ್ ಬಾಂಬರ್ಗಳ ದಾಳಿಗೆ 3 ಸಾವು: ದಾಳಿ ಹೊಣೆ ಹೊತ್ತ ಐಸಿಸ್