ಕರ್ನಾಟಕ

karnataka

ETV Bharat / business

ಷೇರು ಮಾರುಕಟ್ಟೆಯಲ್ಲಿ ಕೊರೊನಾ ಕುಣಿತ: ಸೆನ್ಸೆಕ್ಸ್, ನಿಫ್ಟಿ ಕುಸಿತ - sensex latest news

ಬೆಳಿಗ್ಗೆ 10.15 ರ ಸುಮಾರಿಗೆ ಬಿಎಸ್‌ಇ ಸೆನ್ಸೆಕ್ಸ್ 48,709.84 ಕ್ಕೆ ವಹಿವಾಟು ನಡೆಸುತ್ತಿದ್ದು, ಹಿಂದಿನ ಮುಕ್ತಾಯಕ್ಕಿಂತ 1,319.99 ಪಾಯಿಂಟ್‌ಗಳಷ್ಟು ಅಥವಾ ಶೇಕಡಾ 2.64 ರಷ್ಟು ಕುಸಿತ ಕಂಡಿದೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ನಿಫ್ಟಿ 14,529.95 ಕ್ಕೆ ವಹಿವಾಟು ನಡೆಸುತ್ತಿದ್ದು, ಹಿಂದಿನ ಮುಕ್ತಾಯಕ್ಕಿಂತ 337.40 ಅಥವಾ ಶೇಕಡಾ 2.27 ರಷ್ಟು ಕಡಿಮೆಯಾಗಿದೆ.

Sensex tanks 1,300 points; banking
ಸೆನ್ಸೆಕ್ಸ್ 1,300 ಪಾಯಿಂಟ್‌, ನಿಫ್ಟಿ 14,500 ಅಂಕಗಳಿಗೆ ಕುಸಿತ

By

Published : Apr 5, 2021, 12:17 PM IST

ಮುಂಬೈ (ಮಹಾರಾಷ್ಟ್ರ):ಬಿಎಸ್ಇ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್​ನ (ಎನ್ಎಸ್ಇ) ಈಕ್ವಿಟಿ ಸೂಚ್ಯಂಕಗಳು ಸೋಮವಾರ ಬೆಳಿಗ್ಗಿನ ವಹಿವಾಟಿನಲ್ಲಿ ಶೇಕಡಾ 2 ಕ್ಕಿಂತಲೂ ಹೆಚ್ಚು ಕುಸಿತ ಕಂಡಿವೆ.

ಬ್ಯಾಂಕಿಂಗ್, ಹಣಕಾಸು ಮತ್ತು ಆಟೋ ಷೇರುಗಳ ಭಾರಿ ಮಾರಾಟದ ನಂತರ ಭಾರತದ ಪ್ರಮುಖ ಷೇರುಗಳ ಸೂಚ್ಯಂಕಗಳು ಸೋಮವಾರ ಬೆಳಿಗ್ಗೆ ಕುಸಿದವು. ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಮಧ್ಯೆ ಮಹಾರಾಷ್ಟ್ರದಲ್ಲಿ ಘೋಷಿಸಲಾದ ನೈಟ್​ ಕರ್ಫ್ಯೂ ಮತ್ತು ವಾರಾಂತ್ಯದ ಲಾಕ್‌ಡೌನ್ ಹೂಡಿಕೆದಾರರ ಮೇಲೆ ಪರಿಣಾಮ ಬೀರಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ.

ಬೆಳಿಗ್ಗೆ 10.15 ರ ಸುಮಾರಿಗೆ ಸೆನ್ಸೆಕ್ಸ್ 48,709.84 ಕ್ಕೆ ವಹಿವಾಟು ನಡೆಸುತ್ತಿದ್ದು, ಹಿಂದಿನ ಮುಕ್ತಾಯಕ್ಕಿಂತ 1,319.99 ಪಾಯಿಂಟ್‌ಗಳಷ್ಟು ಅಥವಾ ಶೇ 2.64 ರಷ್ಟು ಕುಸಿತ ಕಂಡಿದೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿನ ನಿಫ್ಟಿ 14,529.95 ಕ್ಕೆ ವಹಿವಾಟು ನಡೆಸುತ್ತಿದ್ದು, ಹಿಂದಿನ ಮುಕ್ತಾಯಕ್ಕಿಂತ 337.40 ಅಥವಾ ಶೇಕಡಾ 2.27 ರಷ್ಟು ಕಡಿಮೆಯಾಗಿದೆ.

ಸೆನ್ಸೆಕ್ಸ್‌ನಲ್ಲಿ ನಷ್ಟ ಅನುಭವಿಸಿದವರು ಇಂಡಸ್‌ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್ ಮತ್ತು ಬಜಾಜ್ ಫಿನ್‌ಸರ್ವ್ ಆಗಿದ್ದರೆ, ಇನ್ಫೋಸಿಸ್, ಎಚ್‌ಸಿಎಲ್ ಟೆಕ್ನಾಲಜೀಸ್ ಮತ್ತು ಟಿಸಿಎಸ್ ಮಾತ್ರ ಲಾಭಗಳಿಸಿವೆ.

ಇದನ್ನೂ ಓದಿ:2ನೇ ಕೋವಿಡ್​ ಅಲೆಯಲ್ಲಿ ಭಾರತ: ಮೊಟ್ಟ ಮೊದಲ ಬಾರಿಗೆ ಒಂದೇ ದಿನ 1 ಲಕ್ಷ ಕೇಸ್​ ದಾಖಲು!

ABOUT THE AUTHOR

...view details