ಕರ್ನಾಟಕ

karnataka

ETV Bharat / business

ಅಮೆರಿಕ, ಜಪಾನ್​ಗಿಂತ ನಾಳೆ ಭಾರತೀಯರೇ ಸ್ಮಾರ್ಟ್... ಹಳ್ಳಿಗರ ಜೇಬಿನಲ್ಲಿ ಇಡೀ ಜಗತ್ತು!

ಪ್ರಸಕ್ತ ವರ್ಷದಲ್ಲಿ ಭಾರತದ ಸ್ಮಾರ್ಟ್​ ಫೋನ್ ಮಾರುಕಟ್ಟೆಯು ಶೇ. 9ರಷ್ಟು ಬೆಳವಣಿಗೆ ಕಂಡಿದೆ. 2020ರಲ್ಲಿ ಶೇ. 12-14ರಷ್ಟು ಬೆಳವಣಿಗೆಯಾಗಲಿದೆ. 2022ರ ವೇಳೆಗೆ ಭಾರತದಲ್ಲಿ 700 (70 ಕೋಟಿ) ದಶಲಕ್ಷಕ್ಕೂ ಅಧಿಕ ಜನರು ಸ್ಮಾರ್ಟ್‌ ಫೋನ್ ಹೊಂದಲಿದ್ದಾರೆ. ಮುಂದಿನ ನಾಲ್ಕೈದು ವರ್ಷಗಳಲ್ಲಿ 100 ಕೋಟಿ ಸಾಧನಗಳು ಮಾರಾಟವಾಲಿವೆ ಎಂದು ಕೌಂಟರ್​ಪಾಯಿಂಟ್ ರಿಸರ್ಚ್ ಅಸೋಸಿಯೇಟ್ ನಿರ್ದೇಶಕ ತರುಣ್ ಪಾಠಕ್ ಹೇಳಿದರು.

Smart Phone
ಸ್ಮಾರ್ಟ್​ಫೋನ್

By

Published : Dec 30, 2019, 10:23 PM IST

ನವದೆಹಲಿ: 2019ರ ಆರ್ಥಿಕ ಕುಸಿತದ ವಿಷವರ್ತುಲ ಚಿಕ್ಕ ಬಿಸ್ಕಟ್​ಗಳಿಂದ ಹಿಡಿದು ಐಷರಾಮಿ ಕಾರುಗಳವರೆಗೂ ಆವರಿಸಿಕೊಂಡಿತ್ತು. ಮೊಬೈಲ್​ ಮಾರುಕಟ್ಟೆಗೂ ಅದು ಅಲ್ಪ ಮಟ್ಟದಲ್ಲಿ ಪ್ರಭಾವ ಬೀರಿದ್ದರೂ ಅದರ ಬೆಳವಣಿಗೆಗೆ ಧಕ್ಕೆಯಾಗಲಿಲ್ಲ.

ದೇಶದಲ್ಲಿ ಆರ್ಥಿಕ ಹಿಂಜರಿಕೆಯ ಕರಿಛಾಯೆ ಏನೇ ಇದ್ದರೂ ನಗರ ಮತ್ತು ಗ್ರಾಮೀಣ ಪ್ರದೇಶದ ಜನರಲ್ಲಿ ದುಬಾರಿ ಬೆಲೆಯ ಹ್ಯಾಂಡ್‌ ಸೆಟ್‌ಗಳನ್ನು ಖರೀದಿಸುವ ಪ್ರವೃತ್ತಿ ಮುಂದುವರಿದಿತ್ತು. ಹೀಗಾಗಿ, ಮುಂಬರುವ ವರ್ಷಗಳಲ್ಲಿ ಇದು ಇನ್ನಷ್ಟು ವೇಗ ಪಡೆದುಕೊಳ್ಳಬಹುದು ಎನ್ನಲಾಗುತ್ತಿದೆ.

ಭಾರತದಲ್ಲೇ ಸ್ಮಾರ್ಟ್​ ಫೋನ್​ಗಳನ್ನು ಉತ್ಪಾದಿಸಿ ವಿದೇಶಗಳಿಗೆ ರಫ್ತು ಮಾಡಲು ಆ್ಯಪಲ್ ಸೇರಿದಂತೆ ಇತರ ಪ್ರಮುಖ ಬ್ರಾಂಡೆಡ್​ ಕಂಪನಿಗಳು ಈಗಾಲೇ ಮುಂದಾಗಿವೆ. ಭಾರತವನ್ನು ಜಾಗತಿಕ ಮೊಬೈಲ್​​ ಉತ್ಪಾದನಾ ಕೇಂದ್ರ ಬಿಂದುವಾಗಿಸಲು ಸಹ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದೆ.ಮುಂದಿನ ವರ್ಷಗಳಲ್ಲಿ ಸ್ಮಾರ್ಟ್​ಫೋನ್ ಬೆಳವಣಿಗೆಯು ದ್ವಿಗುಣಗೊಳ್ಳಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರಸಕ್ತ ವರ್ಷದಲ್ಲಿ ಭಾರತದ ಸ್ಮಾರ್ಟ್​ ಫೋನ್ ಮಾರುಕಟ್ಟೆಯು ಶೇ. 9ರಷ್ಟು ಬೆಳವಣಿಗೆ ಕಂಡಿದೆ. 2020ರಲ್ಲಿ ಶೇ. 12-14ರಷ್ಟು ಬೆಳವಣಿಗೆಯಾಗಲಿದೆ. 2022ರ ವೇಳೆಗೆ ಭಾರತದಲ್ಲಿ 700 (70 ಕೋಟಿ) ದಶಲಕ್ಷಕ್ಕೂ ಅಧಿಕ ಜನರು ಸ್ಮಾರ್ಟ್‌ ಫೋನ್ ಹೊಂದಲಿದ್ದಾರೆ. ಮುಂದಿನ ನಾಲ್ಕೈದು ವರ್ಷಗಳಲ್ಲಿ 100 ಕೋಟಿ ಸಾಧನಗಳು ಮಾರಾಟವಾಲಿವೆ ಎಂದು ಕೌಂಟರ್​ಪಾಯಿಂಟ್ ರಿಸರ್ಚ್ ಅಸೋಸಿಯೇಟ್ ನಿರ್ದೇಶಕ ತರುಣ್ ಪಾಠಕ್ ಹೇಳಿದರು.

2019ರ ಮೊದಲ ಮೂರು ತ್ರೈಮಾಸಿಕಗಳಲ್ಲಿ ಶಿಯೋಮಿ, ಸ್ಯಾಮ್‌ಸಂಗ್, ವಿವೊ, ಒಪ್ಪೊ ಮತ್ತು ರಿಯಲ್​ ಮೀ ಸೇರಿದಂತೆ ಇತರ ಕಂಪನಿಗಳು 115 ದಶಲಕ್ಷ ಯೂನಿಟ್‌ಗಳಷ್ಟು ಸ್ಮಾರ್ಟ್‌ ಫೋನ್‌ಗಳನ್ನು ಭಾರತದಲ್ಲಿ ಮಾರಾಟ ಮಾಡಿವೆ. ಸರ್ಕಾರಿ ಮಾರಾಟದ ಬೆಲೆಗಳಲ್ಲಿ (ಎಎಸ್‌ಪಿ) ಗಮನಾರ್ಹ ಏರಿಕೆ ಕಂಡುಬಂದಿದ್ದು, 5,000-10,000 ರೂ.ಗಳಿಂದ 10,000-15,000 ರೂ.ಗೆ ಹೆಚ್ಚಳವಾಗಿತ್ತು.

ABOUT THE AUTHOR

...view details