ಕರ್ನಾಟಕ

karnataka

ETV Bharat / city

ವಿಜಯನಗರ ಜಿಲ್ಲೆಗಾಗಿ ಹೋರಾಟ: ಮಠಾಧೀಶರ ಬೆಂಬಲ ಕೋರಿದ ಆನಂದಸಿಂಗ್

ಇತ್ತೀಚೆಗೆ ಬಿಜೆಪಿಯ ಮಾಜಿ ಶಾಸಕರೊಂದಿಗೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಉಜ್ಜನಿ ಪೀಠದ ಸ್ವಾಮೀಜಿಯನ್ನು ಅನರ್ಹ ಶಾಸಕ ಆನಂದಸಿಂಗ್ ಭೇಟಿ ಮಾಡಿದ್ದರು. ಈಗ ಕೊಟ್ಟೂರು ಸ್ವಾಮಿ ಮಠದ ಸಂಗನಬಸವ ಸ್ವಾಮೀಜಿ, ಹಂಪಿ ವಿದ್ಯಾರಣ್ಯ ಪೀಠದ ವಿದ್ಯಾರಣ್ಯ ಭಾರತೀ ಸ್ವಾಮೀಜಿಯವರನ್ನು ಭೇಟಿ ಮಾಡಿ ವಿಜಯನಗರವನ್ನು ಜಿಲ್ಲೆಯನ್ನಾಗಿಸುವ ಹೋರಾಟಕ್ಕೆ ಬೆಂಬಲ ಸೂಚಿಸುವಂತೆ ಕೋರಿದ್ದಾರೆ.

ವಿಜಯನಗರ ಜಿಲ್ಲೆ ಹೋರಾಟಕ್ಕೆ ಮಠಾಧೀಶರ ಬೆಂಬಲ ಕೋರಿದ ಆನಂದಸಿಂಗ್

By

Published : Sep 16, 2019, 6:28 PM IST

ಬಳ್ಳಾರಿ:ಜಿಲ್ಲೆಯ ವಿಜಯನಗರ(ಹೊಸಪೇಟೆ)ವನ್ನು ಜಿಲ್ಲೆಯನ್ನಾಗಿಸುವ ಹೋರಾಟಕ್ಕೆ ಅನರ್ಹ ಶಾಸಕ ಆನಂದಸಿಂಗ್ ಮಠಾಧೀಶರ ಬೆಂಬಲ ಕೋರಿದ್ದಾರೆ.

ಮೊನ್ನೆಯಷ್ಟೇ ಬಿಜೆಪಿಯ ಮಾಜಿ ಶಾಸಕರೊಂದಿಗೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಉಜ್ಜನಿ ಪೀಠದ ಸ್ವಾಮೀಜಿಯನ್ನು ಆನಂದಸಿಂಗ್ ಭೇಟಿ ಮಾಡಿದ್ದರು. ಈ ವೇಳೆ ವಿಜಯನಗರ ಜಿಲ್ಲೆಯನ್ನಾಗಿಸುವ ಅಗತ್ಯತೆಯ ಕುರಿತು ಮನವರಿಕೆ ಮಾಡಿದ್ದರು. ಈಗ ಕೊಟ್ಟೂರು ಮಠದ ಸಂಗನಬಸವ ಸ್ವಾಮೀಜಿ, ಹಂಪಿ ವಿದ್ಯಾರಣ್ಯ ಪೀಠದ ವಿದ್ಯಾರಣ್ಯ ಭಾರತೀ ಸ್ವಾಮೀಜಿಯವರನ್ನು ಭೇಟಿ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸುವಂತೆ ಅವರು ಕೋರಿದ್ದಾರೆ.

ಇದಕ್ಕೂ ಮುಂಚೆ ಹಂಪಿಯ ವಿರೂಪಾಕ್ಷ ದೇಗುಲಕ್ಕೆ ಭೇಟಿ ನೀಡಿದ ಆನಂದಸಿಂಗ್, ವಿಶೇಷಪೂಜೆ ಸಲ್ಲಿಸಿದರು. ಜಿಲ್ಲೆಯ ಹೊಸಪೇಟೆ ಕ್ಷೇತ್ರವನ್ನು ವಿಜಯನಗರ ಜಿಲ್ಲೆಯನ್ನಾಗಿ ಘೋಷಿಸಬೇಕೆಂಬುದು ಈ ಭಾಗದ ಸಾರ್ವಜನಿಕರ ಪ್ರಬಲ ಕೂಗಾಗಿದೆ. ಇದಕ್ಕೆ ಸದಾ ತಮ್ಮ ಬೆಂಬಲ ಇರಬೇಕು. ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ವಿನಂತಿ ಮಾಡಿದ್ದಾರೆ.

ಹೋರಾಟಕ್ಕೆ ಆನಂದಸಿಂಗ್​ಗೆ ಸಾಥ್ ನೀಡುವುದಾಗಿ ಮಠಾಧೀಶರು ಭರವಸೆ ನೀಡಿದ್ದಾರೆ.

ABOUT THE AUTHOR

...view details