ಬಳ್ಳಾರಿ: ತಾನೇ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್, ಚಾಲಕನಿಗೆ ಯಮನಾಗಿ ಬಂದಿರುವ ಘಟನೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಹೋಬಳಿ ವ್ಯಾಪ್ತಿಯ ಮಾಳಪುರ ರಸ್ತೆಯಲ್ಲಿ ನಡೆದಿದೆ.
ಹಸೆಮಣೆ ಏರಿದ ನಲವತ್ತೈದು ದಿನದಲ್ಲೇ ಮಸಣ ಸೇರಿದ ಟ್ರ್ಯಾಕ್ಟರ್ ಚಾಲಕ! - ಸಿರುಗುಪ್ಪ ಟ್ರ್ಯಾಕ್ಟರ್ ಅಪಘಾತ
ತಾನೇ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ ಅಡಿಗೆ ಬಿದ್ದು ಚಾಲಕ ಮೃತಪಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪದಲ್ಲಿ ನಡೆದಿದೆ. ಈ ಕುರಿತು ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಳಪುರ ರಸ್ತೆಯಲ್ಲಿರುವ ತಗ್ಗು- ದಿನ್ನೆಯ ರಸ್ತೆಯಲ್ಲಿ ಟ್ರ್ಯಾಕ್ಟರ್ನಲ್ಲಿ ಗರಸು ತುಂಬಿಕೊಂಡು ಚಾಲಕ ಬರುತ್ತಿದ್ದ. ಈ ವೇಳೆ ವೇಗ ನಿಯಂತ್ರಿಸಲಾಗದೆ ಮುಂದಿನ ಭಾಗದಲ್ಲಿರುವ ದೊಡ್ಡ ಚಕ್ರದಡಿ ಚಾಲಕ ಆಯತಪ್ಪಿ ಬಿದ್ದಿದ್ದಾನೆ. ವೇಗದಲ್ಲಿದ್ದ ಆ ಟ್ರ್ಯಾಕ್ಟರ್ ಚಾಲಕನ ಮೇಲೆ ಹಾದು ಹೋದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಸಿರುಗುಪ್ಪ ತಾಲೂಕಿನ ಶಾನವಾಸಪುರ ಗ್ರಾಮದ ಗಾದಿಲಿಂಗಪ್ಪ (24) ಮೃತ ಚಾಲಕ. ಈತ ಕಳೆದ ಜೂನ್ 16ರಂದು ಹಸೆಮಣೆ ಏರಿದ್ದ. ವಿವಾಹಬಂಧನಕ್ಕೊಳಗಾದ 45 ದಿನದದಲ್ಲೇ ಇಂಥದೊಂದು ಅವಘಡಕ್ಕೆ ಸಿಲುಕಿ ಮಸಣ ಸೇರಿದ್ದಾನೆ. ಈ ಕುರಿತು ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.