ಕರ್ನಾಟಕ

karnataka

ETV Bharat / business

ಕ್ರಿಫ್ಟೊ ಜಾಗತಿಕ ನೀತಿಗಳ ಬಗ್ಗೆ G20 ನಾಯಕರ ಒಪ್ಪಿಗೆ ಇದೆ; ನಿರ್ಮಲಾ ಸೀತಾರಾಮನ್​

ಜಿ 20 ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸೀತಾರಾಮನ್, ಕ್ರಿಪ್ಟೋ ಆಸ್ತಿಗಳ ಕುರಿತು "ಸಂಶ್ಲೇಷಣೆ ಕಾಗದ" ವನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

Global policy responses to crypto-assets required, Sitharaman says citing G20 consensus
ಕ್ರಿಫ್ಟೊ ಜಾಗತಿಕ ನೀತಿಗಳ ಬಗ್ಗೆ G20 ನಾಯಕರ ಒಪ್ಪಿಗೆ ಇದೆ; ನಿರ್ಮಲಾ ಸೀತಾರಾಮನ್​

By

Published : Apr 14, 2023, 7:56 AM IST

ವಾಷಿಂಗ್ಟನ್: ಕ್ರಿಪ್ಟೋ ಕರೆನ್ಸಿ ಹಾಗೂ ಆಸ್ತಿಯಿಂದ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲುವುದು ಮಾತ್ರವಲ್ಲದೆ ಅವುಗಳನ್ನು ನಿಯಂತ್ರಿಸಲು ಜಾಗತಿಕವಾಗಿ ಸಂಘಟಿತ ತಿಳಿವಳಿಕೆ ಅಗತ್ಯವಿದೆ ಎಂದು ಜಿ 20 ಸದಸ್ಯರು ಒಪ್ಪುತ್ತಾರೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ 20ಯಲ್ಲಿ, ಕ್ರಿಪ್ಟೋ ಆಸ್ತಿಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು "ಸಿಂಥೆಸಿಸ್ ಪೇಪರ್" ಸಿದ್ಧಪಡಿಸಲಾಗಿವುದು ಎಂದು ಭಾರತದ ಆರ್ಥಿಕ ಸಚಿವರು ವಾಷಿಂಗ್ಟನ್​​​ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಕ್ರಿಪ್ಟೋ ನಿಯಂತ್ರಣದ ಬಗ್ಗೆ "ಎಲ್ಲಾ ಜಿ 20 ಸದಸ್ಯರಲ್ಲಿ ಹೆಚ್ಚಿನ ಸ್ವೀಕಾರವಿದೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಕ್ರಿಪ್ಟೋ ಸ್ವತ್ತುಗಳ ಮೇಲಿನ ಯಾವುದೇ ಕ್ರಮವು ಜಾಗತಿಕವಾಗಿರಬೇಕು" ಎಂದು ಸೀತಾರಾಮನ್ ಹೇಳಿದ್ದಾರೆ. ಮತ್ತು "ಜಿ 20 ಕೂಡಾ ಕ್ರಿಪ್ಟೋ ನಿಯಂತ್ರಣ ಅವಶ್ಯಕತೆ ಇದೆ ಎಂದು ಭಾವಿಸುತ್ತದೆ ಎಂದು ಕೊಂಡಿದ್ದೇನೆ ಎಂದರು. ಅಂತಾರಾಷ್ಟ್ರೀಯ ಹಣಕಾಸು ನಿಧಿ IMF ಮತ್ತು ವಿಶ್ವ ಬ್ಯಾಂಕ್‌ನ ವಾರ್ಷಿಕ ಸಭೆಯಲ್ಲಿ ಭಾರತದ ಹಣಕಾಸು ಸಚಿವರಾದ ಸೀತಾರಾಮನ್, ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಾಂತಿಕಾಂತ ದಾಸ್ ಅವರೊಂದಿಗೆ ಸದಸ್ಯ ರಾಷ್ಟ್ರಗಳ ಹಣಕಾಸು ಮಂತ್ರಿಗಳು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್‌ಗಳ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಜಿ 20 ಮಹತ್ವದ ಸಭೆಯಲ್ಲಿ ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಅದರ ಸವಾಲುಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. "ಕ್ರಿಪ್ಟೋ ಸ್ವತ್ತುಗಳೊಂದಿಗೆ ವ್ಯವಹರಿಸುವ ಸ್ವತಂತ್ರ ಸ್ವತಂತ್ರ ದೇಶವನ್ನು ಹೊಂದಲು ಸಾಧ್ಯವಿಲ್ಲ ಎಂದು G20 ಮತ್ತು ಅದರ ಸದಸ್ಯರು ಒಪ್ಪುತ್ತಾರೆ ಮತ್ತು ಕ್ರಿಪ್ಟೋ ಸ್ವತ್ತುಗಳನ್ನು ಹೇಗೆ ನಿಯಂತ್ರಿಸಬೇಕು ಎಂಬುದರ ಕುರಿತು ಜಾಗತಿಕವಾಗಿ ಸಂಘಟಿತವಾದ ತಿಳಿವಳಿಕೆಯನ್ನು ಹೊಂದಿರಬೇಕು" ಎಂದು ಸೀತಾರಾಮನ್​ ಪ್ರತಿಪಾದಿಸಿದರು.

ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಈ ಬಗ್ಗೆ ಮತ್ತೊಮ್ಮೆ ಚರ್ಚೆ ನಡೆಯಲಿದೆ. ಆ "ದಿನದ ಕೊನೆಯಲ್ಲಿ, G20 ಸದಸ್ಯರು ಇದರಲ್ಲಿ ಹೇಗೆ ಮತ್ತು ಯಾವ ರೀತಿಯ ತಿಳಿವಳಿಕೆಯನ್ನು ಹೊಂದಿದ್ದಾರೆ ಎಂಬುದರ ಕುರಿತು ಮಾರ್ಗಸೂಚಿಯನ್ನು ನಾವು ನೋಡುತ್ತೇವೆ ಮತ್ತು ಅದನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಬಹುದಾ ಎಂಬುದನ್ನು ಪರಿಶೀಲಿಸುತ್ತೇವೆ. ಹಣಕಾಸು ಸಚಿವರು ಹೇಳಿದರು.

ಇಂದು ಕ್ರಿಪ್ಟೋ ಕರೆನ್ಸಿ ಹಾಗೂ ಆಸ್ತಿ ನಿಯಂತ್ರಣದ ಸಮಸ್ಯೆ ಮಾತ್ರ ತಲೆದೋರಿಲ್ಲ. ಬದಲಾಗಿ ಎಲ್ಲ ದೇಶಗಳು ಈ ಸಮಸ್ಯೆಯನ್ನು ಗುರುತಿಸುತ್ತವೆ ಎಂಬುದನ್ನು ನೋಡಬೇಕಾಗಿದೆ. ಕ್ರಿಪ್ಟೋ ನಿಯಂತ್ರಣಕ್ಕೆ ಎಲ್ಲ ದೇಶಗಳು ಒಟ್ಟಾಗಿ ಸೇರಬೇಕಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್​ ಹೇಳಿದ್ದು, ಎಲ್ಲ ರಾಷ್ಟ್ರಗಳೊಂದಿಗೆ ವ್ಯವಹರಿಸುವ IMF ಸಹ ಇಂತಹ ಅನೇಕ ಸಮಸ್ಯೆ ಸವಾಲುಗಳನ್ನು ಎದುರಿಸಿರಬಹುದು. ಅವು ಸ್ಥೂಲ ಆರ್ಥಿಕ ಸ್ಥಿರತೆಯ ಸಮಸ್ಯೆಗಳಾಗಿರಬಹುದು ಎಂದು ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥ ಕ್ರಿಸ್ಟಿನ್ ಲಗಾರ್ಡೆ ಅವರು ಈ ಕಾರ್ಯಾಚರಣೆಯಲ್ಲಿ ಹಣವನ್ನು ಹೇಗೆ ರವಾನಿಸಲಾಗುತ್ತದೆ ಎಂಬುದಕ್ಕೆ ನಿರ್ದಿಷ್ಟ ಉದಾಹರಣೆಗಳ ಬಗ್ಗೆ ಮಾತನಾಡುವುದನ್ನು ಕೇಳಲು ನನಗೆ ತುಂಬಾ ಸಂತಸವಾಗಿದೆ. ಇದರ ಪರಿಣಾಮವಾಗಿ ಹಲವಾರು ಕಂಪನಿಗಳು ಅದರಲ್ಲಿ ಹೇಗೆಲ್ಲ ತೊಡಗಿಸಿಕೊಂಡಿವೆ ಎಂಬುದನ್ನ ಲಗಾರ್ಡೆ ವಿವರಿಸಿದ್ದಾರೆ ಎಂದು ನಿರ್ಮಲಾ ಸೀತಾರಾಮನ್​ ಪ್ರಸಂಶೆ ವ್ಯಕ್ತಪಡಿಸಿದರು.

ಇದನ್ನು ಓದಿ:ಸರ್ಕಾರದ ಕ್ರಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಇಮ್ರಾನ್​ ಖಾನ್​

ABOUT THE AUTHOR

...view details