ಕರ್ನಾಟಕ

karnataka

ETV Bharat / city

ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ, ಅದರ ಬಗ್ಗೆ ಚರ್ಚೆ ಬೇಡ: ಜಗದೀಶ್ ಶೆಟ್ಟರ್ - ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಬಗ್ಗೆ ಜಗದೀಶ ಶೆಟ್ಟರ್

ಕರ್ನಾಟಕ ಸಿಎಂ ಬದಲಾವಣೆ ಬಗ್ಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ.

Jagadeesh Shettar on Cm Changing in Karnataka,ಕರ್ನಾಟಕ ಸಿಎಂ ಬದಲಾವಣೆ ಬಗ್ಗೆ ಜಗದೀಶ್ ಶೆಟ್ಟರ್
ಕರ್ನಾಟಕ ಸಿಎಂ ಬದಲಾವಣೆ ಬಗ್ಗೆ ಜಗದೀಶ್ ಶೆಟ್ಟರ್

By

Published : Dec 23, 2021, 3:41 PM IST

ಬೆಳಗಾವಿ: ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಅದರ ಬಗ್ಗೆ ಚರ್ಚೆ ಮಾಡೋದು ಬೇಡ. ಇದು ಕೇವಲ ವದಂತಿ ಅಷ್ಟೇ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದರು. ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಸಂಪುಟ ಪುನಾರಚನೆ ಹಾಗೂ ಹಿರಿಯ ಸಚಿವರ ಕೈ ಬಿಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇವೆಲ್ಲಾ ಕೇವಲ ವದಂತಿಗಳು ಅಷ್ಟೇ. ಸಿಎಂ ಕುರ್ಚಿ ಖಾಲಿ ಇಲ್ಲ. ಇಂತಹಾ ವದಂತಿಗಳಿಗೆ ನಾನು ಉತ್ತರ ಕೊಡಲ್ಲ ಎಂದರು.

ಸುವರ್ಣಸೌಧದಲ್ಲಿ ಜಗದೀಶ್ ಶೆಟ್ಟರ್

ಮತಾತಂತರ ನಿಷೇಧ ಬಿಲ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮತಾಂತರ ನಿಷೇಧ ಕಾಯ್ದೆ ಬಗ್ಗೆ ಅಸೆಂಬ್ಲಿಯಲ್ಲಿ ಚರ್ಚೆ ಆಗ್ತಿದೆ. ಕಾಂಗ್ರೆಸ್​ನವರು ಈ ಹಿಂದೆ ಮತಾಂತರ ನಿಷೇಧ ಬಿಲ್ ಅಡ್ಮಿಟ್ ಮಾಡಿದ್ರು. ಕಾರಣಾಂತರದಿಂದ ಮಾಡಿರಲಿಲ್ಲ. ಈಗ ರಾಜಕೀಯ ಮಾಡ್ತಿದ್ದಾರೆ. ಕಾಂಗ್ರೆಸ್ ಇದ್ದಾಗ ಆ ಬಿಲ್ ಬೇಕು, ಬಿಜೆಪಿ ಇದ್ದಾಗ ಬೇಡ. ಪ್ರಚೋದನೆ ಮಾಡಲು ಈ ರೀತಿ ಮಾಡ್ತಿದ್ದಾರೆ ಎಂದು ಕಿಡಿ ಕಾರಿದರು.

ಕೇವಲ ಓಟ್ ಬ್ಯಾಂಕ್ ರಾಜಕಾರಣ ಮಾಡ್ತಿದ್ದಾರೆ. ಕಾಂಗ್ರೆಸ್​ನವರು ಬಿಲ್‌ಗೆ ಬೆಂಬಲ ನೀಡಬೇಕು. 2016 ರಲ್ಲಿ ಕ್ಯಾಬಿನೆಟ್​ನಲ್ಲಿ ಮಸೂದೆ ಮಂಡನೆಗೆ ಒಪ್ಪಿದ್ದು, ಇದೀಗ ಈಗ ಬೇಡ ಅಂತ ಹೇಳ್ತಿದ್ದಾರೆ ಎಂದು ಗರಂ ಆದರು. ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡಿ, ಈ ಬಗ್ಗೆ ಸಿಎಂ ಹಾಗೂ ಸಚಿವರು ಚರ್ಚಿಸಿ ತೀರ್ಮಾನಿಸುತ್ತಾರೆ ಎಂದರು.

(ಇದನ್ನೂ ಓದಿ: ಮತಾಂತರ ನಿಷೇಧ ವಿಧೇಯಕ ಮೇಲಿನ ಚರ್ಚೆ: ಸಚಿವ ಮಾಧುಸ್ವಾಮಿ - ಸಿದ್ದರಾಮಯ್ಯ ಮಧ್ಯೆ ಸವಾಲು, ಪ್ರತಿ ಸವಾಲು)

ABOUT THE AUTHOR

...view details