ಚಿಕ್ಕೋಡಿ (ಬೆಳಗಾವಿ): ಸಾಮಾನ್ಯವಾಗಿ ವಿವಾಹ ಆರತಕ್ಷತೆ ಎಂದರೆ ಪೆಂಡಾಲ್, ಡಿಜೆ, ಬಂಧು-ಬಳಗ, ಮಾವಿನ ತಳಿರು-ತೋರಣಗಳು ಇರುತ್ತವೆ. ಆದರೆ, ಇಲ್ಲೊಬ್ಬ ಕನ್ನಡಪ್ರೇಮಿ ವಿನೂತನವಾಗಿ ಆರತಕ್ಷತೆ ಮಾಡಿಕೊಂಡಿದ್ದಾರೆ.
ಕಳೆದ ಡಿಸೆಂಬರ್ 17 ರಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿ ಕುಮಾರ ತಳವಾರ ಹಾಗೂ ಸಂಧ್ಯಾ ಬನಸೋಡೆ ಹಿರಿಯರ ಸಮ್ಮುಖದಲ್ಲಿ ಸರಳ ವಿವಾಹವಾಗಿದ್ದರು. ಸಂಧ್ಯಾ ಮೂಲತಃ ಅಥಣಿ ತಾಲೂಕಿನ ಅನಂತಪೂರ ಗ್ರಾಮದವರಾಗಿದ್ದು, ಸದ್ಯ ಎಂ.ಎ ಪ್ರಥಮ ವ್ಯಾಸಂಗ ಮಾಡುತ್ತಿದ್ದಾರೆ. ಕುಮಾರ ಅವರ ಕನ್ನಡಪರ ಕಾಳಜಿ, ಚಿಂತನೆಗಳಿಗೆ ಪ್ರೇರಣೆಯಾಗಿ ಇಬ್ಬರು ವಿನೂತನವಾಗಿ ಆರತಕ್ಷತೆ ಮಾಡಿಕೊಂಡಿದ್ದಾರೆ.