ಕರ್ನಾಟಕ

karnataka

By ETV Bharat Karnataka Team

Published : Oct 19, 2023, 6:05 PM IST

ETV Bharat / business

ಫೇಕ್ ಲೋನ್ ಆ್ಯಪ್ ತಡೆಗೆ FACE ನೊಂದಿಗೆ ಗೂಗಲ್ ಒಪ್ಪಂದ

ಅನಧಿಕೃತ ಲೋನ್ ಆ್ಯಪ್​ಗಳ ಹಾವಳಿ ತಡೆಗಟ್ಟಲು ಹೊಸ ಕ್ರಮ ಕೈಗೊಳ್ಳಲು ಗೂಗಲ್ ಮುಂದಾಗಿದೆ.

Google partners FACE to combat predatory digital lending apps in India
Google partners FACE to combat predatory digital lending apps in India

ನವದೆಹಲಿ: ತನ್ನ ಆ್ಯಪ್​ ಸ್ಟೋರ್​ನಲ್ಲಿ ಗ್ರಾಹಕರನ್ನು ವಂಚಿಸಿ ಅವರನ್ನು ಸುಲಿಗೆ ಮಾಡುವ ಲೋನ್ ಆ್ಯಪ್​ಗಳು ಲಿಸ್ಟ್ ಆಗದಂತೆ ತಡೆಯಲು ಹೊಸ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗೂಗಲ್ ಗುರುವಾರ ಹೇಳಿದೆ. ಸುಲಿಗೆಕೋರ ಲೋನ್ ಆ್ಯಪ್​ಗಳನ್ನು ಗುರುತಿಸಲು ಸಹಾಯಕವಾಗಲು ಉದ್ಯಮ ಸಂಸ್ಥೆ ಫಿನ್​ಟೆಕ್ ಅಸೋಸಿಯೇಷನ್ ಫಾರ್ ಕನ್ಸ್ಯೂಮರ್ ಎಂಪವರ್ಮೆಂಟ್ (ಫೇಸ್) ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಕಂಪನಿ ತಿಳಿಸಿದೆ.

ಒಪ್ಪಂದದ ಭಾಗವಾಗಿ, ಪ್ಲೇ ಸ್ಟೋರ್​ನ ನೀತಿಗಳಿಗೆ ಅನುಸಾರವಾಗಿರದ ಭಾರತದಲ್ಲಿ ಸುಲಿಗೆಕೋರ ವೈಯಕ್ತಿಕ ಸಾಲ ಆ್ಯಪ್​ಗಳ ವಿರುದ್ಧ ತ್ವರಿತ ಕ್ರಮ ತೆಗೆದುಕೊಳ್ಳಲು ಮತ್ತು ಅಂಥ ಆ್ಯಪ್​ಗಳನ್ನು ಪತ್ತೆಹಚ್ಚುವಿಕೆಯನ್ನು ತಿಳಿಸಲು ಫೇಸ್ ಸಂಸ್ಥೆ ಗೂಗಲ್​ಗೆ ನೆರವಾಗಲಿದೆ.

"ಗೂಗಲ್ ನೊಂದಿಗಿನ ನಮ್ಮ ಸಹಯೋಗವು ಗ್ರಾಹಕರಿಗೆ ಸುರಕ್ಷಿತ ಡಿಜಿಟಲ್ ಸಾಲದ ವ್ಯವಸ್ಥೆಯನ್ನು ಸಕ್ರಿಯಗೊಳಿಸುವ ನಿರ್ಣಾಯಕ ಹೆಜ್ಜೆಯಾಗಿದೆ. ಫೇಸ್ ನ ಮಾರುಕಟ್ಟೆ ಬುದ್ಧಿಮತ್ತೆಯನ್ನು ಗೂಗಲ್ ನ ಪ್ರಯತ್ನಗಳೊಂದಿಗೆ ನಮ್ಮ ತಂತ್ರಜ್ಞಾನವನ್ನು ಸಂಯೋಜಿಸುವುದರಿಂದ ಲೋನ್ ಆ್ಯಪ್​ಗಳ ವಿಷಯದಲ್ಲಿ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸಿದಂತಾಗುತ್ತದೆ" ಎಂದು ಫೇಸ್ ಸಿಇಒ ಸುಗಂಧ್ ಸಕ್ಸೇನಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದಲ್ಲದೆ, ಈ ಸಹಯೋಗವು ಗೂಗಲ್​ನ ಹೊಸ ಸುರಕ್ಷತಾ ಉಪಕ್ರಮವಾದ ಡಿಜಿಕವಚ್​ನ ಉದ್ದೇಶಗಳಿಗೆ ಪೂರಕವಾಗಿದೆ. ಇದು ಉದ್ಯಮ ತಜ್ಞರೊಂದಿಗೆ ಸಹಕರಿಸುವ ಮೂಲಕ ಆನ್​ಲೈನ್ ಅಪರಾಧಿಗಳು ನಡೆಸುವ ಅತ್ಯಾಧುನಿಕ ಹಣಕಾಸು ಹಗರಣಗಳಿಂದ ಜನರನ್ನು ರಕ್ಷಿಸುವ ಗುರಿಯನ್ನು ಹೊಂದಿದೆ.

ಫೇಸ್ ಭಾರತದಲ್ಲಿ ಡಿಜಿಟಲ್ ಸಾಲ ನೀಡುವ ವ್ಯವಸ್ಥೆಯನ್ನು ನಿರಂತರವಾಗಿ ಪರಿಶೀಲನೆ ಮಾಡುತ್ತಿದೆ ಮತ್ತು ನೂರಾರು ಸುಲಿಗೆಕೋರ ವಂಚಕ ವೈಯಕ್ತಿಕ ಸಾಲ ಅಪ್ಲಿಕೇಶನ್​ಗಳನ್ನು ತೊಡೆದುಹಾಕಲು ಕೊಡುಗೆ ನೀಡಿದೆ. ಕಳೆದ 15 ತಿಂಗಳಲ್ಲಿ, ಫೇಸ್ ಕಂಪನಿಯು ಅಪ್ಲಿಕೇಶನ್ ಸ್ಟೋರ್​ಗಳು, ನಿಯಂತ್ರಕರು ಮತ್ತು ಸರ್ಕಾರಿ ಅಧಿಕಾರಿಗಳಿಗೆ 700 ಕ್ಕೂ ಹೆಚ್ಚು ಅನುಮಾನಾಸ್ಪದ ಅಪ್ಲಿಕೇಶನ್​ಗಳ ಬಗ್ಗೆ ಮಾಹಿತಿ ನೀಡಿದೆ.

ಲೋನ್ ಆ್ಯಪ್​ಗಳಿಂದ ಗ್ರಾಹಕರಿಗೆ ವಂಚನೆಗಳಾಗುವುದನ್ನು ತಡೆಗಟ್ಟಲು ಗೂಗಲ್ ತನ್ನ ನೀತಿಗಳು ಮತ್ತು ಪರಿಶೀಲನಾ ಪ್ರಕ್ರಿಯೆಗಳನ್ನು ಆಗಾಗ ಪರಿಷ್ಕರಣೆ ಮಾಡುತ್ತಿದೆ. 2022 ರಲ್ಲಿ, ಗೂಗಲ್ ಭಾರತದಲ್ಲಿ ಪ್ಲೇಸ್ಟೋರ್ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ 3,500 ಕ್ಕೂ ಹೆಚ್ಚು ವೈಯಕ್ತಿಕ ಸಾಲ ಅಪ್ಲಿಕೇಶನ್​ಗಳನ್ನು ಪರಿಶೀಲಿಸಿದೆ ಮತ್ತು ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ.

ಲೋನ್ ಆ್ಯಪ್​ಗಳಿಂದ ಹುಷಾರ್: ಸಾಲ ನೀಡುವುದಾಗಿ ಆಫರ್ ಮಾಡುವ ಲೋನ್ ಆ್ಯಪ್​ಗಳು ಬಹುತೇಕ ಸಮಯದಲ್ಲಿ ಅನಧಿಕೃತವಾಗಿರುತ್ತವೆ. ಆರ್​ಬಿಐ ಪ್ರಕಾರ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ 1100 ಡಿಜಿಟಲ್ ಲೋನ್ ಆ್ಯಪ್​ಗಳ ಪೈಕಿ 600 ಕಾನೂನುಬಾಹಿರ ಎಂದು ಕಂಡುಬಂದಿದೆ.

ಇದನ್ನೂ ಓದಿ : ಒಂದೇ ಫೋನಿನಲ್ಲಿ 2 ವಾಟ್ಸ್​ಆ್ಯಪ್ ಖಾತೆ ಲಾಗಿನ್: ಬಳಸುವುದು ಹೇಗೆ?

ABOUT THE AUTHOR

...view details