ಬೆಂಗಳೂರು: ಕುಟುಂಬ ರಾಜಕಾರಣ ರಾಜ್ಯದಲ್ಲಿ ಕೇವಲ ಜೆಡಿಎಸ್ಗೆ ಮಾತ್ರ ಸೀಮಿತವಾಗದೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ಸುತ್ತಿಕೊಂಡಿದೆ. ಪರಿಷತ್ನ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಗೆದ್ದ ಬರೋಬ್ಬರಿ 11 ಮಂದಿ ಅಭ್ಯರ್ಥಿಗಳಿಗೆ ರಾಜಕೀಯ ಕುಟುಂಬದ ಹಿನ್ನೆಲೆ ಇರುವುದು ಸಾಬೀತಾಗಿದೆ.
ರಾಜ್ಯದ 20 ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ನ 25 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕುಟುಂಬ ರಾಜಕಾರಣ ಹಿನ್ನೆಲೆಯದ್ದು ಈ ಬಾರಿ ದೊಡ್ಡ ಪಾಲಿದೆ. ಕಾಂಗ್ರೆಸ್ನಿಂದ- 6, ಬಿಜೆಪಿಯಿಂದ -3, ಜೆಡಿಎಸ್‌ನಿಂದ ಒಬ್ಬರು ಹಾಗೂ ಪಕ್ಷೇತರವಾಗಿ ಗೆದ್ದ ಒಬ್ಬ ಅಭ್ಯರ್ಥಿಗೆ ರಾಜಕೀಯ ಕುಟುಂಬದ ಹಿನ್ನೆಲೆ ಇದೆ. ಇದು ಒಬ್ಬರನ್ನೊಬ್ಬರು ಕುಟುಂಬ ರಾಜಕೀಯ ಎಂದು ಆರೋಪಿಸಿಕೊಳ್ಳುವ ಮೂರು ಪಕ್ಷಗಳ ರಾಜಕೀಯ ನಾಯಕರು ದ್ವಂದ್ವ ನೀತಿಗೆ ಹಿಡಿದ ಕೈಗನ್ನಡಿಯಾಗಿದೆ.
ಕುಟುಂಬ ರಾಜಕಾರಣದ ಹಿನ್ನೆಲೆಯಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳು:
- ಮಾಜಿ ಶಾಸಕ ಕೆ.ಎನ್. ರಾಜ ಪುತ್ರ ಆರ್.ರಾಜೇಂದ್ರ-ತುಮಕೂರು,
- ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಹೋದರ ಸಂಬಂಧಿ ಎಸ್. ರವಿ - ಬೆಂಗಳೂರು ಗ್ರಾಮಾಂತರ
- ಶಾಸಕಿ ಲಕ್ಷ್ಮಿ ಹೆಬ್ಬಾಳ್ವರ್ ಸಹೋದರ ಚನ್ನರಾಜು ಹಟ್ಟಿಹೊಳಿ- ಬೆಳಗಾವಿ
- ಮಾಜಿ ಸಚಿವ ಎಂ.ಬಿ.ಪಾಟೀಲ್ ಸೋದರ ಸುನೀಲ್ ಗೌಡ ಪಾಟೀಲ್ -ವಿಜಯಪುರ
- ಶಾಸಕ ಅಮರೇಗೌಡ ಪಾಟೀಲ್ ಸಹೋದರ ಶರಣಗೌಡ ಪಾಟೀಲ್ -ರಾಯಚೂರು
- ಶಾಸಕ ರಾಜಶೇಖರ ಪಾಟೀಲ್ ಅವರ ಸಹೋದರ ಭೀಮರಾವ್ ಬಿ. ಪಾಟೀಲ್-ಬೀದರ್
ಕುಟುಂಬ ರಾಜಕಾರಣದ ಹಿನ್ನೆಲೆಯಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗಳು:
- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್- ಹುಬ್ಬಳ್ಳಿ
- ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಪುತ್ರ ಡಿ.ಎಸ್. ಅರುಣ್ - ಶಿವಮೊಗ್ಗ
- ಶಾಸಕ ಅಪ್ಪಚ್ಚು ರಂಜನ್ ಸಹೋದರ ಸುಜಾ ಕುಶಾಲಪ್ಪ- ಮಡಿಕೇರಿ
ಕುಟುಂಬ ರಾಜಕಾರಣದ ಹಿನ್ನೆಲೆಯಲ್ಲಿ ಗೆದ್ದ ಜೆಡಿಎಸ್ ಅಭ್ಯರ್ಥಿ:
- ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಮೊಮ್ಮಗ, ಹೆಚ್.ಡಿ. ರೇವಣ್ಣನವರ ಪುತ್ರ ಸೂರಜ್ ರೇವಣ್ಣ -ಹಾಸನ