ಬಳ್ಳಾರಿ:ಲಾಕ್ಡೌನ್ ಹಿನ್ನೆಲೆ, ಅಗತ್ಯ ವಸ್ತುಗಳ ಅಂಗಡಿಗಳನ್ನ ಹೊರತುಪಡಿಸಿ, ಬೇರೆಲ್ಲಾ ಅಂಗಡಿಗಳು ಬಂದ್ ಆಗಿವೆ. ಇದೇ ಸಮಯವನ್ನೇ ಬಳಸಿಕೊಂಡ ಖದೀಮರು ರಾತ್ರೋರಾತ್ರಿ ಅಂಗಡಿಗಳಿಗೆ ನುಗ್ಗಿ ಕನ್ನ ಹಾಕಲು ಯತ್ನಿಸಿದ್ದಾರೆ.
ಬಟ್ಟೆ ಅಂಗಡಿಗೆ ನುಗ್ಗಿ ದೋಚಿದ ಖದೀಮರು, ಜ್ಯುವೆಲ್ಲರಿ ಶಾಪ್ನಲ್ಲಿ ಕಳ್ಳತನ ಯತ್ನ ವಿಫಲ - ಬಳ್ಳಾರಿ ಕಳ್ಳತನ ಸುದ್ದಿ
ಬಳ್ಳಾರಿಯ ಓಲ್ಡ್ ಕಚೇರಿ ರಸ್ತೆಯಲ್ಲಿರುವ ಬಟ್ಟೆ ಅಂಗಡಿಯೊಂದರ ಬಾಗಿಲು ಮುರಿದು ಸಾವಿರಾರು ರೂಪಾಯಿ ಮೌಲ್ಯದ ಬಟ್ಟೆ ಮತ್ತು ನಗದು ದೋಚಲಾಗಿದ್ದು, ಮೋಕ್ಷ ಹಾಗೂ ಶ್ರೀನಿವಾಸ ಎಂಬ ಜ್ಯುವೆಲ್ಲರಿ ಅಂಗಡಿಗಳಿಗೆ ಕನ್ನ ಹಾಕಲು ಯತ್ನಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರಾತ್ರೋರಾತ್ರಿ ಅಂಗಡಿಗೆ ನುಗ್ಗಿ ದೋಚಿದ ಖದೀಮರು..ಸಿಸಿ ಟಿವಿಯಲ್ಲಿ ದೃಶ್ಯ ಸೆರೆ
ಬಳ್ಳಾರಿಯ ಓಲ್ಡ್ ಕಚೇರಿ ರಸ್ತೆಯಲ್ಲಿರುವ ಬಟ್ಟೆ ಅಂಗಡಿಯೊಂದರ ಬಾಗಿಲು ಮುರಿದು ಸಾವಿರಾರು ರೂಪಾಯಿ ಮೌಲ್ಯದ ಬಟ್ಟೆ ಮತ್ತು ನಗದು ದೋಚಿದ್ದಾರೆ. ಅಲ್ಲದೇ, ಮೋಕ್ಷ ಹಾಗೂ ಶ್ರೀನಿವಾಸ ಎಂಬ ಜ್ಯುವೆಲ್ಲರಿ ಅಂಗಡಿಗಳಿಗೆ ಕನ್ನ ಹಾಕಲು ಯತ್ನಿಸಿದ್ದು, ಅಂಗಡಿಗಳಿಗೆ ಸೆಂಟ್ರಲ್ ಲಾಕ್ ಇದ್ದ ಕಾರಣ ಖದೀಮರ ಪ್ರಯತ್ನ ವಿಫಲವಾಗಿದೆ.
ಕಳ್ಳರು ಜ್ಯುವೆಲ್ಲರಿ ಅಂಗಡಿಗಳ ಬಾಗಿಲು ಮುರಿಯಲು ಯತ್ನಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು,ಈ ಕುರಿತು ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.