ಕರ್ನಾಟಕ

karnataka

ETV Bharat / business

ಲಿಂಕ್ಡ್​ಇನ್​ನಿಂದ 716 ಉದ್ಯೋಗಿಗಳು ವಜಾ, ಚೀನಾದಲ್ಲಿ ಆ್ಯಪ್ ಸ್ಥಗಿತ - ಜಾಗತಿಕವಾಗಿ ಲಿಂಕ್ಡ್​​ಇನ್ ಈಗ 930 ಮಿಲಿಯನ್‌ಗಿಂತಲೂ

ವಿಶ್ವದ ಪ್ರಮುಖ ಸೋಷಿಯಲ್ ನೆಟ್ವರ್ಕಿಂಗ್ ಕಂಪನಿಗಳಲ್ಲಿ ಒಂದಾಗಿರುವ ಲಿಂಕ್ಡ್​ಇನ್ 716 ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಘೋಷಿಸಿದೆ.

LinkedIn lays off 716 employees, shuts China app
LinkedIn lays off 716 employees, shuts China app

By

Published : May 9, 2023, 2:54 PM IST

ನವದೆಹಲಿ : ಮೈಕ್ರೋಸಾಫ್ಟ್ ಒಡೆತನದ ಕಂಪನಿ ಲಿಂಕ್ಡ್‌ಇನ್ 716 ಉದ್ಯೋಗಿಗಳನ್ನು ವಜಾಗೊಳಿಸಿದೆ. ಕಂಪನಿಯು ತನ್ನ ಗ್ಲೋಬಲ್ ಬಿಸಿನೆಸ್ ಆರ್ಗನೈಸೇಶನ್ (GBO)ಗೆ ಬದಲಾವಣೆಗಳನ್ನು ಮಾಡುತ್ತಿರುವುದರಿಂದ ಮತ್ತು ಚೀನಾದಲ್ಲಿ ತನ್ನ InCareer ಅಪ್ಲಿಕೇಶನ್ ಅನ್ನು ಬಂದ್ ಮಾಡಿರುವ ಕಾರಣದಿಂದ ಉದ್ಯೋಗಿಗಳನ್ನು ವಜಾಗೊಳಿಸಿದೆ. ಕಂಪನಿಯ ಕಾರ್ಯಾಚರಣೆಗಳನ್ನು ಸುಗಮಗೊಳಿಸುವ ದೃಷ್ಟಿಯಿಂದ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ ಎಂದು ಉದ್ಯೋಗಿಗಳಿಗೆ ಕಳುಹಿಸಿದ ಇಮೇಲ್​ನಲ್ಲಿ ಸಿಇಓ ರಿಯಾನ್ ರೋಸ್ಲಾನ್​ಸ್ಕಿ ತಿಳಿಸಿದ್ದಾರೆ. "ವೇಗವಾಗಿ ಬದಲಾಗುತ್ತಿರುವ ಪರಿಸ್ಥಿತಿಗಳಲ್ಲಿ ನಾವು ನಮ್ಮ ಗ್ಲೋಬಲ್ ಬಿಸಿನೆಸ್ ಆರ್ಗನೈಸೇಶನ್ ನಲ್ಲಿ ಬದಲಾವಣೆಗಳನ್ನು ಮಾಡುತ್ತಿರುವುದರಿಂದ ಮತ್ತು ನಮ್ಮ ಚೀನಾ ನೀತಿಗಳಲ್ಲಿ ಬದಲಾವಣೆಗಳಾಗುತ್ತಿರುವುದರಿಂದ 716 ಉದ್ಯೋಗಗಳು ಕಡಿತವಾಗಲಿವೆ" ಎಂದು ಇಮೇಲ್​ನಲ್ಲಿ ಹೇಳಲಾಗಿದೆ.

"ಈ ನಿರ್ಧಾರದಿಂದ ನಿಮ್ಮ ಉದ್ಯೋಗದ ಮೇಲೆ ನೇರವಾಗಿ ಪ್ರಭಾವವಾಗುತ್ತಿದ್ದರೆ, ನಿಮ್ಮ ತಂಡದ ನಾಯಕ ಮತ್ತು ನಮ್ಮ GTO ಯ ಪ್ರತಿನಿಧಿಯೊಂದಿಗೆ ಸಭೆಗಾಗಿ ಮುಂದಿನ ಗಂಟೆಯೊಳಗೆ ನೀವು ಕ್ಯಾಲೆಂಡರ್ ಆಹ್ವಾನವನ್ನು ಸ್ವೀಕರಿಸುತ್ತೀರಿ" ಎಂದು ಅವರು ಹೇಳಿದ್ದಾರೆ. ಪ್ಲಾಟ್‌ಫಾರ್ಮ್ ತನ್ನ ಸದಸ್ಯರು ಮತ್ತು ಗ್ರಾಹಕರಿಗೆ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಅರ್ಥಪೂರ್ಣ ಪ್ರಗತಿ ಸಾಧಿಸುತ್ತಿರುವಾಗ ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ದಾಖಲೆಯ ಬಳಕೆದಾರರು ಸೇರಿಕೊಳ್ಳುತ್ತಿರುವಾಗ, ನಾವು ಗ್ರಾಹಕರ ನಡವಳಿಕೆಯಲ್ಲಿ ಬದಲಾವಣೆಗಳನ್ನು ಮತ್ತು ನಿಧಾನವಾದ ಆದಾಯದ ಬೆಳವಣಿಗೆಯನ್ನು ಸಹ ನೋಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

"ಸತತವಾಗಿ ಬದಲಾಗುತ್ತಿರುವ ಮಾರುಕಟ್ಟೆಯಲ್ಲಿ, ನಮ್ಮ ಗುರಿಗಳನ್ನು ಸಾಧಿಸಲು ಬೇಕಾದ ಕಾರ್ಯತಂತ್ರವನ್ನು ನಾವು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ" ಎಂದು ಸಿಇಒ ಹೇಳಿದರು. ಲಿಂಕ್ಡ್‌ಇನ್​ಗೆ ಮಾರ್ಚ್ ತ್ರೈಮಾಸಿಕದಲ್ಲಿ ದಾಖಲೆಯ ಬಳಕೆದಾರರು ಸೇರಿಕೊಂಡಿದ್ದಾರೆ. ಜಾಗತಿಕವಾಗಿ ಲಿಂಕ್ಡ್​​ಇನ್ ಈಗ 930 ಮಿಲಿಯನ್‌ಗಿಂತಲೂ ಹೆಚ್ಚು ಸದಸ್ಯರನ್ನು ಹೊಂದಿದೆ. ಮಾರ್ಚ್ ತ್ರೈಮಾಸಿಕದಲ್ಲಿ ಲಿಂಕ್ಡ್‌ಇನ್ ಆದಾಯವು ಶೇಕಡಾ 8 ರಷ್ಟು ಹೆಚ್ಚಾಗಿದೆ. 2016 ರಲ್ಲಿ ಮೈಕ್ರೋಸಾಫ್ಟ್ ಲಿಂಕ್ಡ್‌ಇನ್ ಅನ್ನು 26 ಶತಕೋಟಿ ಡಾಲರ್​ಗೂ ಹೆಚ್ಚು ಮೊತ್ತಕ್ಕೆ ಸ್ವಾಧೀನಪಡಿಸಿಕೊಂಡಿತ್ತು. ಕಂಪನಿಯು ತನ್ನ ಚೀನಾದಲ್ಲಿನ ಎಂಜಿನಿಯರಿಂಗ್ ಮತ್ತು ಪ್ರಾಡಕ್ಟ್​ ಟೀಂ ಗಳನ್ನು ಸ್ಥಗಿತಗೊಳಿಸುವ ಪ್ರಕ್ರಿಯೆಯನ್ನು ಮತ್ತು ಕಾರ್ಪೊರೇಟ್ ಆಡಳಿತವನ್ನು, ಮಾರಾಟವನ್ನು ಮತ್ತು ಮಾರ್ಕೆಟಿಂಗ್ ಕಾರ್ಯಗಳನ್ನು ಕಿರಿದಾಗಿಸುವ ಪ್ರಕ್ರಿಯೆಯನ್ನು ಕೈಗೊಂಡಿದೆ.

ಲಿಂಕ್ಡ್‌ಇನ್ ಎನ್ನುವುದು ಉದ್ಯಮ ಸಮುದಾಯಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸಾಮಾಜಿಕ ನೆಟ್‌ವರ್ಕಿಂಗ್ ಸೈಟ್ ಆಗಿದೆ. ನೋಂದಾಯಿತ ಸದಸ್ಯರಿಗೆ ಅವರು ತಿಳಿದಿರುವ ಮತ್ತು ವೃತ್ತಿಪರವಾಗಿ ನಂಬುವ ಜನರ ನೆಟ್‌ವರ್ಕ್‌ಗಳನ್ನು ಆರಂಭಿಸಲು ಮತ್ತು ದಾಖಲಿಸಲು ಸಕ್ರಿಯಗೊಳಿಸುವುದು ಸೈಟ್‌ನ ಗುರಿಯಾಗಿದೆ. ಲಿಂಕ್ಡ್‌ಇನ್ ವೃತ್ತಿಪರರಿಗೆ ಉದ್ಯೋಗ ಹುಡುಕಲು, ಕಂಪನಿಗಳನ್ನು ಹುಡುಕಲು ಮತ್ತು ಅವರ ಉದ್ಯಮ ಮತ್ತು ವ್ಯಾಪಾರ ಸಂಪರ್ಕಗಳ ಬಗ್ಗೆ ಸುದ್ದಿಗಳನ್ನು ಪಡೆಯುವ ಮೂಲವಾಗಿದೆ.

ವಿಶ್ವಾದ್ಯಂತ ಬೇಡಿಕೆಯೊಂದಿಗೆ ಉದ್ಯೋಗಿಗಳ ಪೂರೈಕೆಯನ್ನು ಜೋಡಿಸಲು ಸಹಾಯ ಮಾಡುವ ಮಾದರಿಗಳ ಕುರಿತು ಡೇಟಾ - ಚಾಲಿತ ಒಳನೋಟವನ್ನು ನೀತಿ ನಿರೂಪಕರು, ಉದ್ಯೋಗದಾತರು, ಕೆಲಸಗಾರರು ಮತ್ತು ಶಿಕ್ಷಕರಿಗೆ ಒದಗಿಸಲು ಲಿಂಕ್ಡ್‌ಇನ್ ಪ್ರೊಫೈಲ್‌ಗಳಾದ್ಯಂತ ಡೇಟಾವನ್ನು ಸಂಗ್ರಹಿಸುತ್ತದೆ. ಸಂಭಾವ್ಯ ಉದ್ಯೋಗಿಗಳನ್ನು ಪರೀಕ್ಷಿಸಲು ಮತ್ತು ನೇಮಕ ಮಾಡಿಕೊಳ್ಳಲು ಹೆಚ್ಚೆಚ್ಚು ಉದ್ಯಮಗಳು ಲಿಂಕ್ಡ್‌ಇನ್ ಅನ್ನು ಬಳಸುತ್ತವೆ. ಹೀಗಾಗಿ ಲಿಂಕ್ಡ್‌ಇನ್ ಪ್ರೊಫೈಲ್ ಹೊಂದುವುದರಿಂದ ಮುಂದಿನ ಬಾರಿ ಕೆಲಸ ಹುಡುಕುವಾಗ ನಿಮಗೆ ಸಹಾಯವಾಗಬಹುದು.

ಇದನ್ನೂ ಓದಿ : ಜು.1 ರಿಂದ ಚಿನ್ನದ ಹಾಲ್​ಮಾರ್ಕಿಂಗ್​ ಕಡ್ಡಾಯ ನಿಯಮ ಜಾರಿ ಸಾಧ್ಯತೆ ಇಲ್ಲ!

ABOUT THE AUTHOR

...view details