ಬಳ್ಳಾರಿ: ಜಿಲ್ಲೆಯ ಬಯಲು ರಂಗಮಂದಿರಕ್ಕೆನಾಡೋಜ ಸುಭದ್ರಮ್ಮ ಮನ್ಸೂರ್ ಅವರ ಹೆಸರಿಡಲು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮನವಿ ಪತ್ರ ಸಲ್ಲಿಲಾಯಿತು.
ಬಳ್ಳಾರಿಯ ಬಯಲು ರಂಗಮಂದಿರಕ್ಕೆ ದಿ. ಸುಭದ್ರಮ್ಮ ಮನ್ಸೂರ್ ಹೆಸರಿಡಲು ಆಗ್ರಹ - ಬಳ್ಳಾರಿ ಜಿಲ್ಲಾ ಕಲಾವಿದರ ವೇದಿಕೆ
ಬಳ್ಳಾರಿಯ ಬಯಲು ರಂಗಮಂದಿರಕ್ಕೆ ನಾಡೋಜ ಸುಭದ್ರಮ್ಮ ಮನ್ಸೂರ್ ಅವರ ಹೆಸರಿಡಲು ಬಳ್ಳಾರಿ ಜಿಲ್ಲಾ ಕಲಾವಿದರ ವೇದಿಕೆ ಮನವಿ ಮಾಡಿದೆ.
ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಇಂದು ಬಳ್ಳಾರಿ ಬಯಲು ರಂಗಮಂದಿರಕ್ಕೆ ನಾಡೋಜ ಸುಭದ್ರಮ್ಮ ಮನ್ಸೂರ್ ಅವರ ಹೆಸರಿಡಲು ಬಳ್ಳಾರಿ ಜಿಲ್ಲಾ ಕಲಾವಿದರ ವೇದಿಕೆ ಮನವಿ ಪತ್ರ ಸಲ್ಲಿಸಿತು.
ಈ ವೇಳೆ ಈಟಿವಿ ಭಾರತದೊಂದಿಗೆ ಮಾತನಾಡಿದ ಹಿರಿಯ ಕಲಾವಿದ ಕೆ.ಜಗದೀಶ್, ಹಿರಿಯ ರಂಗಭೂಮಿ ಕಲಾವಿದೆ ನಾಡೋಜ ಸುಭದ್ರಮ್ಮ ಮನ್ಸೂರ್ ಅವರು ವಿಧಿವಶರಾಗಿದ್ದಾರೆ. ಬಳ್ಳಾರಿಯ ಸಾಂಸ್ಕೃತಿಕ ಸಮುಚ್ಚಯದಲ್ಲಿರುವ ಬಯಲು ರಂಗಮಂದಿರಕ್ಕೆ ಇದುವರೆಗೂ ನಾಮಕರಣವಾಗಿಲ್ಲ. ಸುಭದ್ರಮ್ಮರ ಹೆಸರನ್ನು ಈ ಬಯಲು ರಂಗಮಂದಿರಕ್ಕೆ ಇಟ್ಟು, ಅವರ ನೆನಪನ್ನು ಚಿರಸ್ಥಾಯಿಯಾಗಿಸಬೇಕೆಂಬುದು ಜಿಲ್ಲೆಯ ಕಲಾವಿದರ ಆಗ್ರಹವಾಗಿದೆ ಎಂದರು.