ಅಥಣಿ: ಬೆಂಬಲ ಬೆಲೆ ಸಿಗದ ಕಾರಣ, ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸ್ವಕ್ಷೇತ್ರದ ಝುಂಜರವಾಡ ಗ್ರಾಮದ ರೈತ ಸ್ವಪ್ನಿಲ್ ಪಾಟೀಲ್ ಎಂಬಾತ ಮೂರು ಎಕರೆಯಲ್ಲಿ ಬೆಳೆದ ಕ್ಯಾಪ್ಸಿಕಂ (ದೊಡ್ಡ ಮೆಣಸಿನಕಾಯಿ) ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಸ್ವಪ್ನಿಲ್ ಪಾಟೀಲ್, ಲಾಕ್ಡೌನ್ ಸಡಲಿಕೆಯಾದರೂ ಕ್ಯಾಪ್ಸಿಕಂಗೆ ಬೇಡಿಕೆ ಇಲ್ಲ. ಹೀಗಾಗಿ, ಮುಂದಿನ ಬೆಳೆ ಬೆಳೆಯಲು ಇದನ್ನು ನಾಶ ಮಾಡುತ್ತಿದ್ದೇನೆ. ತರಕಾರಿ ಬೆಳೆದ ರೈತರಿಗೆ ಒಂದು ಹೆಕ್ಟೇರ್ ₹ 15 ಸಾವಿರ ಪರಿಹಾರ ಸರ್ಕಾರ ಘೋಷಿಸಿದೆ. ಆದರೆ, ಈವರೆಗೂ ಒಂದು ರುಪಾಯಿ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.