ಕರ್ನಾಟಕ

karnataka

ETV Bharat / city

ಕಳೆದ 24 ಗಂಟೆಗಳಿಂದ ಆಸ್ಪತ್ರೆ ಆವರಣದಲ್ಲೇ ಬಿದ್ದಿರುವ ಶವ: ಬಿಮ್ಸ್ ಸಿಬ್ಬಂದಿ ಡೋಂಟ್​ ಕೇರ್​

ಬಿಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿನ ಕೋವಿಡ್ ವಾರ್ಡ್ ಎದುರಿಗೆ ಕಳೆದ 24 ಗಂಟೆಗಳಿಂದ ಅಪರಿಚಿತ ವ್ಯಕ್ತಿ ಶವ ಬಿದ್ದಿದ್ದರೂ ಸಿಬ್ಬಂದಿ ಯಾರೂ ತೆಗೆಯುವ, ತಪಾಸಣೆ ಮಾಡುವ ಕೆಲಸ ಮಾಡುತ್ತಿಲ್ಲ ಎಂದು ಸಾಮಾಜಿಕ ಹೋರಾಟಗಾರ ಸುರೇಂದ್ರ ಅನಗೋಳಕರ್ ಆರೋಪಿಸಿದ್ದಾರೆ.

covid-dead-body-fell-infront-of-bims-hospital-no-one-is-caring
ಶವ

By

Published : May 10, 2021, 7:02 PM IST

ಬೆಳಗಾವಿ: ನಗರದ ಚೆನ್ನಮ್ಮ ವೃತ್ತದಲ್ಲಿರುವ ಬಿಮ್ಸ್ ಆಸ್ಪತ್ರೆ ಎದುರು ಕಳೆದ 24 ಗಂಟೆಗಳಿಂದ ಅಪರಿಚಿತನ ಶವ ಬಿದ್ದಿದ್ದರೂ ಆಸ್ಪತ್ರೆ ಸಿಬ್ಬಂದಿ ಮಾತ್ರ ಅದರ ಗೋಜಿಗೆ ಹೋಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಬಿಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿನ ಕೋವಿಡ್ ವಾರ್ಡ್ ಎದುರಿಗೆ ಕಳೆದ 24 ಗಂಟೆಗಳಿಂದ ಅಪರಿಚಿತ ವ್ಯಕ್ತಿ ಶವ ಬಿದ್ದಿದ್ದರೂ ಸಿಬ್ಬಂದಿ ಯಾರೂ ತೆಗೆಯುವ, ತಪಾಸಣೆ ಮಾಡುವ ಕೆಲಸ ಮಾಡುತ್ತಿಲ್ಲ ಎಂದು ಸಾಮಾಜಿಕ ಹೋರಾಟಗಾರ ಸುರೇಂದ್ರ ಅನಗೋಳಕರ್ ಆರೋಪಿಸಿದ್ದಾರೆ.

ಕಳೆದ 24 ಗಂಟೆಗಳಿಂದ ಆಸ್ಪತ್ರೆ ಆವರಣದಲ್ಲೇ ಬಿದ್ದಿರುವ ಶವ

ನಿನ್ನೆಯಿಂದ ಜಿಲ್ಲಾಸ್ಪತ್ರೆ ಎದುರು ಶವ ಬಿದ್ದಿದ್ದಾಗಿ ಸ್ಥಳೀಯರು ಫೋನ್ ಮಾಡಿ ಮಾಹಿತಿ ನೀಡಿದ್ರು. ನಾವು ಬಂದು ನೋಡಿದಾಗ ಈ ವ್ಯಕ್ತಿ ಮೃತಪಟ್ಟಿದ್ದಾಗಿ ಗೊತ್ತಾಗಿದೆ. ಜಿಲ್ಲಾಸ್ಪತ್ರೆ ಅದರಲ್ಲೂ ಕೋವಿಡ್ ಸೆಂಟರ್ ಮುಂದೆಯೇ ವ್ಯಕ್ತಿಯ ಶವ ಬಿದ್ದಿದ್ದರೂ‌ ಇದನ್ನು ಆಸ್ಪತ್ರೆಯ ಯಾವೊಬ್ಬ ಸಿಬ್ಬಂದಿಯೂ ನೋಡಿಲ್ವೇ? ಎಂದು ಬಿಮ್ಸ್ ಆಡಳಿತ ಮಂಡಳಿ ವಿರುದ್ಧ ಸುರೇಂದ್ರ ಅನಗೋಳಕರ್ ಆಕ್ರೋಶ ಹೊರಹಾಕಿದ್ದಾರೆ. ನಮಗೆ ಅನುಮತಿ ಕೊಟ್ಟರೆ ನಾವು ವ್ಯಕ್ತಿಯ ಶವ ಸಂಸ್ಕಾರ ಮಾಡುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details