ಕರ್ನಾಟಕ

karnataka

By

Published : Apr 6, 2020, 8:18 PM IST

ETV Bharat / business

ಬೇಡಿಕೆ ಕಸಿದ ಲಾಕ್​ಡೌನ್.. ಡೀಸೆಲ್​ ಶೇ.26, ಪೆಟ್ರೋಲ್ ಶೇ.17ರಷ್ಟು ಮಾರಾಟ ಕುಸಿತ..

ದೇಶದಲ್ಲಿ ಹೆಚ್ಚು ಬಳಕೆಯಾಗುವ ಇಂಧನ ಡೀಸೆಲ್ ಸಹ ಶೇ. 25.9ರಷ್ಟು ತಗ್ಗಿ 4.982 ದಶಲಕ್ಷ ಟನ್‌ಗಳಿಗೆ ತಲುಪಿದೆ.

Petrol sales
ಪೆಟ್ರೋಲ್

ನವದೆಹಲಿ :ಮಾರ್ಚ್​ ತಿಂಗಳ ಅವಧಿಯಲ್ಲಿ ಭಾರತದ ಪೆಟ್ರೋಲ್ ಮಾರಾಟವು ಶೇ. 17.6ರಷ್ಟು ಮತ್ತು ಡೀಸೆಲ್ ಬೇಡಿಕೆ ಶೇ.26ರಷ್ಟು ಕುಸಿದಿದೆ. ವಿಮಾನಯಾನ ಟರ್ಬೈನ್ ಇಂಧನ (ಎಟಿಎಫ್) ಮಾರಾಟವು ಶೇ. 31.6ರಷ್ಟು ಇಳಿಕೆ ಕಂಡಿದೆ. ವಿಮಾನ ಹಾರಾಟ ಸ್ಥಗಿತಗೊಂಡು ಹೆಚ್ಚಿನ ವಾಹನ ಸಂಚಾರವು ರಸ್ತೆ ಮಾರ್ಗವಾಗಿ ಸಂಚಾರ ನಡೆಸುತ್ತಿದ್ದರಿಂದ ಬೇಡಿಕೆಯಲ್ಲಿ ತೀವ್ರ ಕುಸಿತ ಕಂಡು ಬಂದಿದೆ.

ಉದ್ಯಮದ ಬೇಡಿಕೆಯ ಅಂಕಿಸಂಖ್ಯೆಗಳ ಪ್ರಕಾರ, 2019ರ ಮಾರ್ಚ್​ನಲ್ಲಿ ಮಾರಾಟವಾದ ಪ್ರಮಾಣಕ್ಕಿಂತ ಪೆಟ್ರೋಲ್ ಮಾರಾಟವು 1.943 ದಶಲಕ್ಷ ಟನ್‌ಗಳಿಗೆ ಇಳಿದಿದೆ. ದೇಶದಲ್ಲಿ ಹೆಚ್ಚು ಬಳಕೆಯಾಗುವ ಇಂಧನ ಡೀಸೆಲ್ ಸಹ ಶೇ. 25.9ರಷ್ಟು ತಗ್ಗಿ 4.982 ದಶಲಕ್ಷ ಟನ್‌ಗಳಿಗೆ ತಲುಪಿದೆ. ಅಂತೆಯೇ ಎಟಿಎಫ್ ಮಾರಾಟ 4,63,000 ಟನ್‌ಗಳಿಗೆ ಇಳಿದಿದೆ.

ABOUT THE AUTHOR

...view details