ಬೆಳಗಾವಿ :ನಾವು ಕರ್ನಾಟಕದ ಕನ್ನಡಿಗರಲ್ಲ. ಗೋವಾ ಕನ್ನಡಿಗರು. ಗೋವಾಗೆ ಹರಿಯುವ ಮಹದಾಯಿ ನೀರನ್ನು ಕರ್ನಾಟಕ ಸರ್ಕಾರ ನಿಲ್ಲಿಸಬಾರದು ಎಂದು ಗೋವಾ ಕನ್ನಡ ಮಹಾಸಂಘದ ಗೌರವಾಧ್ಯಕ್ಷ ಸಿದ್ದಣ್ಣ ಮೇಟಿ ಹೇಳಿಕೆ ನೀಡಿದ್ದಾರೆ. ಇದು ಗೋವಾ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಮುಂಬರುವ ಗೋವಾದ ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆ ಗೋವಾದ ಸ್ಥಳೀಯ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಸಿದ್ದಣ್ಣ ಮೇಟಿ, ನಮ್ಮ ಕರ್ಮ ಭೂಮಿ ಗೋವಾ, ಜನ್ಮ ಭೂಮಿ ಕರ್ನಾಟಕ ಆಗಿದೆ. ಗೋವಾ ನಮಗೆ ಅನ್ನ ನೀಡುತ್ತೆ ಅಂದ್ರೆ ನಾವು ಗೋವಾದ ಹೆಸರು ಹೇಳಬೇಕು ಎಂದು ಸ್ಥಳೀಯ ಸುದ್ದಿವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಸಿದ್ದಣ್ಣ ಮೇಟಿ ಹೇಳಿಕೆ ನೀಡಿದ್ದಾರೆ.
ಇನ್ನು ಸಿದ್ದಣ್ಣ ಮೇಟಿ ಹೇಳಿಕೆಗೆ ಗೋವಾ ಕನ್ನಡಿಗರಿಂದಲೇ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಸಿದ್ದಣ್ಣ ಮೇಟಿ ಹೇಳಿಕೆಗೆ ಪ್ರತಿಕ್ರಿಯಿಸಲು ಗೋವಾ ಕನ್ನಡಿಗರು ಹಿಂದೇಟು ಹಾಕಿದ್ದಾರೆ.
ಗೋವಾದಲ್ಲಿ ಸ್ಥಳೀಯರು ವರ್ಸಸ್ ವಲಸಿಗರ ವಾರ್ :ಜೂನ್ ವೇಳೆಗೆ ಗೋವಾದ 196 ಗ್ರಾಪಂ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಗ್ರಾಪಂ ಚುನಾವಣೆಯಲ್ಲಿ ಕನ್ನಡಿಗ ಅಭ್ಯರ್ಥಿಗಳಿಗೆ ಬೆಂಬಲಿಸುತ್ತೇವೆ ಎಂದು ಗೋವಾ ಕನ್ನಡ ಮಹಾಸಂಘದ ಗೌರವಾಧ್ಯಕ್ಷ ಸಿದ್ದಣ್ಣ ಮೇಟಿ ಹೇಳಿಕೆ ಸ್ಥಳೀಯ ಪಕ್ಷಗಳಿಗೆ ನಡುಕ ತಂದಿದೆ. ಇದಾದ ಬಳಿಕ ಗೋವಾದಲ್ಲಿ ರೆವ್ಯೂಲೇಷನ್ ಗೋವನ್ ಪಕ್ಷ ಹಾಗೂ ಗೋವಾ ಕನ್ನಡಿಗರ ಮಧ್ಯೆ ವಾರ್ ಶುರುವಾಗಿದೆ.