ಕರ್ನಾಟಕ

karnataka

ETV Bharat / business

ರೆಪೋ ದರ ಭಾರಿ ಪ್ರಮಾಣದಲ್ಲಿ ಏರಿಸುವುದು ಬೇಡ..ಆರ್​ಬಿಐಗೆ ಅಸೋಚಾಮ್ ಪತ್ರ - ವಿದ್ಯುತ್​ಚಾಲಿತ ವಾಹನಗಳ ತಯಾರಿಕಾ ಉದ್ಯಮ

ಹೆಚ್ಚೆಂದರೆ, ಹೊಸ ದರ ಏರಿಕೆಯು 25-35 ಬೇಸಿಸ್ ಪಾಯಿಂಟ್‌ಗಳನ್ನು (ಬಿಪಿಎಸ್) ಮೀರಬಾರದು ಎಂದು ಅಸೋಚಾಮ್ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್‌ಗೆ ಬರೆದ ಪತ್ರದಲ್ಲಿ ಹೇಳಿದೆ. ಇದೇ ವೇಳೆ, ಉದ್ಯಮ ಎದುರಿಸುತ್ತಿರುವ ಇತರ ಸಮಸ್ಯೆಗಳನ್ನು ಪತ್ರದಲ್ಲಿ ಅಸೋಚಾಮ್​ ಗಮನ ಸೆಳೆದಿದೆ.

Don't hike repo rate beyond 25-35 bps, ASSOCHAM urges RBI
ರೆಪೋ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಬೇಡ..ಆರ್​ಬಿಐಗೆ ಅಸೋಚಾಮ್ ಪತ್ರ

By

Published : Dec 2, 2022, 10:07 PM IST

ಚೆನ್ನೈ( ತಮಿಳುನಾಡು): ರೆಪೋ ದರ ಪರಿಷ್ಕರಣೆ ಕುರಿತು ನಿರ್ಧರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಸಮಿತಿ ಎಂಪಿಸಿ ಸಭೆ ಸೇರಲಿದೆ. ಈ ಹಿನ್ನೆಲೆಯಲ್ಲಿ ಅಸೋಚಾಮ್ ಹಣಕಾಸು ನೀತಿಯಲ್ಲಿ ಬದಲಾವಣೆ ಮಾಡದೇ ಯಥಾ ಸ್ಥಿತಿ ಕಾಪಾಡುವಂತೆ ಒತ್ತಾಯಿಸಿದೆ.

ಎಲೆಕ್ಟ್ರಿಕ್ ವಾಹನ (ಇವಿ) ಖರೀದಿಗೆ ಚಿಲ್ಲರೆ ಸಾಲವನ್ನು ಆದ್ಯತೆಯ ವಲಯದ ಸಾಲವಾಗಿ ಪರಿಗಣಿಸುವಂತೆ ಅಸೋಚಾಮ್ ಆರ್‌ಬಿಐಗೆ ಮನವಿ ಮಾಡಿದೆ. ಬಡ್ಡಿದರ ಹೆಚ್ಚಳವು ಮಧ್ಯಮಗತಿಯಲ್ಲಿದ್ದರೆ ಉತ್ತಮ ಎಂದು ಸಲಹೆ ನೀಡಿದೆ. ಸಾಲದ ಏರಿಕೆಯ ವೆಚ್ಚವು ಸಾಂಕ್ರಾಮಿಕ ನಂತರದ ಆರ್ಥಿಕ ಚೇತರಿಕೆಯ ಮೇಲೆ ಪ್ರತಿಕೂಲ ಮತ್ತು ಅಸಮಂಜಸ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಮಧ್ಯಮ ಮಾರ್ಗದಲ್ಲಿ ಆರ್ಥಿಕ ನೀತಿ ಜಾರಿಗೆ ತರುವಂತೆ ASSOCHAM ಒತ್ತಾಯಿಸಿದೆ.

ಹೆಚ್ಚೆಂದರೆ, ಹೊಸ ದರ ಏರಿಕೆಯು 25-35 ಬೇಸಿಸ್ ಪಾಯಿಂಟ್‌ಗಳನ್ನು (ಬಿಪಿಎಸ್) ಮೀರಬಾರದು ಎಂದು ಅಸೋಚಾಮ್ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್‌ಗೆ ಬರೆದ ಪತ್ರದಲ್ಲಿ ಹೇಳಿದೆ. ಇದೇ ವೇಳೆ, ಉದ್ಯಮ ಎದುರಿಸುತ್ತಿರುವ ಇತರ ಸಮಸ್ಯೆಗಳನ್ನು ಪತ್ರದಲ್ಲಿ ಅಸೋಚಾಮ್​ ಗಮನ ಸೆಳೆದಿದೆ.

ASSOCHAM ಮುಂದಿಟ್ಟಿರುವ ಪ್ರಮುಖ ಶಿಫಾರಸುಗಳಲ್ಲಿ ಒಂದೆಂದರೆ EVಗಳ ಖರೀದಿಗಾಗಿ ಚಿಲ್ಲರೆ ಸಾಲಗಳನ್ನು ಆದ್ಯತೆಯ ವಲಯದ ಸಾಲವಾಗಿ ಪರಿಗಣಿಸುವುದು. ರಿಯಾಯಿತಿ ದರದ ಬಡ್ಡಿಯೊಂದಿಗೆ ಸಾಲ ನೀಡಲು ಅನುವಾಗವಂತೆ ನಿರ್ಧಾರ ತೆಗೆದುಕೊಳ್ಳುವಂತೆ ಮನವಿ ಮಾಡಿದೆ.

ವಿದ್ಯುತ್​ಚಾಲಿತ ವಾಹನಗಳ ತಯಾರಿಕಾ ಉದ್ಯಮಕ್ಕೆ ವೇಗ ನೀಡಿ:ಇವಿಗಳ ವಿರುದ್ಧ ಚಿಲ್ಲರೆ ಮುಂಗಡಗಳನ್ನು ಆದ್ಯತೆಯ ವಲಯದ ಸಾಲದ ಅಡಿಯಲ್ಲಿ ಸೇರಿಸಿಕೊಳ್ಳಬಹುದು. ಇದು ಭಾರತದ ಎಲೆಕ್ಟ್ರಿಕ್​ ವೆಹಿಕಲ್​ಗಳ ಬೆಳವಣಿಗೆಯನ್ನು ವೇಗಗೊಳಿಸಲು ಸಹಾಯ ಮಾಡಬಹುದು ಎಂದು ASSOCHAM ಪ್ರಧಾನ ಕಾರ್ಯದರ್ಶಿ ದೀಪಕ್ ಸೂದ್ ಹೇಳಿದ್ದಾರೆ.

ದೇಶೀಯ ಆರ್ಥಿಕತೆಗೆ ಬಂದಾಗ ಹಣದುಬ್ಬರ ಗರಿಷ್ಠ ಮಟ್ಟಕ್ಕೆ ಏರುವ ಲಕ್ಷಣಗಳು ಗೋಚರಿಸುತ್ತಿವೆ. ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳಲ್ಲಿಯೂ ಸಹ, ಹಣದುಬ್ಬರ ಗರಿಷ್ಠ ಏರಿಕೆಯ ಆರಂಭಿಕ ಸೂಚನೆಗಳು ಕಂಡು ಬಂದಿವೆ. ಹೀಗಾಗಿ RBI-MPC ದರ ಏರಿಕೆಯ ಚಕ್ರವನ್ನು ನಿಲ್ಲಿಸುವತ್ತ ಗಮನ ನೀಡಬೇಕು ಎಂದು ಆರ್​ಬಿಐಗೆ ಸೂದ್​ ಮನವಿ ಮಾಡಿದ್ದಾರೆ.

ಇದನ್ನು ಓದಿ:ಎಫ್​ಡಿ ಬಡ್ಡಿದರದಲ್ಲಿ ಏರಿಕೆ: ಠೇವಣಿ ಹೂಡುವ ಮುನ್ನ ನಿಯಮವನ್ನೊಮ್ಮೆ ತಿಳಿದುಕೊಳ್ಳಿ!

ABOUT THE AUTHOR

...view details