ನವದೆಹಲಿ:ಜೂನ್ ತಿಂಗಳು ಮುಗಿಯುತ್ತಿದೆ. ನೀವು ಇನ್ನೂ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡದಿದ್ದರೆ ಆದಷ್ಟು ಬೇಗ ಈ ಕಾರ್ಯ ಮಾಡಿ ಮುಗಿಸಿ. ಪ್ಯಾನ್-ಆಧಾರ್ ಲಿಂಕ್ ಮಾಡುವ ಗಡುವು ಹತ್ತಿರ ಬಂದಿದೆ. ಈ ಮೊದಲು ಪ್ಯಾನ್ ಮತ್ತು ಆಧಾರ ಜೋಡಣೆ ಮಾಡುವುದಕ್ಕೆ ಮಾರ್ಚ್ 31 ರವರೆಗೆ ಸಮಯವನ್ನು ನಿಗದಿಪಡಿಸಲಾಗಿತ್ತು. ಆಗ ಅದನ್ನು ಜೂನ್ 30, 2023 ರವರೆಗೆ ವಿಸ್ತರಿಸಲಾಗಿತ್ತು. ಈಗ ಈ ಗಡುವಿನೊಳಗೆ ನೀವು ಪ್ಯಾನ್-ಆಧಾರ್ ಲಿಂಕ್ ಮಾಡದಿದ್ರೆ ನಿಮ್ಮ ಪ್ಯಾನ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ವಾಸ್ತವವಾಗಿ ಈ ಹಿಂದೆ ಪ್ಯಾನ್-ಆಧಾರ್ ಲಿಂಕ್ ಮಾಡುವ ಅಗತ್ಯವಿರಲಿಲ್ಲ. ಆದರೆ ಈಗ ಅದನ್ನು ಕಡ್ಡಾಯಗೊಳಿಸಲಾಗಿದೆ. ಜುಲೈ 1, 2017 ರಂದು ನೀಡಲಾದ ಎಲ್ಲಾ ಪ್ಯಾನ್ ಕಾರ್ಡ್‌ಗಳಿಗೆ ಆಧಾರ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ.
ಪ್ಯಾನ್-ಆಧಾರ್ ಲಿಂಕ್‌ಗಾಗಿ 1000 ರೂಪಾಯಿ ದಂಡ: ನಿಗದಿತ ಗಡುವಿನೊಳಗೆ ಪ್ಯಾನ್- ಆಧಾರ್ ಲಿಂಕ್ ಮಾಡಿದಲ್ಲಿ ವಿಳಂಬ ಶುಲ್ಕವಾದ 1 ಸಾವಿರ ರೂ. ಮಾತ್ರ ಪಾವತಿಸಬೇಕು. ಇಲ್ಲವಾದಲ್ಲಿ 10 ಸಾವಿರ ದಂಡ ಕಟ್ಟಬೇಕಾಗುತ್ತದೆ. ಪ್ಯಾನ್ ನಿಷ್ಕ್ರಿಯವಾಗಿರುವ ಅವಧಿಯವರೆಗಿನ ಮರುಪಾವತಿಗಳಿಗೆ ಬಡ್ಡಿಯೂ ಸಿಗುವುದಿಲ್ಲ. ಯಾವುದೇ ತೆರಿಗೆ ಮರುಪಾವತಿಯೂ ಆಗುವುದಿಲ್ಲ. ಟಿಡಿಎಸ್ ಮತ್ತು ಟಿಸಿಎಸ್ ಅನ್ನು ಅಧಿಕ ಪ್ರಮಾಣದಲ್ಲಿ ಕಡಿತ ಮಾಡಲಾಗುತ್ತದೆ.
ಪ್ಯಾನ್ ಕಾರ್ಡ್ ನಿಷ್ಕ್ರಿಯವಾದ್ರೆ ಆಗುವ ಸಮಸ್ಯೆಗಳಿವು: ಪ್ಯಾನ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಿದಾಗ, ನಿಮ್ಮ ಹಲವು ಪ್ರಮುಖ ಕೆಲಸಗಳು ನಿಲ್ಲುತ್ತವೆ. ಮ್ಯೂಚುವಲ್ ಫಂಡ್‌ಗಳು ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಇದರ ಹೊರತಾಗಿ, ನೀವು ಆದಾಯ ತೆರಿಗೆ ರಿಟರ್ನ್ (ITR) ಅನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ. ಇದರೊಂದಿಗೆ 50 ಸಾವಿರ ರೂ.ಗಿಂತ ಹೆಚ್ಚಿನ ನಗದು ಹಿಂಪಡೆಯಲು ಬ್ಯಾಂಕ್‌ನಲ್ಲಿ ಪ್ಯಾನ್ ಕಾರ್ಡ್ ತೋರಿಸುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಒಂದೇ ಬಾರಿಗೆ ಅಷ್ಟು ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಇದಲ್ಲದೆ, ನೀವು ತೆರಿಗೆ ಪ್ರಯೋಜನ, ಕ್ರೆಡಿಟ್ ಕಾರ್ಡ್ ಮತ್ತು ಬ್ಯಾಂಕ್ ಸಾಲದಂತಹ ಸೌಲಭ್ಯಗಳಿಂದ ವಂಚಿತರಾಗಬಹುದು.
ಪ್ಯಾನ್ ಆಧಾರ್ ಲಿಂಕ್ ಮಾಡುವ ವಿಧಾನ ಹೇಗೆ?
* ಮೊದಲನೆಯದಾಗಿ ಪ್ಯಾನ್ ಕಾರ್ಡ್ ಹೊಂದಿರುವವರ ಆದಾಯ ತೆರಿಗೆ www.incometax.gov.in ನ ಇ-ಫೈಲಿಂಗ್ ವೆಬ್‌ಸೈಟ್‌ಗೆ ಹೋಗಬೇಕು.
* ನೀವು ಇಲ್ಲಿ ನೋಂದಾಯಿಸದಿದ್ದರೆ, ಮೊದಲು ನೋಂದಾಯಿಸಿ.
* ಬಳಕೆದಾರ ಐಡಿ, ಪಾಸ್ವರ್ಡ್ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಲಾಗ್ ಇನ್ ಮಾಡಿ.
* ನಂತರ ನಿಮ್ಮ ಮುಂದೆ ಪಾಪ್ ಅಪ್ ವಿಂಡೋ ತೆರೆದುಕೊಳ್ಳುತ್ತದೆ. ಅದರಲ್ಲಿ ಆಧಾರ್‌ಗೆ ಲಿಂಕ್ ಮಾಡಲಾದ ಪ್ಯಾನ್ ಆಯ್ಕೆಯು ಗೋಚರಿಸುತ್ತದೆ.