ಬೆಳಗಾವಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಬೆಳಗಾವಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ವ್ಯಂಗ್ಯವಾಡಿದ್ದು, 'ನಾಳೆ ಬಾ' ಎಂಬಂತಿದೆ ಎಂದರು. ಇದೇ ವೇಳೆ, ಅದು ಆಗೋದಲ್ಲ, ಹೋಗೋದಲ್ಲ. ನನಗೆ ಮಂತ್ರಿ ಸ್ಥಾನ ಕೊಡೋದು, ಬಿಡೋದು ಸಿಎಂ ವಿವೇಚನೆಗೆ ಬಿಟ್ಟಿದ್ದು ಎಂದು ತಿಳಿಸಿದರು.
ಶಾಸಕ ಅಭಯ್ ಪಾಟೀಲ್‌ಗೆ ಸಿಎಂ ಬುಲಾವ್ ಅನ್ನೋದು ತಪ್ಪು. ಎಲ್ಲ ಶಾಸಕರಿಗೂ ಊಟಕ್ಕೆ ಕರೆದಿದ್ದರು. ಹೀಗಾಗಿ ಊಟ ಮಾಡಿ ಬಂದಿದ್ದೇವೆ. ಮೂರು ಸ್ವೀಟ್, ರೊಟ್ಟಿ ಜೊತೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದ ಊಟ ಇತ್ತು ಎಂದು ಸ್ಪಷ್ಟನೆ ಕೊಟ್ಟರು.