ಕರ್ನಾಟಕ

karnataka

ಫೆಬ್ರವರಿಯಲ್ಲಿ ಪ್ರಯಾಣಿಕರ ವಾಹನಗಳ ಮಾರಾಟ ಶೇ 10ರಷ್ಟು ಏರಿಕೆ: ವಾಣಿಜ್ಯ ವಾಹನ ಎಷ್ಟು ಗೊತ್ತೇ?

By

Published : Mar 9, 2021, 7:39 PM IST

1,481 ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್‌ಟಿಒ) 1,274 ರಿಂದ ವಾಹನ ನೋಂದಣಿ ಡೇಟಾ ಸಂಗ್ರಹಿಸಿದ ಫೆಡರೇಷನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (ಎಫ್‌ಎಡಿಎ), ಪಿವಿ ಮಾರಾಟವು 2020ರ ಫೆಬ್ರವರಿಯಲ್ಲಿ 2,29,734 ಯುನಿಟ್‌ಗಳಷ್ಟಿತ್ತು.

Passenger vehicle
Passenger vehicle

ನವದೆಹಲಿ: ಫೆಬ್ರವರಿಯಲ್ಲಿ ಪ್ರಯಾಣಿಕರ ವಾಹನ (ಪಿವಿ) ಚಿಲ್ಲರೆ ಮಾರಾಟವು ಕಳೆದ ವರ್ಷಕ್ಕಿಂತ ಶೇ10.59ರಷ್ಟು ಏರಿಕೆ ಕಂಡು 2,54,058 ಯುನಿಟ್‌ಗಳಿಗೆ ತಲುಪಿದೆ ಎಂದು ಆಟೋಮೊಬೈಲ್ ವಿತರಕರ ಸಂಸ್ಥೆ ಎಫ್‌ಡಿಎ ತಿಳಿಸಿದೆ.

1,481 ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್‌ಟಿಒ) 1,274 ರಿಂದ ವಾಹನ ನೋಂದಣಿ ಡೇಟಾ ಸಂಗ್ರಹಿಸಿದ ಫೆಡರೇಷನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (ಎಫ್‌ಎಡಿಎ), ಪಿವಿ ಮಾರಾಟವು 2020ರ ಫೆಬ್ರವರಿಯಲ್ಲಿ 2,29,734 ಯುನಿಟ್‌ಗಳಷ್ಟಿತ್ತು.

2020ರ ಫೆಬ್ರವರಿಯಲ್ಲಿ 13,00,364 ಯುನಿಟ್‌ಗಳಿಗೆ ಹೋಲಿಸಿದರೆ ದ್ವಿಚಕ್ರ ಮಾರಾಟವು ಕಳೆದ ತಿಂಗಳು ಶೇ 16.08ರಷ್ಟು ಕುಸಿದು 10,91,288ಕ್ಕೆ ತಲುಪಿದೆ. ವಾಣಿಜ್ಯ ವಾಹನಗಳ ಮಾರಾಟವೂ ಸಹ 29.53ರಷ್ಟು ಕುಸಿದು 59,020 ಯುನಿಟ್‌ಗಳಿಗೆ ತಲುಪಿದ್ದು, ಒಂದು ವರ್ಷದ ಹಿಂದೆ 83,751 ಯುನಿಟ್‌ಗಳಷ್ಟಿತ್ತು.

ಇದನ್ನೂ ಓದಿ: ಈ ಎರಡು ದಿನಗಳ ಮುಷ್ಕರಕ್ಕೆ ಬ್ಯಾಂಕ್​ ಸೇವೆ ಬಂದ್: ನಿಮ್ಮ ಹಣಕಾಸಿನ ಕೆಲಸ ಮುಗಿಸಿಕೊಳ್ಳಿ..

ತ್ರಿಚಕ್ರ ವಾಹನ ಮಾರಾಟವು ಕಳೆದ ತಿಂಗಳು ಶೇ 49.65ರಷ್ಟು ಕುಸಿದು, 33,319ಕ್ಕೆ ತಲುಪಿದ್ದು, ಹಿಂದಿನ ವರ್ಷ 66,177 ಯುನಿಟ್ ಮಾರಾಟವಾಗಿತ್ತು. ಟ್ರ್ಯಾಕ್ಟರ್ ಮಾರಾಟವು ಕಳೆದ ತಿಂಗಳು 61,351 ಯುನಿಟ್ ಆಗಿದ್ದು, ಈ ಹಿಂದಿನ ವರ್ಷದ ಇದೇ ಅವಧಿಯಲ್ಲಿ 51,602 ಯುನಿಟ್ ಮಾರಾಟ ಆಗಿದ್ದವು. ಟ್ರ್ಯಾಕ್ಟರ್ ಮಾರಾಟವು ಶೇ 18.89ರಷ್ಟು ಏರಿಕೆಯಾಗಿದೆ.

ABOUT THE AUTHOR

...view details