ನವದೆಹಲಿ: ಪ್ರಸ್ತುತ ಮಹಿಳಾ ಉದ್ಯೋಗಿಗಳಿಗೆ ಇರುವ ಆರು ತಿಂಗಳ ಮಾತೃತ್ವ ರಜೆಯನ್ನು 9 ತಿಂಗಳಿಗೆ ಹೆಚ್ಚಿಸುವ ಕುರಿತು ಖಾಸಗಿ ಮತ್ತು ಸರ್ಕಾರಿ ವಲಯಗಳು ಪರಿಗಣನೆ ನಡೆಸಬೇಕು ನೀತಿ ಆಯೋಗ ಸದಸ್ಯ ಪಿಕೆ ಪೌಲ್ ಸಲಹೆ ನೀಡಿದ್ದಾರೆ. ಮಾತೃತ್ವ ಪ್ರಯೋಜನ (ತಿದ್ದುಪಡಿ) ಮಸೂದೆ 2016 ಅನ್ನು 2017ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಇದರ ಅಡಿ ಪಾವತಿಸಿದ ಹೆರಿಗೆ ರಜೆಯನ್ನು 12 ವಾರದಿಂದ 26ವಾರಕ್ಕೆ ಹೆಚ್ಚಿಸಲಾಗಿದೆ
ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್‌ಐಸಿಸಿಐ)ಯ ಮಹಿಳಾ ವಿಭಾಗವಾದ ಎಫ್‌ಎಲ್‌ಒ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಖಾಸಗಿ ಮತ್ತು ಸಾರ್ವಜನಿಕ ವಲಯ ಒಟ್ಟಿಗೆ ಕುಳಿತು ಪ್ರಸ್ತುತ ಇರುವ ಮಾತೃತ್ವ ರಜೆಯನ್ನು ಒಂಬತ್ತು ತಿಂಗಳಿಗೆ ಹೆಚ್ಚಿಸುವ ಕುರಿತು ಪರಿಗಣನೆ ನಡೆಸಬೇಕಿದೆ ಎಂದಿದ್ದಾರೆ. ಖಾಸಗಿ ವಲಯವು ಮಕ್ಕಳ ಉತ್ತಮ ಪಾಲನೆ ಖಚಿತಪಡಿಸಿಕೊಳ್ಳಲು ಹೆಚ್ಚಿನ ಶಿಶುವಿಹಾರಗಳನ್ನು ತೆರೆಯಬೇಕು ಮತ್ತು ಅವರಿಗೆ ಅಗತ್ಯವಿರುವ ವೃದ್ಧರಿಗೆ ಸಮಗ್ರ ಆರೈಕೆ ವ್ಯವಸ್ಥೆ ರಚಿಸುವ ಅಗತ್ಯ ಕೆಲಸದಲ್ಲಿ ನೀತಿ ಆಯೋಗವೂ ಸಹಾಯ ಮಾಡಬೇಕು ಎಂದು ಪಾಲ್ ಹೇಳಿದ್ದಾರೆ.
ಆರೈಕೆ ಕೆಲಸಗಾರರಿಗೆ ಬೇಕಿದೆ ಗಮನ: ಲಕ್ಷಾಂತರ ಕೆಲಸಗಾರರು ಭವಿಷ್ಯ ಸುರಕ್ಷಿತವಾಗಿರಬೇಕಿದೆ. ಈ ಹಿನ್ನೇ ವ್ಯವಸ್ಥಿತ ತರಬೇತಿ ವ್ಯವಸ್ಥೆ ಅಭಿವೃದ್ಧಿ ಮಾಡಬೇಕಿದೆ ಎಂದು ಪಾಲ್ ತಿಳಿಸಿದರು. ಎಫ್‌ಎಲ್‌ಒ ಅಧ್ಯಕ್ಷ ಸುಧಾ ಶಿವಕುಮಾರ್ ಮಾತನಾಡಿ, ಜಾಗತಿಕವಾಗಿ ಆರ್ಥಿಕತೆಯ ಕಾಳಜಿ ಪ್ರಮುಖವಾಗಿದೆ. ಇದರಲ್ಲಿ ಪಾವತಿ ಮಾಡದ ಕೆಲಸಗಾರರಿಗೆ ಮತ್ತು ಮನೆಗೆಲಸ ಮಾಡುವ ಕೆಲಸಗಾರರು ಸೇರಿದ್ದಾರೆ. ಈ ವಲಯವೂ ಆರ್ಥಿಕ ಅಭಿವೃದ್ಧಿ, ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡುತ್ತಿದೆ.