ಕರ್ನಾಟಕ

karnataka

ETV Bharat / city

ಡಿಕೆಶಿ ಕಾಂಗ್ರೆಸ್ ಪಕ್ಷದ ಹೆಣ ಹೊರಲಿದ್ದಾರೆ: ಶೆಟ್ಟರ್ ವ್ಯಂಗ್ಯ - ಬಿಜೆಪಿ

ಡಿಕೆಶಿ ಕಾಂಗ್ರೆಸ್ ಪಕ್ಷದ ಹೆಣ ಹೊರಲಿದ್ದಾರೆ ಎಂದ ಜಗದೀಶ್​ ಶೆಟ್ಟರ್​. ಕಾಂಗ್ರೆಸ್​ ಹೆಣ ಹೊರೋನೂ ನಾನೇ. ಪಲ್ಲಕ್ಕಿ ಹೊರೋನೂ ನಾನೇ ಎಂಬ ಸಚಿವ ಡಿ.ಕೆ.ಶಿ​ ಹೇಳಿಕೆಗೆ ಕುರಿತು​ ವ್ಯಂಗ್ಯ

ಶೆಟ್ಟರ್ ವ್ಯಂಗ್ಯ

By

Published : Mar 26, 2019, 1:57 PM IST

ಬಳ್ಳಾರಿ: ಮಂಡ್ಯ ಸಮಾವೇಶದಲ್ಲಿ ಕಾಂಗ್ರೆಸ್​ ಹೆಣ ಹೊರೋನೂ ನಾನೇ. ಪಲ್ಲಕ್ಕಿ ಹೊರೋನೂ ನಾನೇ ಎಂದಿದ್ದ ಸಚಿವ ಡಿ.ಕೆ.ಶಿವಕುಮಾರ್​ ಹೇಳಿಕೆಗೆ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ವ್ಯಂಗ್ಯವಾಡಿದ್ದಾರೆ.

ಜಿಲ್ಲೆಯ ಹಡಗಲಿ ಪಟ್ಟಣದಲ್ಲಿ ಬಿಜೆಪಿ ಘಟಕದಿಂದ ನಡೆದ ಲೋಕಸಭಾ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. 'ಡಿಕೆಶಿ ಕಾಂಗ್ರೆಸ್ ಪಕ್ಷದ ಹೆಣ ಹೊರಲಿದ್ದಾರೆ' ಎಂದು ವ್ಯಂಗ್ಯವಾಡಿದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಸಂಪೂರ್ಣವಾಗಿ ತನ್ನ ಅಸ್ತಿತ್ವವನ್ನ ಕಳೆದುಕೊಳ್ಳಲಿದೆ. ಆಗ ಸಚಿವ ಡಿ.ಕೆ. ಶಿವಕುಮಾರ್​ ಕಾಂಗ್ರೆಸ್ ಪಕ್ಷದ ಹೆಣಗಳನ್ನ ಹೊರಲಿದ್ದಾರೆ ಎಂದು ಟೀಕಿಸಿದರು.

ಡಿಕೆಶಿ ಕಾಂಗ್ರೆಸ್ ಪಕ್ಷದ ಹೆಣ ಹೊರಲಿದ್ದಾರೆ : ಜಗದೀಶ್​ ಶೆಟ್ಟರ್

ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಹಾಗೂ ಈ ದೇಶದ ಮತದಾರರು ಮಹತ್ವದ ಹಾಗೂ ಅಚ್ಚರಿಯ ತೀರ್ಪು ನೀಡಲಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿಯು ಅತ್ಯಧಿಕ ಸ್ಥಾನಗಳನ್ನು ಗಳಿಸಲಿದೆ. ಕಾಂಗ್ರೆಸ್ ಪಕ್ಷವು ದೇಶದೆಲ್ಲೆಡೆ ಹೀನಾಯ ಸೋಲು ಅನುಭವಿಸಲಿದೆ. ಆಗ ಸಚಿವ ಡಿ.ಕೆ. ಶಿವಕುಮಾರ್​ ಪಲ್ಲಕ್ಕಿ ಹೊರೋದಿಲ್ಲ, ಅದರ ಬದಲಿಗೆ ಕಾಂಗ್ರೆಸ್ ಪಕ್ಷದ ಹೆಣಗಳನ್ನ ಹೊರಬೇಕಾಗುತ್ತದೆ. ಕಾದು ನೋಡಿ ಎಂದು ಶೆಟ್ಟರ್​​ ಕುಹಕವಾಡಿದರು.

ದೇಶದ ಅಭಿವೃದ್ಧಿಗಾಗಿ ರಾಜ್ಯದ ಮತದಾರರು ಈ ಚುನಾವಣೆಯಲ್ಲಿ ಬದಲಾವಣೆ ಬಯಸಿದ್ದಾರೆ. ಇದರಿಂದ ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಮನೆಗೆ ಕಳಿಸುತ್ತಾರೆ. ಮಂಡ್ಯದಲ್ಲಿ ಜೆಡಿಎಸ್ ಪಕ್ಷದ ಕುಟುಂಬ ರಾಜಕಾರಣವನ್ನು ಸೋಲಿಸುವ ಅಭ್ಯರ್ಥಿ ಅವಶ್ಯಕತೆ ಇತ್ತು. ಸುಮಲತಾ ಅಂಬರೀಶ್​ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದರಿಂದ ಅವರಿಗೆ ಬಿಜೆಪಿ ಬೆಂಬಲ ನೀಡಿದೆ ಎಂದು ಶೆಟ್ಟರ್​ ಹೇಳಿದರು.

ABOUT THE AUTHOR

...view details