ನವದೆಹಲಿ:ಭಾರತ ಸ್ಮಾರ್ಟ್ ಫೋನ್ ಮಾರುಕಟ್ಟೆಯು ಪ್ರಸಕ್ತ ಆರ್ಥಿಕ ವರ್ಷದ 3ನೇ ತ್ರೈಮಾಸಿಕದಲ್ಲಿ ಎರಡಂಕಿಯ ಬೆಳವಣಿಗೆ ದಾಖಲಿಸಿದ್ದು, ಶೇ. 14ರಷ್ಟು ( ಕಳೆದ ವರ್ಷಕ್ಕಿಂತ) ಬೆಳವಣಿಗೆ ಜತೆಗೆ ಗರಿಷ್ಠ ಮಟ್ಟ ತಲುಪಿದೆ ಎಂದು ಇತ್ತೀಚಿನ ವರದಿಯೊಂದು ತಿಳಿಸಿದೆ.
ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಫೀಚರ್ ಫೋನ್ ಅಲ್ಪ ಪ್ರಮಾಣದಲ್ಲಿ ಬೆಳವಣಿಗೆ ಕಂಡಿದೆ. ಫೋನ್ ಮಾರುಕಟ್ಟೆ ಬೆಲೆ ಪಿರಮಿಡ್‌ನ ಕೆಳಭಾಗದ ಗ್ರಾಹಕರ ಮೇಲೆ ಸಾಂಕ್ರಾಮಿಕವು ತೀವ್ರವಾಗಿ ಪರಿಣಾಮ ಬೀರಲಿದೆ ಎಂದು ವರದಿ ಹೇಳಿದೆ.
ಕೈಗೆಟುಕುವ ದರದಿಂದ ಮಧ್ಯಮ ಹಂತದ ಪ್ರೀಮಿಯಂ ವಿಭಾಗದ ತನಕ ಸ್ಯಾಮ್‌ಸಂಗ್ ಸ್ಮಾರ್ಟ್ ಮೊಬೈಲ್ ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ವ್ಯಾಪಕ ಬೆಳವಣಿಗೆ ದಾಖಲಿಸಿದೆ.
2020ರ 3ನೇ ತ್ರೈಮಾಸಿಕದಲ್ಲಿ ಸ್ಮಾರ್ಟ್ ಫೋನ್ ಮಾರುಕಟ್ಟೆಯು 2020ರ ಮೊದಲಾರ್ಧದಲ್ಲಿ ನಡೆಯುತ್ತಿರುವ ಸಾಂಕ್ರಾಮಿಕ ಸಂಬಂಧಿತ ಸವಾಲುಗಳನ್ನು ಸರಿದೂಗಿಸಿದೆ. ಮಾರುಕಟ್ಟೆಯ ಬಿಕ್ಕಟ್ಟುಗಳ ನಡುವೆಯೂ ಬೆಳೆವಣಿಗೆ ದಾಖಲಿಸಿದೆ. ದರ ಪಟ್ಟಿಯಾದ್ಯಂತ ಸ್ಮಾರ್ಟ್ ಫೋನ್ ಬ್ರಾಂಡ್ಗಳು ಸ್ಪರ್ಧಾತ್ಮಕವಾಗಿ ಯಥೇಚ್ಛ ಕೊಡುಗೆಗಳು ನೀಡಿವೆ ಎಂದು ಕೈಗಾರಿಕಾ ಗುಪ್ತಚರ ಗ್ರೂಪ್ (ಐಐಜಿ) ಸಿಎಂಆರ್ನ ವಿಶ್ಲೇಷಕ ಅಮಿತ್ ಶರ್ಮಾ ಹೇಳಿದ್ದಾರೆ.
ಎಚ್ಚರಿಕೆಯ ವಿವೇಚನೆಯ ಜತೆಗೆ ಖರ್ಚು ಕಡಿಮೆ ಇದ್ದರೂ ಹಬ್ಬದ ಸೀಸನ್ ವೇಳೆ ಇತರ ಉತ್ಪನ್ನ ವರ್ಗಗಳನ್ನು ಮೀರಿಸುವ ಸ್ಮಾರ್ಟ್ ಫೋನ್ ಬೇಡಿಕೆಯನ್ನು ನಾವು ಅಂದಾಜಿಸಿದ್ದೇವೆ. ಹಬ್ಬದ ಪೂರ್ವ ಋತುವಿನ ಆಕ್ರಮಣಕಾರಿ ಮಾರ್ಕೆಟಿಂಗ್, ಆಕರ್ಷಕ ಪ್ರಚಾರ ಮತ್ತು ರಿಯಾಯಿತಿಗಳ ಹಿನ್ನೆಲೆಯಲ್ಲಿ ಸ್ಮಾರ್ಟ್ ಫೋನ್ ಮಾರುಕಟ್ಟೆ ಬೆಳೆಯಿತು ಎಂದು ಹೇಳಿದ್ದಾರೆ.