ಕರ್ನಾಟಕ

karnataka

By

Published : Nov 16, 2019, 9:33 AM IST

ETV Bharat / city

ಅನಿವಾರ್ಯವಾಗಿ ಬಿಜೆಪಿ ಸೇರಿದೆ: ಕಾಂಗ್ರೆಸ್​ ನಂಟು ನೆನೆದು ಭಾವುಕರಾದ ರಮೇಶ್​ ಜಾರಕಿಹೊಳಿ

25 ವರ್ಷಗಳ ಕಾಲ ಕಾಂಗ್ರೆಸ್​ನಲ್ಲಿದ್ದ ಬೆಳಗಾವಿ ರೆಬೆಲ್, ಅನರ್ಹ​ ಶಾಸಕ ರಮೇಶ್​ ಜಾರಕಿಹೊಳಿ ಬದಲಾದ ರಾಜಕಾರಣದಲ್ಲಿ ಕೈ ಬಿಟ್ಟು ಕಮಲ ಹಿಡಿದಿದ್ದಾರೆ. ಈ ಬಗ್ಗೆ ಮನದಾಳದ ಮಾತಾಡಿರುವ ಅವರು ಅನಿವಾರ್ಯ ಕಾರಣಕ್ಕೆ ಬಿಜೆಪಿಗೆ ಬಂದೇ ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದಾರೆ.

ರಮೇಶ್​ ಜಾರಕಿಹೊಳಿ

ಬೆಳಗಾವಿ: ಬಿಜೆಪಿ ಸೇರುವ ಹಿಂದಿನ ದಿನ ರಾತ್ರಿ ನನಗೆ ಒಂದು ನಿಮಿಷವೂ ಸಹ ನಿದ್ದೆ ಬರಲಿಲ್ಲ. ನಾನು ಮಾಜಿ ಪ್ರಧಾನಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಕಟ್ಟಾ ಅಭಿಮಾನಿ ಎಂದು ಗೋಕಾಕ್​ ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ ಹೇಳಿದ್ದಾರೆ.

ಗೋಕಾಕ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ದುಖಃವನ್ನು ಬಹಿರಂಗವಾಗಿ ಹೇಳಿಕೊಳ್ಳುವ ಸ್ಥಿತಿಯಲ್ಲಿ ನಾನಿಲ್ಲ. ದುಖಃವನ್ನು ನುಂಗಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್​ನಲ್ಲಿ ಉಳಿದಿದ್ದರೆ ನನ್ನನ್ನು ನಿರ್ನಾಮ ಮಾಡುತ್ತಿದ್ದರು ಎಂದು ಕಾಂಗ್ರೆಸ್ ಪಕ್ಷದ ಜತೆಗೆ ನಂಟು ನೆನೆದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಭಾವುಕರಾಗಿದ್ದಾರೆ. ಇಂದಿರಾ, ರಾಜೀವ್ ಗಾಂಧಿ ನನ್ನ ಮನದಲ್ಲಿದ್ದಾರೆ. ಆದರೆ ಬ್ಯಾಗ್ ಹಿಡಿದು ಬಾಗಿಲು ಕಾಯುವವರು ಮಾತ್ರ ಕಾಂಗ್ರೆಸ್​ನಲ್ಲಿ ಲೀಡರ್ ಆಗಲು ಸಾಧ್ಯ. ಕಾಂಗ್ರೆಸ್​ನಲ್ಲೀಗ ಮಾಸ್ ಲೀಡರ್​​ಗಳಿಗೆ ಯಾವುದೇ ಬೆಲೆ ಇಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಪಕ್ಷವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೆ. ಪಕ್ಷದಲ್ಲಿ ಏನೇ ಆದ್ರೂ ಮಲ್ಲಿಕಾರ್ಜುನ ಖರ್ಗೆ ನೋಡಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್​ ನಂಟು ನೆನೆದು ಭಾವುಕರಾದ ರಮೇಶ್​ ಜಾರಕಿಹೊಳಿ

ಸಿದ್ದರಾಮಯ್ಯ ದರ್ಪ, ಡಿಕೆಶಿ ಪೋಸ್ ಕೋಡುವ ಲೀಡರ್ ಆಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಬ್ಲ್ಯಾಕ್ ಮೇಲ್ ಮಾಡಲ್ಲ, ಆ ಧೈರ್ಯವೂ ಅವರಿಗಿಲ್ಲ. ಆದರೆ ಸಿದ್ದರಾಮಯ್ಯ ಎರಡನ್ನು ಮಾಡಿ ಕಾಂಗ್ರೆಸ್​ನಲ್ಲಿ ಸಿಎಂ ಆದರು. ನಿಷ್ಠಾವಂತರಿಗೆ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬೆಲೆ ಇಲ್ಲ ಎಂದು ಆರೋಪಿಸಿದರು.

ಕಳೆದ ಅನೇಕ ವರ್ಷಗಳಿಂದ ಸತೀಶ ಜಾರಕಿಹೊಳಿ ನನ್ನನ್ನು ವಿರೋಧಿಸುತ್ತ ಬಂದಿದ್ದಾರೆ. ಆದರೆ ಲಖನ್ ಜಾರಕಿಹೊಳಿ ನನ್ನ ಜತೆಗೆ ಇದ್ದುಕೊಂಡೆ ಮೋಸ ಮಾಡಿದ್ದು ದುಖಃವಾಗಿದೆ. ಇದನ್ನು ನೋಡಿ ಜೀವನದಲ್ಲಿ ಜಿಗುಪ್ಸೆ ಬಂದಿದೆ. ನಮ್ಮ 5 ಜನ ಸಹೋದರರಲ್ಲಿ ಇಷ್ಟು ದಿನ ಆಟವಾಡಿದ್ದೇ ಲಖನ್. ಸಹೋದರರನ್ನು ಬೇರೆ ಮಾಡಿ ಅದರ ಲಾಭವನ್ನು ಲಖನ್ ಪಡೆಯುತ್ತಿದ್ದಾನೆ. ನಾನು ಸತೀಶ ಜಾರಕಿಹೊಳಿಯನ್ನು ಸಿಎಂ ಮಾಡುತ್ತೇನೆ ಎಂದು ಹೇಳಿದ್ದೆ. ಸತೀಶ್ ಸಿಎಂ ಆಗುವುದನ್ನು ಲಖನ್ ಜಾರಕಿಹೊಳಿಗೆ ಸಹಿಸಲು ಆಗಲಿಲ್ಲ, ಈ ಬಗ್ಗೆ ನನ್ನ ಜತೆಗೆ ಒಮ್ಮೆ ಲಖನ್ ಜಾರಕಿಹೊಳಿ ಜಗಳ ಆಡಿದ್ದ. ಲಖನ್‌ ಮತ್ತು ಸತೀಶ್ ಜಗಳವಾಡುವಾಗ ಸತೀಶ್​ನ ಸಿಎಂ ಮಾಡಲು ರಮೇಶ್​ ಹೊರಟ್ಟಿದ್ದಾರೆ ಎಂದು ಲಖನ್ ಹಲವರ ಮುಂದೆ ಹೇಳಿಕೊಂಡಿದ್ದಾರೆ ಎಂದರು.

ಮುಖ್ಯಮಂತ್ರಿ ಆಗುವ ಆಸೆಯನ್ನು ನಾನು ಹೊಂದಿಲ್ಲ. ನನ್ನ ಲೆವಲ್​ಗಿಂತ ನೂರು ಪಟ್ಟು ಬೆಳೆದಿದ್ದೇನೆ. ನನಗೆ ಯಾವುದೇ ಆಕಾಂಕ್ಷೆ ಇಲ್ಲ ಎಂದು ರಮೇಶ್​ ಜಾರಕಿಹೊಳಿ ಇದೇ ವೇಳೆ ಹೇಳಿದರು.

For All Latest Updates

TAGGED:

ABOUT THE AUTHOR

...view details