ಕರ್ನಾಟಕ

karnataka

ETV Bharat / business

ಕರಡಿ ಕುಣಿತಕ್ಕಿಲ್ಲ ಬ್ರೇಕ್‌; ಇಂದು ಸೆನ್ಸೆಕ್ಸ್‌ ಮತ್ತೆ 600 ಅಂಕಗಳ ಕುಸಿತ - ರಿಲಯನ್ಸ್‌

1,170 ಅಂಕಗಳ ಕುಸಿತದೊಂದಿಗೆ ನಿನ್ನೆ ದಿನದ ವಹಿವಾಟು ಮುಗಿಸಿದ್ದ ಮುಂಬೈ ಷೇರುಪೇಟೆಯಲ್ಲಿಂದು ಸೆನ್ಸೆಕ್ಸ್‌ 600 ಅಂಕಗಳ ಕುಸಿತ ಕಂಡು 58,000 ಹಾಗೂ ನಿಫ್ಟಿ 50 ಅಂಕಗಳ ಇಳಿಕೆಯೊಂದಿಗೆ 17,200 ರಲ್ಲಿ ವಹಿವಾಟು ನಡೆಸುತ್ತಿವೆ.

Sensex trims losses, nears 58300, Nifty support around 17200; Paytm gains 5%, RIL down 1.4%
ಕರಡಿ ಕುಣಿತಕ್ಕಿಲ್ಲ ಬ್ರೇಕ್‌; ಇಂದು ಸೆನ್ಸೆಕ್ಸ್‌ ಮತ್ತೆ 600 ಅಂಕಗಳ ಕುಸಿತ

By

Published : Nov 23, 2021, 12:01 PM IST

ಮುಂಬೈ: ಪತನ ಹಾದಿ ಹಿಡಿದಿರುವ ಮುಂಬೈ ಷೇರುಟೇಟೆಯಲ್ಲಿ ಕರಡಿ ಕುಣಿತಕ್ಕೆ ಬ್ರೇಕ್‌ ಹಾಕಲು ಸಾಧ್ಯವಾಗುತ್ತಿಲ್ಲ. ವಿದೇಶಿ ಹೂಡಿಕೆದಾರರು ಬಂಡವಾಳ ಹಿಂತೆಗೆ, ಜಾಗತಿಕ ಮಾರುಕಟ್ಟೆಯಲ್ಲಿನ ಪರಿಣಾಮಗಳಿಂದಾಗಿ ಇಂದು ಕೂಡ ಮುಂಬೈ ಷೇರುಪೇಟೆಯಲ್ಲಿ ಸೆನ್ಸೆಕ್ಸ್‌ ಕುಸಿತ ಕಂಡಿದೆ.

ದಿನದ ಆರಂಭದಲ್ಲಿ ಷೇರು ಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 600 ಅಂಕಗಳ ಕುಸಿತ ಕಂಡು 58,000 ಹಾಗೂ ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 50 ಅಂಕಗಳ ಇಳಿಕೆಯೊಂದಿಗೆ 17,200 ರಲ್ಲಿ ವಹಿವಾಟು ನಡೆಸುತ್ತಿವೆ.

ಟಾಟಾ ಸ್ಟೀಲ್‌ ಶೇ.1.34 ರಷ್ಟು ಲಾಭ ಗಳಿಸಿದೆ. ಏಷಿಯನ್‌ ಪೇಂಟ್ಸ್‌, ಮಾರುತಿ ಸುಜುಕಿ ಇಂಡಿಯಾ, ನೆಸ್ಲೆ, ಐಟಿಸಿ, ಐಸಿಐಸಿಐ ಬ್ಯಾಂಕ್‌, ಇನ್ಫೋಸಿಸ್‌, ಬಜಾಜ್‌ ಆಟೋ ಮತ್ತು ಟೆಕ್‌ ಮಹೀಂದ್ರ ಷೇರುಗಳು ಲಾಭಕ್ಕೆ ಮಾರಾಟ ಆಗಿವೆ. ಪೇಟಿಎಂ ಶೇಕಡಾ 5 ರಷ್ಟು ಲಾಭಗಳಿಸಿದರೆ, ರಿಲಯನ್ಸ್‌ 1.4 ರಷ್ಟು ನಷ್ಟ ಅನುಭವಿಸಿದೆ.

ಹೂಡಿಕೆದಾರರ 8 ಲಕ್ಷ ಕೋಟಿ ರೂ.ನಷ್ಟ

ವಾರದ ಆರಂಭ ದಿನವಾದ ನಿನ್ನೆ ಷೇರುಪೇಟೆಯಲ್ಲಿ ಭಾರಿ ಪತನವಾಗಿತ್ತು. ಗರಿಷ್ಠ 1,400 ಅಂಕಗಳ ಪತನಗೊಂಡು ದಿನದಾಂತ್ಯಕ್ಕೆ ಸೆನ್ಸೆಕ್ಸ್‌ 1,170 ಅಂಕಗಳ ನಷ್ಟದೊಂದಿಗೆ 58,465 ಹಾಗೂ ನಿಫ್ಟಿ 348 ಅಂಕಗಳ ಪತನದೊಂದಿಗೆ 17,416ರಲ್ಲಿ ವಹಿವಾಟು ಅಂತ್ಯಗೊಳಿಸಿವೆ. ಪರಿಹಾರ ಹೂಡಿಕೆದಾರರ 8 ಲಕ್ಷ ಕೋಟಿ ರೂ.ಸಂಪತ್ತು ನಿನ್ನೆ ಒಂದೇ ದಿನ ಕರಗಿ ಹೋಗಿದೆ.

ಇದನ್ನೂ ಓದಿ:ಮುಂಬೈ ಷೇರುಪೇಟೆಯಲ್ಲಿ ಕರಡಿ ಕುಣಿತ; ಸೆನ್ಸೆಕ್ಸ್‌ 1,400 ಅಂಕ ಕುಸಿತ

ABOUT THE AUTHOR

...view details