ಬೆಳಗಾವಿ :ಕೃಷಿಗೆ ಸಂಬಂಧಿಸಿದ ಮೂರು ಕಾನೂನುಗಳನ್ನು(3 farm laws) ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಘೋಷಿಸುತ್ತಿದ್ದಂತೆ ಕುಂದಾನಗರಿ ಬೆಳಗಾವಿಯಲ್ಲಿ ರೈತರು ಸಂಭ್ರಮಿಸಿದರು.
ಕೃಷಿ ಕಾಯಿದೆ ವಾಪಸ್ : ಬೆಳಗಾವಿಯಲ್ಲಿ ರೈತರ ಸಂಭ್ರಮ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಜಮಾಯಿಸಿದ ರೈತರು ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಪರ ಇಲ್ಲಿನ ರೈತರು ಘೋಷಣೆ ಕೂಗಿದರು. ಅಲ್ಲದೇ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದ ರೈತರನ್ನು ಇದೇ ವೇಳೆ ಸ್ಮರಿಸಲಾಯಿತು.
ದೆಹಲಿ ರೈತರಿಗೆ ಬೆಂಬಲವಾಗಿ ನಡೆದ ಭಾರತ ಬಂದ್ಗೆ ಇಲ್ಲಿನ ರೈತರು ನೈತಿಕ ಬೆಂಬಲ ಸೂಚಿಸಿದ್ದರು. ಅಲ್ಲದೇ ರೈತ ಸಮಾವೇಶ ನಡೆಸಿ ಕೇಂದ್ರದ ನಿರ್ಧಾರವನ್ನು ಖಂಡಿಸಿದ್ದರು.