ಮುಂಬೈ:ದೇಶದ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಮತ್ತೊಂದು ಸಾರ್ವಕಾಲಿಕ ದಾಖಲೆ ಬರೆದಿದ್ದು, ರಿಲಯನ್ಸ್, ಎಚ್‌ಡಿಎಫ್‌ಸಿ, ಐಟಿ ಮತ್ತು ಫಾರ್ಮಾ ಷೇರುಗಳು ಲಾಭಗಳಿಸಿದವು. ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 145 ಅಂಕಗಳ ಅಥವಾ ಶೇ.0.26 ರಷ್ಟು ಏರಿಕೆಯೊಂದಿಗೆ 55,582.58 ವಹಿವಾಟು ನಡೆಸಿದೆ. ಒಮ್ಮೆ 55,680.75ಕ್ಕೆ ತಲುಪಿದ್ದು ಕೂಡ ಗರಿಷ್ಠ ಮಟ್ಟದ ದಾಖಲೆಯಾಗಿದೆ. ನಿಫ್ಟಿ 33.95 ಅಂಕ ಅಥವಾ ಶೇ. 0.21 ಹೆಚ್ಚಳದೊಂದಿಗೆ 16,563.05 ರಲ್ಲಿ ವಹಿವಾಟು ಮುಕ್ತಾಯಗೊಳಿಸಿದೆ. ಇದು ಕೂಡ ಸಾರ್ವಕಾಲಿಕ ದಾಖಲೆಯಾಗಿದೆ. ಒಮ್ಮೆ 16,589.40ಕ್ಕೂ ಬಂದು ತಲುಪಿತ್ತು.
ಟಾಟಾ ಸ್ಟೀಲ್‌ನ ಷೇರುಗಳು ಹೆಚ್ಚಿನ ಲಾಭಗಳಿದವು. ನಂತರ ಬಜಾಜ್ ಫೈನಾನ್ಸ್, ಎಂ&ಎಂ, ಬಜಾಜ್ ಫಿನ್‌ಸರ್ವ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಾಭದತ್ತ ಮುಖ ಮಾಡಿದ್ದವು. ಮಾರುತಿ, ಬಜಾಜ್ ಆಟೋ, ಪವರ್‌ಗ್ರಿಡ್ ಹಾಗೂ ಅಲ್ಟ್ರಾಟೆಕ್ ಸಿಮೆಂಟ್ ನಷ್ಟ ಅನುಭವಿಸಿದವು.