ಬಳ್ಳಾರಿ : ಕೋವಿಡ್-19 ದೇಶಾದ್ಯಂತ ಹರಡಿ ಅವಾಂತರ ಸೃಷ್ಟಿಸಿದೆ. ಈ ಸಂದರ್ಭ ಬಳಸಿ ಅಗತ್ಯ ವಸ್ತುಗಳ, ದಾಸ್ತಾನು ಮತ್ತು ಸಾಗಾಣಿಕೆ ವಿಷಯದಲ್ಲಿ ಸರ್ಕಾರ ನೀಡಿರುವ ವಿನಾಯ್ತಿಯನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸಬೇಡಿ. ಒಂದು ವೇಳೆ ಉಲ್ಲಂಘಿಸಿದ್ರೆ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಎಚ್ಚರಿಸಿದ್ದಾರೆ.
ಅಗತ್ಯ ವಸ್ತುಗಳ ದರ ಮನಸೋ ಇಚ್ಛೆ ಏರಿಸಿದ್ರೆ ಕ್ರಮ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೊರೊನಾ ತಡೆಗೆ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಗತ್ಯ ವಸ್ತುಗಳ ಅಂಗಡಿಗಳನ್ನ ಸದಾ ತೆರೆದಿರುವಂತೆ ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಖರೀದಿಗೆ ಬೆಳಗ್ಗೆ 7ರಿಂದ 11ರವರೆಗೆ ಹಾಗೂ ಸಂಜೆ 5ರಿಂದ 7ರವರೆಗೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ.
ಅಗತ್ಯ ವಸ್ತುಗಳ ದರ ಮನಸೋ ಇಚ್ಛೆ ಏರಿಸಿದ್ರೆ ಕ್ರಮ ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಬಳಸಿ ಜನ ಖರೀದಿಸಬೇಕು. ವಾಹನಗಳ ಓಡಾಟದಲ್ಲೂ ಕೂಡ ಸಾಮಾಜಿಕ ಅಂತರ ಪಾಲಿಸಬೇಕು ಮತ್ತು ಇದಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದರು. ಅಂಗಡಿ ಮಾಲೀಕರು ಕೂಡ ಸಾಮಾಜಿಕ ಅಂತರ ಪಾಲಿಸಬೇಕು ಹಾಗೂ ಜನರಿಗೆ ಎಷ್ಟು ಅವಶ್ಯವೋ ಅಷ್ಟನ್ನೇ ಖರೀದಿ ಮಾಡಿ ಅಂತಾ ತಿಳಿಸಬೇಕೆಂದರು.
ಅಗತ್ಯ ವಸ್ತುಗಳ ದರ ಮನಸೋ ಇಚ್ಛೆ ಏರಿಸಿದ್ರೇ ಕ್ರಮ ಟ್ರಾನ್ಸ್‌ಪೋರ್ಟ್ ಮತ್ತು ಗೂಡ್ಸ್ ವೈಹಿಕಲ್‍ಗಳಿಗೆ ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಡಿಸಿ, ಅಗತ್ಯ ವಸ್ತುಗಳ ಅಂಗಡಿ ಮಾಲೀಕರು, ಕಾರ್ಮಿಕರಿಗೆ ವಿನಾಯ್ತಿ ನೀಡಲಾದ ಅವಧಿಯಲ್ಲಿ ಕರೆಯಿಸಿಕೊಂಡು ಕೆಲಸ ಮಾಡಿಕೊಳ್ಳಬಹುದಾಗಿದೆ ಎಂದು ಅಂಗಡಿ ಮಾಲೀಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.