ಕರ್ನಾಟಕ

karnataka

ETV Bharat / city

ಅಕಾಲಿಕ ಮಳೆ: ತಂಬಾಕು, ಕಡಲೆ ಬೆಳೆಗಾರರಲ್ಲಿ ಆತಂಕ - ಬೆಳಗಾವಿ ಲೇಟೆಸ್ಟ್​ ನ್ಯೂಸ್​

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಅಕಾಲಿಕ‌ ಮಳೆ ಹಾಗೂ ಮೊಡ ಕವಿದ ವಾತಾವಾರಣದಿಂದ ಬೆಳಗಾವಿ ಜಿಲ್ಲೆಯ ತಂಬಾಕು ಹಾಗೂ ಕಡಲೆ ಬೆಳೆಗಾರರಲ್ಲಿ ಬೆಳೆ ನಾಶವಾಗುವ ಆತಂಕ ಹೆಚ್ಚಾಗಿದೆ.

tobacco-and-chick-pea-growers-worried-due-to-premature-rainfall
ಅಕಾಲಿಕ ಮಳೆ: ತಂಬಾಕು, ಕಡಲೆ ಬೆಳೆಗಾರರಲ್ಲಿ ಆತಂಕ

By

Published : Jan 9, 2021, 5:22 PM IST

ಚಿಕ್ಕೋಡಿ (ಬೆಳಗಾವಿ):ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯು ಅಥಣಿ, ಕಾಗವಾಡ, ರಾಯಬಾಗ, ಚಿಕ್ಕೋಡಿ, ನಿಪ್ಪಾಣಿ ಭಾಗದ ತಂಬಾಕು ಹಾಗೂ ಕಡಲೆ ಬೆಳೆಗಾರರಲ್ಲಿ ಆತಂಕ ಹೆಚ್ಚಿಸಿದೆ‌.

ಅಕಾಲಿಕ ಮಳೆ: ತಂಬಾಕು, ಕಡಲೆ ಬೆಳೆಗಾರರಲ್ಲಿ ಆತಂಕ
ಕಳೆದ 4-5 ದಿನಗಳಿಂದ ಮೋಡ ಕವಿದ ವಾತಾವರಣವಿರುವುದರಿಂದ ಕಬ್ಬು, ತಾಂಬಾಕು ಹಾಗೂ ಕಡಲೆ ಬೆಳೆಗಾರರಲ್ಲಿ‌ ಆತಂಕ ಹೆಚ್ಚಾಗಿದೆ. ಕಳೆದ ಅಕ್ಟೋಬರ್​ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಸುಮಾರು 9,000 ಹೆಕ್ಟೇರ್​ಗಿಂತ ಹೆಚ್ಚು ಬೆಳೆ ನಾಶವಾಗಿತ್ತು. ಕಳೆದ ಎರಡು ದಿನಗಳಿಂದ ಸುರಿದ ಅಕಾಲಿಕ ಮಳೆಗೆ ಕಟಾವು ಮಾಡಿ ಒಣಗಲು ಹಾಕಿದ್ದ ಶೇ. 40ರಷ್ಟು ತಂಬಾಕು ನಾಶವಾಗಿದೆ.

ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ಅಕ್ಕೊಳ, ಖಡಕಲಾಟ, ಪಟ್ಟಣಕುಡಿ, ಗಳತಗಾ, ತಪಕರವಾಡಿ, ಶಿವಾಪೂರವಾಡಿ, ಸಿದ್ನಾಳ, ಕುನ್ನೂರ, ಹುನ್ನರಗಿ, ಶಿರಗಾಂವ, ಗಿರಗಾಂವ, ರಾಮಪೂರ, ಕೋಡ್ನಿ, ಮನೂಚಿವಾಡಿ ಮುಂತಾದ ಗ್ರಾಮಗಳಲ್ಲಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ತಂಬಾಕು ಬೆಳೆಯುತ್ತಾರೆ. ಕಳೆದ 5-6 ದಿನಗಳಿಂದ ತಂಬಾಕು ಕಟಾವು ಪ್ರಾರಂಭಗೊಂಡಿದ್ದು, ಶೇ. 75ರಷ್ಟು ಕಟಾವು ಮುಗಿದಿದೆ. 7-8 ದಿನಗಳಲ್ಲಿ ಕಟಾವು ಕಾರ್ಯ ಪೂರ್ಣವಾಗಲಿದೆ ಎನ್ನುವಷ್ಟರಲ್ಲೇ ಮಳೆ ಸುರಿದಿದ್ದರಿಂದ ರೈತರಲ್ಲಿ ಆತಂಕ ಹೆಚ್ಚಾಗಿದೆ.

ಇನ್ನು ಕಾಗವಾಡ, ಅಥಣಿ, ರಾಯಬಾಗ ತಾಲೂಕಿನಲ್ಲಿ ಹೆಚ್ಚಾಗಿ ಕಡಲೆ ಬೆಳೆ‌ ಬೆಳೆಯುತ್ತಾರೆ. ಈಗಾಗಲೇ ಕಡಲೆ ಬೆಳೆ ಹೂವಿಗೆ ಬಂದಿದ್ದು, ಈ ಅಕಾಲಿಕ‌ ಮಳೆ ಹಾಗೂ ಮೊಡ ಕವಿದ ವಾತಾವಾರಣದಿಂದ ಕಡಲೆ ಬೆಳೆಗೆ ಕೀಟಬಾಧೆಯಾಗುವ ಸಾಧ್ಯತರಯಿದೆ.

ABOUT THE AUTHOR

...view details