ಕರ್ನಾಟಕ

karnataka

ETV Bharat / city

ಬೆಳಗಾವಿಯಲ್ಲಿ ಮತ್ತೊಂದು ಮನೆ ಗೋಡೆ ಕುಸಿತ: ಅದೃಷ್ಟವಶಾತ್ ತಪ್ಪಿದ ದುರಂತ - ಮನೆ ಗೋಡೆ ಕುಸಿದು ದುರಂತ

ಬೆಳಗಾವಿ ಜಿಲ್ಲೆಯಲ್ಲಿ ಮಳೆ ಮುಂದುವರಿದಿದೆ. ಹೀಗಾಗಿ, ಮನೆ ಗೋಡೆ ಕುಸಿತ ಪ್ರಕರಣಗಳು ಹೆಚ್ಚುತ್ತಿವೆ.

ಬೆಳಗಾವಿಯಲ್ಲಿ ಮತ್ತೊಂದು ಮನೆ ಗೋಡೆ ಕುಸಿತ
ಬೆಳಗಾವಿಯಲ್ಲಿ ಮತ್ತೊಂದು ಮನೆ ಗೋಡೆ ಕುಸಿತ

By

Published : Oct 12, 2021, 9:48 AM IST

ಬೆಳಗಾವಿ:ನಿನ್ನೆ ಸಂಜೆ ಸುರಿದ ಮಳೆಗೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಹುಲಿಕೊತ್ತಲ ಗ್ರಾಮದಲ್ಲಿ ಮತ್ತೊಂದು ಮನೆ ಗೋಡೆ ಕುಸಿತ ಸಂಭವಿಸಿತು.

ಕಲ್ಲಪ್ಪ ಮುದಕಪ್ಪ ಬಿಳಕಿ ಎಂಬುವವರಿಗೆ ಸೇರಿದ ಮನೆ ಗೋಡೆ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ. ಕಳೆದೊಂದು ವಾರದ ಅಂತರದಲ್ಲಿ ಒಟ್ಟು ಮೂರು ಮನೆಗಳು ಕುಸಿತಗೊಂಡಿವೆ. ಕಳೆದ ಮೂರು ವರ್ಷಗಳಲ್ಲಿ ಎರಡು ಬಾರಿ ಬೆಳಗಾವಿ ಜಿಲ್ಲೆ ಭೀಕರ ಜಲಪ್ರಳಯಕ್ಕೆ ತುತ್ತಾಗಿದೆ. ಈ ವೇಳೆ ಶಿಥಿಲಾವಸ್ಥೆಗೊಂಡಿರುವ ಹಲವು ಮನೆ ಗೋಡೆ ಕುಸಿಯುತ್ತಿವೆ.

ಭಾರಿ ಮಳೆ

ಅಕ್ಟೋಬರ್ 6ರಂದು ಬಡಾಲ ಅಂಕಲಗಿಯಲ್ಲಿ ಮನೆಗೋಡೆ ಕುಸಿದು ಬಿದ್ದು 7 ಜನ ದುರ್ಮರಣ ಹೊಂದಿದ್ದರು. ಅಕ್ಟೋಬರ್ 10ರಂದು ದೇಸೂರು ಬಳಿ ತಗಡಿನ ಶೆಡ್ ಕುಸಿದು ಇಬ್ಬರು ಸಾವನ್ನಪ್ಪಿದ್ದರು. ಅಕ್ಟೋಬರ್ 10 ರ ರಾತ್ರಿ ಅಗಸಗಿಯಲ್ಲಿಯೂ ಮನೆ ಗೋಡೆ ಕುಸಿಯಿತು. ಒಂದು ವಾರದ ಅಂತರದಲ್ಲಿ ಮೂರು ಮನೆ ಗೋಡೆ, ಒಂದು ತಗಡಿನ ಶೆಡ್ ಕುಸಿದು 9 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಬೆಳಗಾವಿಯಲ್ಲಿ ಮನೆ ಗೋಡೆ ಕುಸಿತ

ABOUT THE AUTHOR

...view details