ನವದೆಹಲಿ:ಲಾಕ್‌ಡೌನ್ ವೇಳೆ, ರೋಗಿಗಳಿಗೆ ಸುಲಭವಾಗಿ ಔಷಧ ದೊರೆಯುವಂತೆ ಆಗಲು ವಿವಿಧ ಜನೌಷಧ ಕೇಂದ್ರಗಳು ವಾಟ್ಸ್ಆ್ಯಪ್ ಮತ್ತು ಇ-ಮೇಲ್ ಮೂಲಕ ಔಷಧಗಳ ಆರ್ಡರ್ ಸ್ವೀಕರಿಸುತ್ತಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ವಾಟ್ಸ್ಆ್ಯಪ್, ಇ-ಮೇಲ್ ಮುಖೇನ ಜನೌಷಧ ಖರೀದಿಗೆ ಅವಕಾಶ
ಪ್ರಸ್ತುತ, ದೇಶದ 726 ಜಿಲ್ಲೆಗಳಲ್ಲಿ 6,300ಕ್ಕೂ ಅಧಿಕ ಪ್ರಧಾನ ಮಂತ್ರಿ ಭಾರತೀಯ ಜನೌಷಧ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಜನೌಷಧಿ
ಅಗತ್ಯವಿರುವವರಿಗೆ ಅವಶ್ಯಕ ಔಷಧಗಳನ್ನು ವೇಗವಾಗಿ ತಲುಪಿಸಲು ಅನೇಕ ಪಿಎಂಬಿಜೆಕೆಗಳು ವಾಟ್ಸ್ಆ್ಯಪ್ ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಸೇರಿದಂತೆ ಇತರ ಆಧುನಿಕ ಸಂವಹನ ಸಾಧನಗಳನ್ನು ಬಳಸುತ್ತಿರುವುದು ಹೃದಯಸ್ಪರ್ಶಿಯಾಗಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
ಈ ಔಷಧಗಳು ಸರಾಸರಿ ಶೇ 50 ರಿಂದ ಶೇ 90ರಷ್ಟು ಅಗ್ಗವಾಗಿವೆ. ಬ್ರಾಂಡೆಡ್ ವಿಭಾಗಗಳಲ್ಲಿ ಕ್ಯಾನ್ಸರ್ನ ಕೆಲವು ಔಷಧಗಳು 6,500 ರೂ.ವರೆಗೆ ವೆಚ್ಚವಾಗುತ್ತವೆ. ಇವು ಜನೌಷಧ ಕೇಂದ್ರಗಳಲ್ಲಿ 850 ರೂ. ದರದಲ್ಲಿ ಲಭ್ಯವಿದೆ.