ಕರ್ನಾಟಕ

karnataka

ETV Bharat / city

ಕಾಶ್ಮೀರದ ವಿಶೇಷ ಸ್ಥಾನಮಾನದ ಲಾಭ ಪಾಕ್ ಪಡೆದಿತ್ತು: ಸಂಸದ ತೇಜಸ್ವಿ ಸೂರ್ಯ

ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ ಲಾಭ ಕೇವಲ ಪಾಕಿಸ್ತಾನ ಪಡೆದಿತ್ತು. ಅಲ್ಲದೆ, ಕಾಶ್ಮೀರದ ಯುವಕನ್ನು ದಿಕ್ಕು ತಪ್ಪಿಸುವ ಕೆಲಸವನ್ನೂ ಮಾಡಿತ್ತು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

rastriya-ekata-divas-program

By

Published : Sep 21, 2019, 5:50 AM IST

ಬೆಳಗಾವಿ: ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ ಲಾಭ ಕೇವಲ ಪಾಕಿಸ್ತಾನ ಪಡೆದಿತ್ತು. ಅಲ್ಲದೆ, ಕಾಶ್ಮೀರದ ಯುವಕನ್ನು ದಿಕ್ಕು ತಪ್ಪಿಸುವ ಕೆಲಸವನ್ನೂ ಮಾಡಿತ್ತು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ರಾಷ್ಟ್ರೀಯ ಏಕತಾ ಅಭಿಯಾನ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು 370ನೇ ವಿಧಿ ರದ್ಧತಿಯಿಂದ ಭಾರತದಲ್ಲಿ ಹೊಸ ಬದಲಾವಣೆ ಆಗಿದೆ. ಕಲ್ಲು ಹಿಡಿದು ರಸ್ತೆಗೆ ಇಳಿಯುತ್ತಿದ್ದ ಯುವಕರು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗುತ್ತಿದ್ದಾರೆ ಎಂದರು.

ಸಂಸದ ತೇಜಸ್ವಿ ಸೂರ್ಯ

370ನೇ ವಿಧಿ ಕೆಲವು ನಾಯಕ ಸ್ವತ್ತಾಗಿತ್ತು. ಪ್ರತ್ಯೇಕವಾದಿ ಸೈಯದ್ ಗಿಲಾನಿ ಭೇಟಿ ಮಾಡಲು ಪ್ರಜಾಪ್ರಭುತ್ವ ರಾಷ್ಟ್ರದ ಗೃಹ ಸಚಿವರು ಸಮಯ ಕೇಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರಿಂದು ಅವೆಲ್ಲವೂ ಬದಲಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ದೇಶ ಕಂಡ ಸಮರ್ಥ ನಾಯಕ. ಯಾವುದು ಅಸಾಧ್ಯವೆಂದು ಜನ ಭಾವಿಸಿರುತ್ತಾರೋ ಅದನ್ನು ಮೋದಿ ಸಾಧಿಸಿ ತೋರಿಸುತ್ತಾರೆ. ಅದಕ್ಕೆ ತಕ್ಕ ಉದಾಹರಣೆ ಜಮ್ಮುಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ಧತಿ ಎಂದು ಹೇಳಿದರು.

ABOUT THE AUTHOR

...view details