ಕರ್ನಾಟಕ

karnataka

ETV Bharat / business

ಕುಸಿದು ಬಿದ್ದು ಏರಿಕೆಯಾದ MCX ಚಿನ್ನ, ಬೆಳ್ಳಿ ದರ - ಗೋಲ್ಡ್ ಫ್ಯೂಚರ್

ಎಂಸಿಎಕ್ಸ್​​ನಲ್ಲಿ ಫೆಬ್ರವರಿ ಚಿನ್ನದ ಕಾಂಟ್ರಾಕ್ಟ್​​ 10 ಗ್ರಾಂ.ಗೆ 49,109 ರೂ.ಯಲ್ಲಿ ವಹಿವಾಟು ನಡೆಸುತ್ತಿದ್ದು, ಇದು ಹಿಂದಿನ ಅಂತ್ಯದ 142 ರೂ. ಹೆಚ್ಚಳವಾಗಿದೆ. ಬೆಳ್ಳಿಯ ಕಾಂಟ್ರಾಕ್ಟ್​ ದರ ಪ್ರತಿ ಕೆಜಿಗೆ 64,659 ರೂ.ಗಳಲ್ಲಿ ವಹಿವಾಟು ನಡೆಸಿ 428 ರೂ. ಏರಿಕೆಯಾಗಿದೆ.

gold
ಚಿನ್ನ

By

Published : Jan 11, 2021, 5:09 PM IST

ಮುಂಬೈ: ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಕುಸಿದ ನಂತರ ಚಿನ್ನ ಮತ್ತು ಬೆಳ್ಳಿಯ ಫ್ಯೂಚರ್ ದರವು ದಿನದ ಕನಿಷ್ಠ ಮಟ್ಟದಿಂದ ಚೇತರಿಸಿಕೊಂಡಿದೆ.

ಎಂಸಿಎಕ್ಸ್​​ನಲ್ಲಿ ಫೆಬ್ರವರಿ ಚಿನ್ನದ ಕಾಂಟ್ರಾಕ್ಟ್ 10 ಗ್ರಾಂ.ಗೆ 49,109 ರೂ.ಯಲ್ಲಿ ವಹಿವಾಟು ನಡೆಸುತ್ತಿದ್ದು, ಇದು ಹಿಂದಿನ ಅಂತ್ಯದ 142 ರೂ. ಹೆಚ್ಚಳವಾಗಿದೆ. ಬೆಳ್ಳಿಯ ಕಾಂಟ್ರಾಕ್ಟ್ ದರ ಪ್ರತಿ ಕೆಜಿಗೆ 64,659 ರೂ.ಗಳಲ್ಲಿ ವಹಿವಾಟು ನಡೆಸಿ 428 ರೂ. ಏರಿಕೆಯಾಗಿದೆ.

ಲೋಹಗಳ ಫ್ಯೂಚರ್ ದರವು ಜನವರಿ 8ರಂದು ಕುಸಿದ ನಂತರ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಅಮೆರಿಕ ಡಾಲರ್ ವೃದ್ಧಿಗೊಂಡಿತು. ತತ್ಪರಿಣಾಮ ಮುಂಜಾನೆಯ ಅನಿಶ್ಚಿತತೆಯಿಂದ ಹೊರ ಬಂದು ದರ ಏರಿಕೆಯಾಗಿದೆ.

ಇದನ್ನೂ ಓದಿ: ಮಹಿಳೆಯರಿಂದ 16,000 ಕಿ.ಮೀ. ತಡೆರಹಿತಿ​ ಫ್ಲೈಟ್ ಚಾಲನೆ: ನೀವು ದೇಶದ ಹೆಮ್ಮೆ- ರಾಹುಲ್ ಗಾಂಧಿ

ಅಮೆರಿಕದ ಕೃಷಿಯೇತರ ವೇತನದಾರರ ದತ್ತಾಂಶ ನಿರಾಶೆಗೊಳಿಸಿತು. ಸ್ಥಿರವಾದ ಅಮೆರಿಕ ಡಾಲರ್ ಸೂಚ್ಯಂಕದ ನಡುವೆ ಚಿನ್ನ ಮತ್ತು ಬೆಳ್ಳಿ ಕುಸಿದವು. ಅಮೆರಿಕದ 10 ವರ್ಷಗಳ ಬಾಂಡ್ ಇಳುವರಿ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿದ್ದು, ಹೆಚ್ಚಿದ ಹಣದುಬ್ಬರ ನಿರೀಕ್ಷೆಗಳಿವೆ ಎಂದು ಕೋಟಕ್ ಸೆಕ್ಯುರಿಟೀಸ್‌ನ ವಿ.ಪಿ. ರವೀಂದ್ರ ರಾವ್ ಹೇಳಿದರು.

ತುರ್ತು ಬಳಕೆಗಾಗಿ ಇಂಗ್ಲೆಂಡ್​ನ ಮಾಡರ್ನಾ ಲಸಿಕೆಯನ್ನು ಕೋವಿಡ್ ಸೋಂಕಿನ ವಿರುದ್ಧ ಅನುಮೋದಿಸಿದ್ದು ಬೆಲೆಗಳ ಮೇಲೆ ಪ್ರಭಾವ ಬೀರಿದೆ. ಅಧಿಕಾರದ ಸುಗಮ ಪರಿವರ್ತನೆಯ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಹೆಚ್ಚುತ್ತಿರುವ ಬಾಂಡ್ ಇಳುವರಿಯಿಂದಾಗಿ ಅಲ್ಪಾವಧಿಯ ಚಲನೆಗಳು ಅಸ್ಥಿರವಾಗಿವೆ ಎಂದರು.

ABOUT THE AUTHOR

...view details