ಒಟ್ಟಾವಾ, ಕೆನಡಾ:ಕೆನಡಾದ ಜಸ್ಟಿನ್ ಟ್ರುಡೊ ಸರ್ಕಾರವು ಆದೇಶವೊಂದನ್ನು ಮಾಡಿದೆ. ಈ ಆದೇಶದ ವಿರುದ್ಧ ಎಕ್ಸ್ ಮಾಲೀಕ ಮಸ್ಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆನಡಾ ಸರ್ಕಾರದ ಆದೇಶ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ ಎಂದು ಸ್ಪೇಸ್‌ಎಕ್ಸ್ ಸಂಸ್ಥಾಪಕ ಮತ್ತು ಸಿಇಒ ಎಲೋನ್ ಮಸ್ಕ್ ಆರೋಪಿಸಿದ್ದಾರೆ. ಆನ್‌ಲೈನ್ ಸ್ಟ್ರೀಮಿಂಗ್ ಸೇವೆಗಳ ನಿಯಂತ್ರಣಕ್ಕಾಗಿ ಸರ್ಕಾರದೊಂದಿಗೆ ಔಪಚಾರಿಕವಾಗಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಕೆನಡಾ ಸರ್ಕಾರವು ಇತ್ತೀಚೆಗೆ ಆದೇಶದಲ್ಲಿ ಹೇಳಿದೆ. ಈ ಆದೇಶದ ಬಳಿಕ ಎಲೋನ್ ಮಸ್ಕ್ ಅವರ ಈ ಹೇಳಿಕೆ ಹೊರ ಬಿದ್ದಿದೆ.
ಟ್ರೂಡೊ ಕೆನಡಾದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ ಎಂದು ಮಸ್ಕ್ ತಮ್ಮ ಎಕ್ಸ್ ಖಾತೆಯಿಂದ ಪೋಸ್ಟ್ ಮಾಡಿದ್ದಾರೆ. ನಿಯಂತ್ರಕ ನಿಯಂತ್ರಣಕ್ಕಾಗಿ ನೋಂದಣಿ ಕುರಿತು ಕೆನಡಾದ ಸರ್ಕಾರದ ಮಾತುಗಳ ವಿರುದ್ಧ ಮಸ್ಕ್ ಆಕ್ರೋಶ ವ್ಯಕ್ತಪಡಿಸಿದ್ದು, ಈ ಆದೇಶವನ್ನು ಅವರು ವಿರೋಧಿಸಿದ್ದಾರೆ.
ವಿಶ್ವದ ಅತ್ಯಂತ ದಮನಕಾರಿ ಆನ್‌ಲೈನ್ ಸೆನ್ಸಾರ್‌ಶಿಪ್ ಯೋಜನೆಗಳಲ್ಲಿ ಒಂದನ್ನು ಹೊಂದಿರುವ ಕೆನಡಾ ಸರ್ಕಾರವು, ಪಾಡ್‌ಕಾಸ್ಟ್‌ಗಳನ್ನು ನೀಡುವ ಎಲ್ಲಾ ಆನ್‌ಲೈನ್ ಸ್ಟ್ರೀಮಿಂಗ್ ಸೇವೆಗಳು ನಿಯಂತ್ರಣವನ್ನು ನೀಡಲು ಸರ್ಕಾರದೊಂದಿಗೆ ಔಪಚಾರಿಕವಾಗಿ ನೋಂದಾಯಿಸಿಕೊಳ್ಳುವ ಅಗತ್ಯವಿದೆ ಎಂದು ಘೋಷಿಸಿದೆ ಅಂತಾ ಗ್ರೀನ್ವಾಲ್ಡ್ ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಗ್ರೀನ್ವಾಲ್ಡ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಎಲೋನ್ ಮಸ್ಕ್, ಟ್ರೂಡೊ ಕೆನಡಾದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.