ಕರ್ನಾಟಕ

karnataka

ETV Bharat / business

ಷೇರುಪೇಟೆಯಲ್ಲಿ ಕರಡಿ ಕುಣಿತ: 19.69 ಪಾಯಿಂಟ್‌ ಕುಸಿತ ಕಂಡ ಸೆನ್ಸೆಕ್ಸ್

ಇಂದು ಸೆನ್ಸೆಕ್ಸ್ 19.69 ಪಾಯಿಂಟ್‌ ಕುಸಿತ ಕಂಡಿದ್ದು, 51329.08 ರ ಮಟ್ಟದಲ್ಲಿ ಮುಚ್ಚಿದ್ದು, ನಿಫ್ಟಿ 6.50 ಇಳಿಕೆಗೊಂಡಿದೆ.

stock market
ಷೇರುಪೇಟೆ

By

Published : Feb 9, 2021, 7:03 PM IST

ಮುಂಬೈ: ಮುಂಬೈ ಷೇರುಪೇಟೆ ಸೆನ್ಸೆಕ್ಸ್ 19.69 ಪಾಯಿಂಟ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆ ನಿಫ್ಟಿ 6.50 ಇಳಿಕೆಗೊಂಡಿದೆ. ಇಂದು ಸೆನ್ಸೆಕ್ಸ್ 19.69 ಪಾಯಿಂಟ್‌ (ಶೇ.0.04)ರಷ್ಟು ಕುಸಿತ ಕಂಡಿದ್ದು, 51329.08 ರ ಮಟ್ಟದಲ್ಲಿ ಮುಚ್ಚಿದೆ.

ಎನ್‌ಎಸ್ಇ ಸೂಚ್ಯಂಕ ನಿಫ್ಟಿ 6.50 (ಶೇ.0.04)ರಷ್ಟು ಪಾಯಿಂಟ್‌ಗಳ ಕುಸಿತ ಕಂಡಿದ್ದು, 15109.30 ರ ಮಟ್ಟದಲ್ಲಿ ಮುಚ್ಚಿದೆ.

ಇನ್ನು ಇಂದು ಒಟ್ಟು 3,158 ಕಂಪನಿಗಳು ಬಿಎಸ್‌ಇಯಲ್ಲಿ ವಹಿವಾಟು ನಡೆಸಿದ್ದು, ಈ ಪೈಕಿ ಸುಮಾರು 1,313 ಷೇರುಗಳು ಕೊನೆಗೊಂಡಿವೆ. 1,656 ಷೇರುಗಳು ಕುಸಿದಿದೆ. 189 ಕಂಪನಿಗಳ ಷೇರು ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ.

ಐಒಸಿ, ಎಂ & ಎಂ, ಟಾಟಾ ಮೋಟಾರ್ಸ್​, ಜೆಎಸ್‌ಡಬ್ಲ್ಯೂ ಸ್ಟೀಲ್ ಮತ್ತು ಬಜಾಜ್ ಆಟೋ ನಿಫ್ಟಿಯಲ್ಲಿ ನಷ್ಟ ಅನುಭವಿಸಿದೆ. ಇನ್ನು ಎಸ್‌ಬಿಐ ಲೈಫ್ ಇನ್ಶುರೆನ್ಸ್, ಏಷ್ಯನ್ ಪೇಂಟ್ಸ್, ಎಚ್‌ಡಿಎಫ್‌ಸಿ ಲೈಫ್, ಒಎನ್‌ಜಿಸಿ ಮತ್ತು ಟೈಟಾನ್ ಕಂಪನಿ ಲಾಭಗಳಿಸಿವೆ.

ABOUT THE AUTHOR

...view details