ಕರ್ನಾಟಕ

karnataka

ETV Bharat / city

ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಕ್ಕಿ; ಅಪಘಾತದಲ್ಲಿ ಆಪ್ತ ಸ್ನೇಹಿತರ ದುರ್ಮರಣ - road accident in belagavi

ಅಪಘಾತದಲ್ಲಿ ಆಪ್ತ ಸ್ನೇಹಿತರಿಬ್ಬರು ಮೃತಪಟ್ಟಿರುವ ದಾರುಣ ಘಟನೆ ಬೆಳಗಾವಿಯಲ್ಲಿ ನಡೆದಿದೆ.

two friends dies due to road accident
ಮೃತ ಸ್ನೇಹಿತರು

By

Published : Aug 7, 2022, 2:24 PM IST

ಬೆಳಗಾವಿ: ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಕ್ಕಿ ಹೊಡೆದು ಆಪ್ತ ಸ್ನೇಹಿತರಿಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ಬಾಳೇಕುಂದ್ರಿಯ ಪಂತ ನಗರದಲ್ಲಿ ನಡೆದಿದೆ. ಸುಳೇಭಾವಿ‌ ಗ್ರಾಮದ ಸೋಮಯ್ಯ ಪ್ರಭು ಖವಾಶಿ (22) ಹಾಗೂ ಮೂಲತಃ ಕಿತ್ತೂರು ತಾಲೂಕಿನ ಶಿವನೂರು ಗ್ರಾಮದ ಸದ್ಯ ಸುಳೇಭಾವಿ ನಿವಾಸಿ ವಿಠ್ಠಲ ಗಣಪತಿ ಡವಳಿ (22) ಮೃತರು.

ಯುವಕರು ಬೆಳಗಾವಿಯಿಂದ ಸುಳೇಭಾವಿ ಕಡೆಗೆ ಬರುವಾಗ ಎದುರಿನಿಂದ ಟಿಪ್ಪರ್ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ದ್ವಿಚಕ್ರ ವಾಹನ ಟಿಪ್ಪರ್ ಕೆಳಗೆ ಸಿಕ್ಕಿ ಹಾಕಿಕೊಂಡಿತ್ತು. ವಿಠ್ಠಲ ಡವಳಿ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಸೋಮಯ್ಯ ಗಂಭೀರ ಗಾಯಗೊಂಡಿದ್ದ. ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಲೇಟ್ ನೈಟ್ ಪಾರ್ಟಿ: ದಾವಣಗೆರೆಯ ಹೋಟೆಲ್​​ ಮೇಲೆ ಪೊಲೀಸರಿಂದ ದಾಳಿ

ABOUT THE AUTHOR

...view details