ಬಳ್ಳಾರಿ: ಜಿಲ್ಲೆಯ ಹೊಸಪೇಟೆ ನಗರದ ಬಸ್ ಡಿಪೋ ಬಳಿಯಿರುವ ರುದ್ರಭೂಮಿಯಲ್ಲಿ ಕೊರೊನಾದಿಂದ ಮೃತಪಟ್ಟ ದೇಹವನ್ನ ಶವಸಂಸ್ಕಾರ ಮಾಡಿರೋದನ್ನ ಖಂಡಿಸಿ ಸ್ಥಳೀಯ ನಿವಾಸಿಗಳು ಸ್ಮಶಾನದ ಮುಂದೆ ಪ್ರತಿಭಟಿಸಿದರು.
ರುದ್ರಭೂಮಿಯಲ್ಲಿ ಕೊರೊನಾದಿಂದ ಮೃತಪಟ್ಟವರ ಶವಸಂಸ್ಕಾರಕ್ಕೆ ಸ್ಥಳೀಯರ ವಿರೋಧ
ನಾಲ್ಕು ಮಂದಿ ಏಕಾಏಕಿ ಬಂದು ಮೃತದೇಹವನ್ನ ಮಣ್ಣು ಮಾಡಿದರು. ಬಳಿಕ ಕೊರೊನಾ ಸೋಂಕಿತರ ಮೃತದೇಹವೆಂದು ನಮಗೆ ತಿಳಿಯಿತು. ಸ್ಮಶಾನದ ಮುಂಭಾಗದಲ್ಲಿ ನೂರಾರು ಮನೆಗಳಿವೆ. ಯಾವುದೇ ಕಾರಣಕ್ಕೂ ಕೊರೊನಾದಿಂದ ಮೃತಪಟ್ಟ ದೇಹವನ್ನು ಇಲ್ಲಿ ಮಣ್ಣು ಮಾಡಬಾರದು. ಹೊಸಪೇಟೆ ನಗರ ಹೊರವಲಯದಲ್ಲಿ ಮಾಡಬೇಕು ಎಂದು ಆಗ್ರಹಿಸಿದರು..
ರುದ್ರಭೂಮಿಯಲ್ಲಿ ಕೊರೊನಾದಿಂದ ಮೃತಪಟ್ಟವರ ಶವಸಂಸ್ಕಾರಕ್ಕೆ ಸ್ಥಳೀಯರ ವಿರೋಧ
ನಾಲ್ಕು ಮಂದಿ ಏಕಾಏಕಿ ಬಂದು ಮೃತದೇಹವನ್ನ ಮಣ್ಣು ಮಾಡಿದರು. ಬಳಿಕ ಕೊರೊನಾ ಸೋಂಕಿತರ ಮೃತದೇಹವೆಂದು ನಮಗೆ ತಿಳಿಯಿತು. ಸ್ಮಶಾನದ ಮುಂಭಾಗದಲ್ಲಿ ನೂರಾರು ಮನೆಗಳಿವೆ. ಯಾವುದೇ ಕಾರಣಕ್ಕೂ ಕೊರೊನಾದಿಂದ ಮೃತಪಟ್ಟ ದೇಹವನ್ನು ಇಲ್ಲಿ ಮಣ್ಣು ಮಾಡಬಾರದು. ಹೊಸಪೇಟೆ ನಗರ ಹೊರವಲಯದಲ್ಲಿ ಮಾಡಬೇಕು ಎಂದು ಆಗ್ರಹಿಸಿದರು.
ಲಘು ಲಾಠಿ ಪ್ರಹಾರ:ಕೊರೊನಾ ಸೋಂಕಿತರ ಅಂತ್ಯಕ್ರಿಯೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹೊಸಪೇಟೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಸಾರ್ವಜನಿಕರನ್ನ ಚದುರಿಸಿ, ಪ್ರತಿಭಟನಾ ನಿರತ ಕೆಲವರನ್ನ ವಶಕ್ಕೆ ಪಡೆದುಕೊಂಡರು.