ಬೆಳಗಾವಿ : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೋಪದಲ್ಲಿ ಮತಾಂತರ ನಿಷೇಧ ವಿಧೇಯಕ ಪ್ರತಿ ಹರಿದು ಬೀಸಾಕಿದ್ದಾರೆ. ಅದಕ್ಕಾಗಿ ಅವರು ಕ್ಷಮೆಯಾಚಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಗ್ರಹಿಸಿದರು.
ಬಿಲ್ ಹರಿದು ಹಾಕಿದ ಡಿಕೆಶಿ ಕ್ಷಮೆ ಕೋರಬೇಕು : ಬಿಎಸ್ವೈ ಒತ್ತಾಯ - ಮತಾಂತರ ನಿಷೇಧ ವಿಧೇಯಕ ಪ್ರತಿ
ಮತಾಂತರ ನಿಷೇಧ ಕಾಯ್ದೆ ಇಂದು ಮಂಡನೆಯಾಗುತ್ತದೆ. ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆ ಮಾಡಬಾರದು. ಸರ್ವಾನುಮತದಿಂದ ಅಂಗೀಕಾರ ಮಾಡಬೇಕು. ಅಲ್ಲದೆ, ಬಿಲ್ ಹರಿದು ಹಾಕಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕ್ಷಮೆ ಕೇಳಬೇಕು ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.
ಮಾಜಿ ಸಿಎಂ ಯಡಿಯೂರಪ್ಪ
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆ ಇಂದು ಮಂಡನೆ ಆಗುತ್ತಿದೆ. ಇದನ್ನು ಸರ್ವಾನುಮತದಿಂದ ಅಂಗೀಕಾರ ಮಾಡಬೇಕು. ಯಾವ ರೀತಿ ಬಿಲ್ ಹರಿದು ಬೀಸಾಕಿದ್ರೋ, ಅದೇ ರೀತಿ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಜನ ಹರಿದು ಹಾಕಿದ್ದಾರೆ ಎಂದರು.
ಶಿವಕುಮಾರ್ ಕುರಿತು ಯಡಿಯೂರಪ್ಪ ಹೇಳಿಕೆ : ನಾವು ಅಲ್ಪಸಂಖ್ಯಾತರ ವಿರೋಧಿಗಳಲ್ಲ. ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆ ಮಾಡಬಾರದು. ಡಿಕೆಶಿ ಕ್ಷಮೆ ಕೋರಬೇಕೆಂದು ಯಡಿಯೂರಪ್ಪ ಒತ್ತಾಯಿಸಿದರು.