ಕರ್ನಾಟಕ

karnataka

By

Published : Feb 27, 2021, 7:52 PM IST

ETV Bharat / city

ಸರ್ಕಾರಿ ಆಸ್ಪತ್ರೆಯಲ್ಲಿ ಹುಟ್ಟಿದವ, ಓದಿದ್ದು ಕನ್ನಡ, ತಾಯ್ನುಡಿ ಬಿಟ್ಟು ಬೇರೆ ಭಾಷೆ ಬರಲ್ಲ.. ಸಚಿವ ರಮೇಶ್ ಜಾರಕಿಹೊಳಿ‌

ಯಾವುದೇ ಕೆಲಸ ಇರಲಿ, ಗೋಕಾಕ್ ಜನರು ನನಗೆ ಮನವಿ ಮಾಡುವ ಅಗತ್ಯ ಇಲ್ಲ. ನನಗೆ ಆದೇಶ ಮಾಡುವ ಹಕ್ಕು ಗೋಕಾಕ್ ಜನರಿಗಿದೆ. ನಿಮ್ಮ ಆಶೀರ್ವಾದದಿಂದ ನಾನು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದೇನೆ..

gokaka
gokaka

ಬೆಳಗಾವಿ :ನಾನು ಸೇರಿ ನನ್ನ ಸಹೋದರರು, ಸಹೋದರಿಯರು ಸರ್ಕಾರಿ ಶಾಲೆಯಲ್ಲಿ ಓದಿದ್ದೇವೆ, ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ್ದೇವೆ ಎಂದು ಸಚಿವ ರಮೇಶ್ ಜಾರಕಿಹೊಳಿ‌ ಹೇಳಿದ್ದಾರೆ.

ಗೋಕಾಕ್ ತಾಲೂಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಏಕೀಕರಣ ಹೋರಾಟದಲ್ಲಿ ಉತ್ತರ ಕರ್ನಾಟಕ ಜನರೇ ಮುಂಚೂಣಿಯಲ್ಲಿದ್ದರು. ಕನ್ನಡ ಬಹಳ ಮೃದುವಾದ ಭಾಷೆ, ಎಲ್ಲರನ್ನೂ ಪ್ರೀತಿಸುವ ಗುಣ ಕನ್ನಡಿಗರಲ್ಲಿದೆ.

ಮೂರು ದಿನಗಳ ಹಿಂದೆ ಮಹದಾಯಿ ವಿವಾದದ ಬಗೆಗೆ ದೆಹಲಿಯಲ್ಲಿ ಸಭೆ ಇತ್ತು. ಸಭೆಯಲ್ಲಿ ನನಗೆ ಇಂಗ್ಲಿಷಿನಲ್ಲಿ ಪ್ರಶ್ನೆ ಕೇಳಿದರು. ನಾನು ಸರ್ಕಾರಿ ಶಾಲೆಯಲ್ಲಿ ಓದಿದವ, ನನಗೆ ಇಂಗ್ಲಿಷ್ ಬರಲ್ಲ. ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ ಎಂದು ಸಭೆಯಲ್ಲಿ ಸ್ಪಷ್ಟವಾಗಿ ಹೇಳಿದ್ದೆ ಎಂದರು.

ಗೋಕಾಕ್ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಸಚಿವ ರಮೇಶ್ ಜಾರಕಿಹೊಳಿ..

ನನ್ನ ಸಹೋದರ, ಸಹೋದರಿಯರೆಲ್ಲರೂ ಸರ್ಕಾರಿ ಶಾಲೆಯಲ್ಲಿ ಓದಿದ್ದೇವೆ. ಸರ್ಕಾರಿ ಆಸ್ಪತ್ರೆಯಲ್ಲೇ ಹುಟ್ಟಿದ್ದೇವೆ. ನನ್ನ ಮೊಮ್ಮಗ ಕೂಡ ಕಳೆದ ವರ್ಷ ಸರ್ಕಾರಿ ಆಸ್ಪತ್ರೆಯಲ್ಲೇ ಜನಿಸಿದ್ದಾನೆ ಎಂದು ಸ್ಮರಿಸಿದರು.

ಯಾವುದೇ ಕೆಲಸ ಇರಲಿ, ಗೋಕಾಕ್ ಜನರು ನನಗೆ ಮನವಿ ಮಾಡುವ ಅಗತ್ಯ ಇಲ್ಲ. ನನಗೆ ಆದೇಶ ಮಾಡುವ ಹಕ್ಕು ಗೋಕಾಕ್ ಜನರಿಗಿದೆ. ನಿಮ್ಮ ಆಶೀರ್ವಾದದಿಂದ ನಾನು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದೇನೆ.

ಗೋಕಾಕ್ ಜನರು ಮನವಿ ಮಾಡಿಕೊಂಡರೆ ನನಗೆ ಅಪಮಾನ ಆಗುತ್ತದೆ. ಗೋಕಾಕಿನಲ್ಲಿ ಕನ್ನಡ ಸಾಹಿತ್ಯ ಭವನ, ಸಭಾಭವನ ನಿರ್ಮಿಸಲು ಕ್ರಮ ವಹಿಸುತ್ತೇನೆ. ಇದಕ್ಕಾಗಿ ನೀವು ನನಗೆ ಮನವಿ ಮಾಡಿಕೊಳ್ಳುವುದು ಬೇಡ, ಆದೇಶ ಮಾಡಿ ಎಂದರು.

ABOUT THE AUTHOR

...view details