ಕರ್ನಾಟಕ

karnataka

ETV Bharat / business

ಪ್ರಥಮ ಬಾರಿಗೆ ಲಾಭ ಗಳಿಸಿದ ಸ್ವಿಗ್ಗಿ: ಸಿಇಒ ಶ್ರೀಹರ್ಷ ಮೆಜೆಟಿ ಹೇಳಿಕೆ - ಸ್ವಿಗ್ಗಿ ಸಿಇಒ ಶ್ರೀಹರ್ಷ ಮೆಜೆಟಿ

ಫುಡ್ ಡೆಲಿವರಿ ಕಂಪನಿಯಾಗಿರುವ ಸ್ವಿಗ್ಗಿ ಇದೇ ಮೊದಲ ಬಾರಿಗೆ ಲಾಭ ಗಳಿಸಿದೆ. ಆರಂಭವಾದ 9 ವರ್ಷಗಳ ನಂತರ ಕಂಪನಿ ಲಾಭ ಗಳಿಸಲಾರಂಭಿಸಿದೆ.

Our food delivery business turns profitable, says Swiggy CEO
Our food delivery business turns profitable, says Swiggy CEO

By

Published : May 18, 2023, 2:57 PM IST

ನವದೆಹಲಿ :ಉದ್ಯೋಗಿಗಳ ಸ್ಟಾಕ್ ಆಯ್ಕೆಯ ವೆಚ್ಚಗಳನ್ನು ಹೊರತುಪಡಿಸಿ, ಎಲ್ಲ ಕಾರ್ಪೊರೇಟ್ ವೆಚ್ಚಗಳನ್ನು ಲೆಕ್ಕ ಹಾಕಿದ ನಂತರ (ಮಾರ್ಚ್ 2023 ರಲ್ಲಿದ್ದಂತೆ) ತಮ್ಮ ಆಹಾರ ವಿತರಣಾ ವ್ಯವಹಾರವು ಲಾಭದಾಯಕವಾಗಿದೆ ಎಂದು ಸ್ವಿಗ್ಗಿ ಸಿಇಒ ಶ್ರೀಹರ್ಷ ಮೆಜೆಟಿ ಗುರುವಾರ ಹೇಳಿದ್ದಾರೆ. ಲಾಭದ ಬಗ್ಗೆ ಯಾವುದೇ ನಿರ್ದಿಷ್ಟ ಅಂಕಿ ಸಂಖ್ಯೆಗಳನ್ನು ಹಂಚಿಕೊಳ್ಳದ ಮೆಜೆಟಿ, ಜಾಗತಿಕವಾಗಿ ಆಹಾರ ವಿತರಣಾ ಉದ್ಯಮದಲ್ಲಿ ಇದೊಂದು ಮೈಲಿಗಲ್ಲು ಎಂದು ಹೇಳಿದರು. ಪ್ರಾರಂಭವಾದ ಒಂಬತ್ತು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಲಾಭದಾಯಕತೆ ಸಾಧಿಸಿರುವ ಕೆಲವೇ ಕೆಲವು ಜಾಗತಿಕ ಫುಡ್ ಡೆಲಿವರಿ ಪ್ಲಾಟ್​ಫಾರ್ಮ್​ಗಳ ಪೈಕಿ ಸ್ವಿಗ್ಗಿ ಒಂದಾಗಿದೆ.

ನಮ್ಮ ತಂಡಗಳು ಸ್ವಿಗ್ಗಿಯೊಂದಿಗೆ ತಮ್ಮ ಅನುಭವ ಸುಧಾರಿಸಲು ಮತ್ತು ಪರಸ್ಪರ ಗೆಲುವುಗಳನ್ನು ಸೃಷ್ಟಿಸಲು ರೆಸ್ಟೋರೆಂಟ್ ಪಾಲುದಾರರೊಂದಿಗೆ ಹಿಂದೆಂದಿಗಿಂತಲೂ ಹೆಚ್ಚು ಹೊಂದಿಕೊಂಡಿದ್ದಾರೆ. ಇದರ ಪರಿಣಾಮವಾಗಿ, ನಮ್ಮ ರೆಸ್ಟೋರೆಂಟ್ ನಿವ್ವಳ ಪ್ರವರ್ತಕ ಸ್ಕೋರ್ (NPS) ಕಳೆದ 8 ತ್ರೈಮಾಸಿಕಗಳಲ್ಲಿ 100 ಪ್ರತಿಶತದಷ್ಟು ಸುಧಾರಿಸಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ವರ್ಷ ಸ್ವಿಗ್ಗಿ, ಡೈನ್ಔಟ್ ಅನ್ನು ಸುಮಾರು 120 ಮಿಲಿಯನ್ ಆಲ್ ಸ್ಟಾಕ್ ಒಪ್ಪಂದದಲ್ಲಿ ಸ್ವಾಧೀನಪಡಿಸಿಕೊಂಡಿತು. ಇಂದು 34 ನಗರಗಳಲ್ಲಿ 21,000 ಕ್ಕೂ ಹೆಚ್ಚು ರೆಸ್ಟೋರೆಂಟ್ ಪಾಲುದಾರರನ್ನು ಹೊಂದಿರುವ ಡೈನಿಂಗ್ ಔಟ್ ವಿಭಾಗದಲ್ಲಿ ಇದು ಮುಂಚೂಣಿಯಲ್ಲಿದೆ ಎಂದು ಸಿಇಒ ಹೇಳಿದರು.

ಮಾರುಕಟ್ಟೆ ಸಂಶೋಧನಾ ಸಂಸ್ಥೆ ರೆಡ್ ಸೀಯರ್ ಪ್ರಕಾರ, ಸ್ವಿಗ್ಗಿ ವಾಹಿವಾಟು 2025 ರ ವೇಳೆಗೆ 5.5 ಶತಕೋಟಿ ಡಾಲರ್ ಮುಟ್ಟುವ ನಿರೀಕ್ಷೆಯಿದೆ. ಕಳೆದ ಹಣಕಾಸು ವರ್ಷದಲ್ಲಿ ಆಗಿದ್ದ 1,617 ಕೋಟಿ ರೂಪಾಯಿ ನಷ್ಟಕ್ಕೆ ಹೋಲಿಸಿದರೆ ಹಣಕಾಸು ವರ್ಷ 2022 ರಲ್ಲಿ ಸ್ವಿಗ್ಗಿಯ ನಷ್ಟವು 3,629 ಕೋಟಿ ರೂಪಾಯಿಗಳಿಗೆ ದ್ವಿಗುಣಗೊಂಡಿದೆ. ಕಂಪನಿಗಳ ರಿಜಿಸ್ಟ್ರಾರ್ (RoC) ಗೆ ಸಲ್ಲಿಸಲಾದ ವಾರ್ಷಿಕ ಹಣಕಾಸು ಹೇಳಿಕೆಯ ಪ್ರಕಾರ, ಹಣಕಾಸು ವರ್ಷ 2021 ರಲ್ಲಿ ಅದರ ಆದಾಯವು 2,547 ಕೋಟಿ ರೂಪಾಯಿ ಆಗಿತ್ತು. ಹಾಗೆಯೇ ಇದು ಹಣಕಾಸು ವರ್ಷ 2022 ರ ಅವಧಿಯಲ್ಲಿ 5,705 ಕೋಟಿ ರೂಪಾಯಿಗಳಿಗೆ ಅಂದರೆ 2.2 ಪಟ್ಟು ಹೆಚ್ಚಾಗಿದೆ.

ಸ್ವಿಗ್ಗಿ ಇದು ಆನ್‌ಲೈನ್ ಆಹಾರ ಆರ್ಡರ್ ಮತ್ತು ಡೆಲಿವರಿ ಉದ್ಯಮದಲ್ಲಿ ಅಗ್ರಮಾನ್ಯ ಕಂಪನಿಗಳಲ್ಲಿ ಒಂದಾಗಿದೆ. ಇದು ಪ್ರಪಂಚದಾದ್ಯಂತ ವಹಿವಾಟು ಹೊಂದಿದೆ. ಅದರ ವೇಗದ ಆಹಾರ ವಿತರಣೆಯು ಜನರಿಗೆ ಸಾಕಷ್ಟು ಅನುಕೂಲ ಮಾಡಿದೆ. ಇದು ಇಂಡಿಯಾ ಯುನಿಕಾರ್ನ್ ಸ್ಟಾರ್ಟ್‌ಅಪ್ ಪಟ್ಟಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 2014 ರಲ್ಲಿ ಪ್ರಾರಂಭವಾದ ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಆಗಿರುವ ಸ್ವಿಗ್ಗಿ ಇದೀಗ, ಇದು 100 ಕ್ಕೂ ಹೆಚ್ಚು ಭಾರತೀಯ ನಗರಗಳಿಗೆ ವಿಸ್ತರಣೆಯಾಗಿದೆ. 2014 ರಲ್ಲಿ ಸ್ವಿಗ್ಗಿ ಅಸ್ತಿತ್ವಕ್ಕೆ ಬಂದಿತು. ಇಬ್ಬರು BITS ಪಿಲಾನಿ ಪದವೀಧರರಾದ ಶ್ರೀಹರ್ಷ ಮೆಜೆಟಿ ಮತ್ತು ನಂದನ್ ರೆಡ್ಡಿ ಅವರು 'ಹೈಪರ್ ಲೋಕಲ್ ಫುಡ್ ಡೆಲಿವರಿ' ಪರಿಕಲ್ಪನೆಯನ್ನು ಮೊದಲ ಬಾರಿಗೆ ಜಗತ್ತಿಗೆ ತಿಳಿಸಿದರು.

ಇದನ್ನೂ ಓದಿ : ಅದಾನಿ-ಹಿಂಡೆನ್​ಬರ್ಗ್​: ಆ.14 ರಂದು ತನಿಖಾ ವರದಿ ಸಲ್ಲಿಸಲು ಸೆಬಿಗೆ ಸೂಚನೆ

ABOUT THE AUTHOR

...view details