ಬೆಂಗಳೂರು:ಶಾಲೆಗೆ ರಜೆ ಇದೆ. ಸ್ವಲ್ಪ ಹೊತ್ತು ಆಟ ಆಡಲಿ ಎಂದು ಹೊರಗೆ ಕಳಿಸುವ ಪೋಷಕರೇ ಸ್ವಲ್ಪ ಎಚ್ಚರಿಕೆಯಿಂದ ಇರಿ. ಏಕೆಂದರೆ ಕೊರೊನಾ ಯಾವಾಗ? ಹೇಗೆ? ಯಾರಿಂದ ಸೋಂಕು ತಗುಲುತ್ತದೆ ಎಂದು ಹೇಳಲು ಆಗಲ್ಲ.
ಪೋಷಕರೇ ಹುಷಾರ್!... ವಾರದಲ್ಲಿ 150 ಮಕ್ಕಳಿಗೆ ಕೊರೊನಾ ಸೋಂಕು
ಒಂದು ವಾರದಲ್ಲಿ 150ಕ್ಕೂ ಅಧಿಕ ಮಕ್ಕಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಮಕ್ಕಳನ್ನು ಹೊಂದಿರುವ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ.
ಕೊರೊನಾ ಸೋಂಕು
ಮಕ್ಕಳ ಮೇಲೆ ಸ್ವಲ್ಪ ಹೆಚ್ಚಾಗಿಯೇ ಕಾಳಜಿ ಇರಬೇಕಾಗುತ್ತದೆ. ಏಕೆಂದರೆ, ಈ ವರದಿ ನೋಡಿದರೆ ನಿಮ್ಮ ಎದೆಬಡಿತ ಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ. ಹತ್ತು ವರ್ಷದೊಳಗಿನ ಮಕ್ಕಳನ್ನು ಕೊರೊನಾ ವೈರಸ್ ಹೆಚ್ಚಾಗಿ ಕಾಡುತ್ತಿದೆ. ದಿನದಿಂದ ದಿನಕ್ಕೆ ಮಕ್ಕಳಲ್ಲಿ ಸೋಂಕು ಹೆಚ್ಚಾಗುತ್ತಿದ್ದು, ಒಂದೇ ವಾರದಲ್ಲಿ 150ಕ್ಕೂ ಹೆಚ್ಚು ಮಕ್ಕಳಿಗೆ ಪಾಸಿಟಿವ್ ಬಂದಿದೆ.
ದಿನಾಂಕ | ಎಷ್ಟು ಮಕ್ಕಳಿಗೆ ಸೋಂಕು |
ಜೂನ್ 27 | 14 |
ಜೂನ್ 28 | 23 |
ಜೂನ್ 30 | 20 |
ಜುಲೈ 01 | 19 |
ಜುಲೈ 02 | 31 |
ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಬಹುಬೇಗ ಹರಡಲಿದೆ. ಹೀಗಾಗಿ, ನಿಮ್ಮ ಮಕ್ಕಳನ್ನು ಕೊರೊನಾದಿಂದ ಕಾಪಾಡಿಕೊಳ್ಳುವುದು ನಿಮ್ಮದೇ ಜವಾಬ್ದಾರಿ. ಹಾಗಾದರೆ ಹೀಗೆ ಮಾಡಿ.
- ಮಕ್ಕಳ ಸುರಕ್ಷತೆ
- ಮಕ್ಕಳು ಮನೆಯಿಂದ ಹೊರಗೆ ಹೋಗದಂತೆ ಎಚ್ಚರ ವಹಿಸುವುದು
- ಮಕ್ಕಳ ಆರೋಗ್ಯದಲ್ಲಿ ಏರುಪೇರಾದರೆ ಗಮನಿಸುವುದು
- ಕೊರೊನಾ ಕುರಿತು ತಿಳುವಳಿಕೆ ನೀಡುವುದು
- ಮಾನಸಿಕ ಖಿನ್ನತೆಗೆ ಒಳಗಾದಂತೆ ಮಕ್ಕಳ ಜೊತೆಗೆ ನೀವೇ ಆಟವಾಡುವುದು
- ಸ್ವಚ್ಛತೆ ಬಗ್ಗೆ ಹೆಚ್ಚು ತಿಳಿಹೇಳುವುದು
- ಜಂಕ್ ಫುಡ್ ಆಹಾರದಿಂದ ದೂರವಿರಿಸುವುದು
- ಬಿಸಿ ನೀರು ಕುಡಿಯುವಂತೆ ಸಲಹೆ ನೀಡುವುದು