ಹೈದರಾಬಾದ್: ಜಗತ್ತಿನ ಅತಿದೊಡ್ಡ ಕಾರ್ಗೊ ವಿಮಾನವಾದ ಏರ್ಬಸ್ ಬೆಲುಗ ಶಂಶಾಬಾದ್ಗೆ ಬಂದಿಳಿದಿದೆ. ವೇಲ್ನಷ್ಟೆ ದೈತ್ಯವಾಗಿರುವ ಈ ವಿಮಾನ ದುಬೈನ ಅಲ್ ಮಕಟೂಮ್ನಿಂದ ಥಾಯ್ಲೆಂಡ್ಗೆ ಪ್ರಯಾಣಿಸುವ ಮಧ್ಯೆ ಇಂಧನವನ್ನು ತುಂಬಿಸುವ ಉದ್ದೇಶದಿಂದ ಶಂಶಾಬಾದ್ಗೆ ಭಾನುವಾರ ರಾತ್ರಿ ಬಂದಿಳಿದಿತು.
ತಿಮಿಂಗಲ ರೀತಿಯಲ್ಲಿಯೇ ಇರುವ ಈ ವಿಮಾನ ಹಲವು ವಿಶೇಷತೆ ಒಳಗೊಂಡಿದೆ. ಈ ರೀತಿಯ 5 ವಿಶೇಷ ಕಾರ್ಗೋ ವಿಮಾನವನ್ನು ಏರ್ಬಸ್ ಕಂಪನಿ ನಿರ್ಮಾಣ ಮಾಡಿದೆ. ಸಾಮಾನ್ಯವಾಗಿ ಸಾಮಗ್ರಿಗಳನ್ನು ತುಂಬುವುದು ಮತ್ತು ಇಳಿಸುವುದು ಎಲ್ಲ ವಿಮಾನಗಳಲ್ಲಿ ಹಿಂಬದಿಯಿಂದ ನಡೆಯುತ್ತಿದೆ. ಆದರೆ, ಈ ವಿಮಾನದಲ್ಲಿ ಮುಂಭಾಗದಿಂದ ಈ ಚಟುವಟಿಕೆ ನಡೆಸಲಾಗುವುದು. ಈ ಮೊದಲು ಅನ್ಟೊವ ಎಎನ್ 225 ಮ್ರಿಯ ಜಗತ್ತಿನ ದೊಡ್ಡ ಕಾರ್ಗೊ ವಿಮಾನವಾಗಿತ್ತು. ಆದರೆ, ರಷ್ಯಾ- ಉಕ್ರೇನ್ ಯುದ್ಧ ಪರಿಣಾಮ ಇದರ ಹಾರಾಟವನ್ನು ರಷ್ಯಾ ನಿಲ್ಲಿಸಿದೆ. ಈ ಹಿನ್ನೆಲೆ ಈ ವಿಮಾನ ಇದೀಗ ಅತಿದೊಡ್ಡ ಕಾರ್ಗೊ ವಿಮಾನವಾಗಿದೆ.
ಇದರ ವಿಶೇಷತೆ ಗೊತ್ತೆ?
ಮೊದಲ ವಿಮಾನ ತಯಾರಾಗಿದ್ದು 1994 ಸೆಪ್ಟೆಂಬರ್ 13
ಸೇವೆಗೆ ಸಿದ್ದವಾಗಿದ್ದು: 1996