ಕರ್ನಾಟಕ

karnataka

ETV Bharat / business

ವಿದೇಶಿ ಬಂಡವಾಳದ ಭಾರಿ ಹೊರ ಹರಿವು... ಕಾರಣವೇನು?

2018-19ರ ಹಣಕಾಸು ವರ್ಷದಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು ಇಕ್ವಿಟಿ​ ಷೇರು ಹಾಗೂ ಬ್ಯಾಂಡ್ ಮಾರುಕಟ್ಟೆಯಿಂದ ಕ್ರಮವಾಗಿ ₹ 1,629 ಕೋಟಿ ಮತ್ತು ₹ 42,951 ಕೋಟಿಯಷ್ಟು ಹಿಂತೆಗೆದುಕೊಂಡಿದ್ದಾರೆ. ಇದರ ಒಟ್ಟು ನಿವ್ವಳ ಹೊರಹರಿವು ₹ 44,580 ಕೋಟಿಯಷ್ಟಿದೆ ಎಂದು ಇತ್ತೀಚಿನ ಅಂಕಿಅಂಶಗಳು ತಿಳಿಸುತ್ತವೆ.

ಎಫ್​ಪಿಐ

By

Published : Mar 31, 2019, 11:03 PM IST

ನವದೆಹಲಿ:ಕಳೆದ ಎರಡು ತಿಂಗಳ ಅವಧಿಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್​ಪಿಐ) ದೇಶಿ ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ ನಿಧಿ ಹೂಡಿಕೆ ಮಾಡಿದ್ದರೂ 2018-19ರಲ್ಲಿ ವಿದೇಶಿ ಬಂಡವಾಳದಲ್ಲಿ ಹೊರ ಹರಿವು ಹೆಚ್ಚಳ ಕಂಡುಬಂದಿದೆ.

ದೇಶಿ ಹಣಕಾಸು ಮಾರುಕಟ್ಟೆಯ ನಿವ್ವಳ ಆಧಾರದ ಮೇಲೆ ₹ 44,500 ಕೋಟಿಯಷ್ಟು ದೇಶಿ ಮಾರುಕಟ್ಟೆಯಿಂದ ಬಂಡವಾಳ ಹೊರ ಹೋಗಿದೆ. ಅಮೆರಿಕ ಫೆಡರಲ್​​ ರಿಸರ್ವ್​ ಬಡ್ಡಿ ದರದ ಹೆಚ್ಚಳ, ರೂಪಾಯಿ ಮೌಲ್ಯ ಕುಸಿತ, ಕಚ್ಚಾ ತೈಲ ಬೆಲೆ ಏರಿಕೆ, ಚಾಲ್ತಿ ಖಾತೆಯ ಕೊರತೆ, ಹಣಕಾಸಿನ ಕೊರತೆ, ಅಮೆರಿಕ- ಚೀನಾ ನಡುವಿನ ವಾಣಿಜ್ಯ ಸಮರ, ಉದಯೋನ್ಮುಖ ಮಾರುಕಟ್ಟೆಗಳ ಏರಿಳಿತ ಸೇರಿದಂತೆ ಇತರೆ ಜಾಗತಿಕ ಮತ್ತು ದೇಶಿ ಕಾರಣಗಳಿಂದ ಬಂಡವಾಳ ಹೊರಹೋಗಿದೆ ಎಂದು ಹೂಡಿಕೆ ತಜ್ಞರು ಅಂದಾಜಿಸಿದ್ದಾರೆ.

2018-19ರ ಹಣಕಾಸು ವರ್ಷದಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು ಇಕ್ವಿಟಿ ಷೇರು ಹಾಗೂ ಬ್ಯಾಂಡ್ ಮಾರುಕಟ್ಟೆಯಿಂದ ಕ್ರಮವಾಗಿ ₹ 1,629 ಕೋಟಿ ಮತ್ತು ₹ 42,951 ಕೋಟಿಯಷ್ಟು ಹಿಂತೆಗೆದುಕೊಂಡಿದ್ದಾರೆ. ಇದರ ಒಟ್ಟು ನಿವ್ವಳ ಹೊರಹರಿವು ₹ 44,580 ಕೋಟಿಯಷ್ಟಿದೆ ಎಂದು ಇತ್ತೀಚಿನ ಅಂಕಿಅಂಶಗಳು ತಿಳಿಸುತ್ತವೆ.

ಕಳೆದ ಆರ್ಥಿಕ ವರ್ಷದಲ್ಲಿ ಎಫ್​ಪಿಐಗಳು ಇಕ್ವಿಟ್​ ಮತ್ತು ಕ್ರೆಡಿಟ್​ ಮಾರುಕಟ್ಟೆಯಲ್ಲಿ ಕ್ರಮವಾಗಿ ₹ 25,634 ಕೋಟಿ ಹಾಗೂ ₹ 1,19,035 ಕೋಟಿ ಸೇರಿ ಒಟ್ಟು ₹ 1,44,669 ನಿಧಿ ಹೂಡಿದ್ದರು. ಎರಡು ವರ್ಷಗಳ ಬಳಿಕ ಯಥೇಚ್ಛವಾಗಿ ವಿದೇಶಿ ಬಂಡವಾಳ ಹರಿದು ಬರುತ್ತಿತ್ತು. 2016-17 ಹಾಗೂ 2017-18ರಲ್ಲಿ ಅನುಕ್ರಮವಾಗಿ ₹ 48,411 ಕೋಟಿ ಮತ್ತು ₹ 1,44,682 ಕೋಟಿಯಷ್ಟು ಹರಿದು ಬಂದಿತ್ತು.

ಜಾಗತಿಕ ಹಾಗೂ ದೇಶಿಯ ಆರ್ಥಿಕ ನೀತಿಗಳಿಂದ 2018-19ರ ಸಾಲಿನಲ್ಲಿ ಇಕ್ವಿಟಿ ಮತ್ತು ಕ್ರೆಡಿಟ್ ಮಾರುಕಟ್ಟೆಯಿಂದ ಬಂಡವಾಳ ಹೊರ ಹೋಗುತ್ತಿದೆ ಎಂದು ಬಜಾಜ್ ಕ್ಯಾಪಿಟಲ್ ಹೂಡಿಕೆಯ ಹಿರಿಯ ತಜ್ಞ ಅಲೋಕ್ ಅಗರ್​ವಾಲ್ ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details